ಪೆರೋಲ್‌ಗಾಗಿ ಲಂಚ; ಬೆಂಗಳೂರು ಜೈಲು ಅಧೀಕ್ಷಕ ಬಂಧನ

ಬೆಂಗಳೂರು, ಅಕ್ಟೋಬರ್ 07 : ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಣ ಕೊಟ್ಟರೆ ಸೌಲಭ್ಯಗಳು ಸಿಗುತ್ತವೆ ಎಂಬ ಆರೋಪವಿತ್ತು. ಕೈದಿಗೆ ಪೆರೋಲ್ ನೀಡಲು 10 ಸಾವಿರ ಲಂಚ ಕೇಳಿದ್ದ ಅಧಿಕಾರಿಯನ್ನು ಎಸಿಬಿ ಬಂಧಿಸಿದೆ.

ಕೇಂದ್ರ ಕಾರಾಗೃಹದ ಅಧೀಕ್ಷಕ ಜಯರಾಂ ಬಂಧಿತ ಅಧಿಕಾರಿ. ಅಪರಾಧಿಗೆ ಪೆರೋಲ್ ನೀಡಲು 10 ಸಾವಿರ ರೂ. ಲಂಚವನ್ನು ಕೇಳಿದ್ದರು. 5 ಸಾವಿರ ರೂ. ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತುಮಕೂರು ಮೂಲದ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. 14 ವರ್ಷಗಳ ಶಿಕ್ಷೆಯನ್ನು ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಪೆರೋಲ್‌ಗಾಗಿ ಕುಟುಂಬದವರು ಅರ್ಜಿ ಸಲ್ಲಿಸಿದ್ದರು. ಆದರೆ, ಜೈಲು ಅಧೀಕ್ಷಕ ಲಂಚ ನೀಡುವಂತೆ ಕೇಳಿದ್ದ.

ACB Arrested Jail Superintendent For Taking Bribe

ಹಣ ನೀಡಲು ಒಪ್ಪದ ಕೈದಿ ಪತ್ನಿಗೆ ಈ ವಿಚಾರವನ್ನು ತಿಳಿಸಿದ್ದ. ಆಕೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಳು. ಜಯರಾಂ 5 ಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಹಣದ ಸಮೇತ ಬಂಧಿಸಿದ್ದಾರೆ.

ತಹಶೀಲ್ದಾರ್ ಎಸಿಬಿ ಬಲೆಗೆ : 7 ಲಕ್ಷ ರೂ. ಲಂಚ ಪಡೆಯುವಾಗ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದ ಘಟನೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಮಂಗಳವಾರ ನಡೆದಿತ್ತು. ಅಜಂ ಪಾಷಾ ಅವರ ಬಳಿಕ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಮಹಿಳಾ ತಹಶೀಲ್ದಾರ್, 5 ಲಕ್ಷ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+