Get Updates
Get notified of breaking news, exclusive insights, and must-see stories!

ರಾಮಚಂದ್ರಾಪುರ ಮಠದ ಗೋ ರಕ್ಷಣೆಯ 'ಅಭಯಾಕ್ಷರ'ಕ್ಕೆ ಗಣ್ಯರ ಬೆಂಬಲ

ಬೆಂಗಳೂರು, ನವೆಂಬರ್ 21: ಗೋಹತ್ಯೆ ನಿಷೇಧಕ್ಕ ಆಗ್ರಹಿಸಿ ರಾಮಚಂದ್ರಾಪುರ ಮಠ ಆರಂಭಿಸಿರುವ 'ಅಭಯಾಕ್ಷರ' ಅಭಿಯಾನಕ್ಕೆ ಹತ್ತು ಹಲವು ಗಣ್ಯರು ತಮ್ಮ ಕೈಜೋಡಿಸಿದ್ದಾರೆ. ಗೋ ರಕ್ಷಣೆಗೆ ಬೆಂಬಲ ನೀಡುವವರ ಸಹಿ ಸಂಗ್ರಹಿಸಿ, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿ, ಗೋಹತ್ಯೆ ನಿಷೇಧದ ಬೇಡಿಕೆ ಇಡುವುದು ಅಭಯಾಕ್ಷರದ ಮುಖ್ಯ ಉದ್ದೇಶ.

ಈ ಅಭಿಯಾನಕ್ಕೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ಸಿಟಿ ರವಿ, ಗೃಹಮಂತ್ರಿ ರಾಮಲಿಂಗಾ ರೆಡ್ಡಿ, ಧರ್ಮಸ್ಥಳದ ವೀರೇಮದ್ರ ಹೆಗ್ಗಡೆ, ಬ್ಯಾಡ್ಮಿಂಟನ್ ತಾರೆ ಗೋಪಿಚಂದ್ ಸೇರಿದಂತೆ ಹಲವು ಗಣ್ಯರು ಸಹಿ ಮಾಡಿದ್ದಾರೆ.

ಈಗಾಗಲೇ ಸುಮಾರು 11 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಲಾಗಿದ್ದು, ಮಠದ ಅನುಯಾಯಿಗಳು ಊರೂರಿಗೆ ತೆರಳಿ ಸಹಿ ಗೋವಿನ ಮಹತ್ವ ತಿಳಿಹೇಳಿ, ಅವುಗಳ ರಕ್ಷಣೆ ನಮ್ಮ ಕರ್ತವ್ಯವೆನ್ನುತ್ತ ಸಹಿ ಸಂಗ್ರಹಿಸುತ್ತಿದ್ದಾರೆ. ಸಾಮಾಜಿಕ ಮಾದ್ಯಮಗಳಲ್ಲೂ ಅಭಯಾಕ್ಷರ "ಗೋಹತ್ಯೆ ನಿಷೆಧ"ದ ಕುರಿತು ಧ್ವನಿ ಎತ್ತಿದೆ. #ProtectWithPen ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟ್ಟರ್ ನಲ್ಲೂ ಈ ಅಭಿಯಾನ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಗೋಹತ್ಯೆ ನಿಷೇಧಕ್ಕೆ ಬೆಂಬಲ ನೀಡುವವರೆಲ್ಲ ತಮ್ಮ ಅಮೂಲ್ಯ ಸಹಿಯನ್ನು ನೀಡಿ, ಸರ್ಕಾರದ ಮೇಲೆ ಗೋ ಹತ್ಯೆ ನಿಷೇದದ ಒತ್ತಡ ಹೇರುವಂತೆ ಮಾಡಲು ಮಠ ಕೋರಿದೆ.

ಯಡಿಯೂರಪ್ಪ ಬೆಂಬಲ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಅಭಯಾಕ್ಷರಕ್ಕೆ ತಮ್ಮ ಸಹಿಯನ್ನೂ ನೀಡುವ ಜೊತೆಗೆ, ತಮ್ಮ ಕ್ಷೇತ್ರದ ಜನರಲ್ಲಿಯೂ ಅಭಯಾಕ್ಷರಕ್ಕೆ ಸಹಿ ನೀಡಲು ಕೋರುವುದಾಗಿ ಅಭಯ ನೀಡಿದರು.

ಸಿಟಿ ರವಿ ಅಭಯಾಕ್ಷರ

ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಅವರು ಅಭಯಾಕ್ಷರಕ್ಕೆ ಸಹಿ ನೀಡಿದರು. ಜೊತೆಗೆ ತಮ್ಮ ಕ್ಷೇತ್ರದ ಜನರಲ್ಲಿರ ಸಹಿಯನ್ನೂ ಕಾರ್ಯಕರ್ತರ ಮೂಲಕ ಸಂಗ್ರಹಿಸುವುದಾಗಿ ಹೇಳಿದರು.

ಕೈಜೋಡಿಸಿದ ಗೋಪಿಚಂದ್

ಬ್ಯಾಡ್ಮಿಂಟನ್ ತಾರೆ ಗೋಪಿಚಂದ್ ಅವರು ಸ್ವ ಇಚ್ಛೆಯಿಂದ ಅಭಯಾಕ್ಷರಕ್ಕೆ ಸಹಿ ಮಾಡಿದ್ದಾರೆ. ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಆಶೀರ್ವಾದ ಪಡೆದ ಅವರು, ಅಭಯಾಕ್ಷರಅಭಿಯಾನಕ್ಕೆ ತಾವೂ ಕೈಜೋಡಿಸುವುದಾಗಿ ಹೇಳಿದ್ದಾರೆ.

ದೇವಾಲಯಗಳಲ್ಲಿ ಅಭಯಾಕ್ಷರ

ರಾಮಚಂದ್ರಾಪುರ ಮಠದ ಭಕ್ತರು ಬೇರೆ ಬೇರೆ ಊರು, ದೇವಾಲಯಗಳಿಗೆ ತೆರಳಿ ಅಭಯಾಕ್ಷರಕ್ಕೆ ಸಹಿ ಸಂಗ್ರಹಿಸುತ್ತಿದ್ದಾರೆ. ಪ್ರತಿದಿನವೂ ಬೇರೆ ಬೇರೆ ದೇವಾಲಯಕ್ಕೆ ತೆರಳಿ ಅಲ್ಲಿಗೆ ಬರುವ ಭಕ್ತರ ಬಳಿ ಅಭಯಅಕ್ಷರದ ಮಹತ್ವ ತಿಳಿಸಿ, ಸಹಿಸಂಗ್ರಹಿಸುತ್ತಿದ್ದಾರೆ.

ಮುಸ್ಲಿಮರಿಂದಲೂ ಪ್ರೋತ್ಸಾಹ!

ಅಭಯಾಕ್ಷರ ಅಭಿಯಾನಕ್ಕೆ ಮುಸ್ಲಿಂ, ಕ್ರೈಸ್ತ ಎನ್ನದೆ ಹಲವರು ಮತಭೇದ ಮರೆತು ಬೆಂಬಲ ನೀಡಿದ್ದಾರೆ. ದೇಶೀ ಹಸುಗಳ ರಕ್ಷಣೆಗಾಗಿ ಅಭಯಾಕ್ಷರ ಅಭಿಯಾನ ಎನ್ನುತ್ತಿದ್ದಂತೆಯೇ ತುಂಬುಹೃದಯದಿಂದ ಬೆಂಬಲ ನೀಡಿ, ತಮ್ಮ ಸಹಿಯನ್ನೂ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+