AAP Candidate List: ಬಾಕಿ ಉಳಿದಿದ್ದ 28 ಕ್ಷೇತ್ರಗಳಿಂದ ಯಾರಿಗೆಲ್ಲ ಟಿಕೆಟ್ ಸಿಕ್ಕಿದೆ, ತಿಳಿಯಿರಿ
ಬೆಂಗಳೂರು, ಏಪ್ರಿಲ್ 10: ವಿಧಾನಸಭಾ ಚುನಾವಣೆಗೆ ಸಂಬಂಧ ಆಮ್ ಆದ್ಮಿ ಪಕ್ಷವು ಅಭ್ಯರ್ಥಿಗಳ ಕೊನೆಯ (3ನೇ ಪಟ್ಟಿ) ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿತು. ಈ ಮೂಲಕ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಎಎಪಿಯ 224 ಅಭ್ಯರ್ಥಿಗಳ ಘೋಷಣೆ ಆದಂತಾಗಿದೆ.
ಬೆಂಗಳೂರಿನಲ್ಲಿನ ಆಮ್ ಆದ್ಮಿ ಪಾರ್ಟಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಎಪಿ ರಾಜ್ಯಾದ್ಯಕ್ಷ ಫೃಥ್ವಿ ರೆಡ್ಡಿ ಅವರು ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು. ನಮ್ಮ ಅತಿ ಹೆಚ್ಚು ಅಭ್ಯರ್ಥಿಗಳನ್ನು ಘೊಷಣೆ ಮಾಡಿದ್ದಲ್ಲದೇ 168 ಕ್ಷೇತ್ರಗಳ ಜನತೆಗೆ ಒಂದು ಅತ್ಯುತ್ತಮ ಮತ್ತು ಪ್ರಾಮಾಣಿಕ ಆಯ್ಕೆಯನ್ನು ನೀಡಿದೆ. ಅತಿ ಹೆಚ್ಚು ರೈತರು, ಯುವಕರು ಮತ್ತು ಮಹಿಳಾ ಅಭ್ಯರ್ಥಿಗಳನ್ನು ಇರುವುದು ನಮ್ಮ ಪಕ್ಷದಲ್ಲೇ ಎಂದು ಅವರು ಹೇಳಿದರು.

ಎಎಪಿಯಿಂದ ಚುನಾವಣಾ ಕಣಕ್ಕೆ ಇಳಿಯುವವರ ಪೈಕಿ ಬಹುತೇಕ ಮಂದಿಯ ಸರಾಸರಿ ವಯಸ್ಸು 47. ಒಟ್ಟು168 ಅಭ್ಯರ್ಥಿಗಳ ಪೈಕಿ 16 ಮಂದಿ ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಇಂಜಿನಿಯರ್ ಗಳು, ಡಾಕ್ಟರೇಟ್ ಹೊಂದಿರುವ ಅಭ್ಯರ್ಥಿಗಳು 5, ಸ್ನಾತಕೋತ್ತರ ಪದವಿ ಪಡೆದವರು 41 ಹಾಗೂ ಪದವಿ ಪಡೆದ 82 ಅಭ್ಯರ್ಥಿಗಳನ್ನು ಎಎಪಿ ಆಯ್ಕೆ ಮಾಡಿದೆ.
ಇನ್ನೂ ಎಎಪಿಯಂದ 28 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಅಭ್ಯರ್ಥಿಗಳ ನಡೆ, ಸದ್ಗುಣದ ಆಧಾರದಲ್ಲಿ ಎಎಪಿ ಪಕ್ಷವು ಪಂಜಾಬ್ ಮತ್ತು ದೆಹಲಿಯಲ್ಲಿ ಮಾಡಿರುವ ಕೆಲಸಗಳ ಆಧಾರದ ಮೇಲೆ ಚುನಾವಣೆಗೆ ಎದುರಿಸಲು ಸಜ್ಜಾಗಿದೆ.
ಇಂದು ರಾಜ್ಯ ಚುನಾವಣಾ ಉಸ್ತುವಾರಿ @dilipkpandey ಅವರ ನೇತೃತ್ವದಲ್ಲಿ , ಪ್ರಚಾರ ಸಮಿತಿ ಅಧ್ಯಕ್ಷರಾದ @DrMMChandru ಅವರ ಉಪಸ್ಥಿತಿಯಲ್ಲಿ, ಮಾಧ್ಯಮ ಮತ್ತು ಸಂವಹನ ಉಸ್ತುವಾರಿ @brijeshkalappa ಅವರಿಂದ 2023 ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ @aapkaprithvi pic.twitter.com/0rfJdWLARu
— AAP Karnataka (@AAPKarnataka) April 10, 2023
ಎಎಪಿ 3ನೇ ಪಟ್ಟಿಯ ಪ್ರಮುಖ ಹೆಸರು ಹೀಗಿದೆ:
* ಶಿಕಾರಿಪುರ - ಚಂದ್ರಕಾಂತ ರೇವಣಕರ
* ಜಯನಗರ - ಮಹಾಲಕ್ಷ್ಮೀ
* ಗಾಂಧಿನಗರ - ಗೋಪಾನಾಥ್
* ಅರಕಲಗೂಡು - ಜವರೇಗೌಡ
* ನಿಪ್ಪಾಣಿ - ರಾಜೇಶ್ ಅಣ್ಣಸಾಹೇಬ್ ಬಸವಣ್ಣ
* ಬೆಳಗಾವಿ ಉತ್ತರ - ರಾಜಕುಮಾರ್ ಟೋಪಣ್ಣನವರ
* ಸಿಂದಗಿ -ಮುರಿಗೆಪ್ಪಗೌಡ,
* ಬೀದರ್ - ಗುಲಾಂ ಅಲಿ
* ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಅರವಿಂದ ಎಂ
* ಚಿಕ್ಕಬಳ್ಳಾಪುರ - ನಂದಿ ಬಾಷಾ
* ಯಲಹಂಕ - ಪುಟ್ಟಣ್ಣ ಮಂಜುನಾಥ್
* ಕಡೂರು - ರಾಜೇಶ್ವರಿ ಬಿ.ಎಚ್.
* ಸರ್ವಜ್ಞ ನಗರ - ಮೊಹಮ್ಮದ್ ಇಬ್ರಾಹಿಂ
ಇವರು ಸೇರಿದಂತೆ ಹಲವು ಹೆಸರು ಮೂರನೇ ಪಟ್ಟಿಯಲ್ಲಿವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ
ಎಎಪಿ ರಾಜ್ಯಾಧ್ಯಕ್ಷರು ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ಪಕ್ಷಗಳ ವಿರುದ್ಧ ಇದೇ ವೇಳೆ ಕಿಡಿ ಕಾರಿದರು. ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರಸ್ ಮತ್ತು ವಿಶ್ವದ ಅತಿದೊಡ್ಡ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ ಪಕ್ಷ ಎರಡೂ ಕರ್ನಾಟಕ ರಾಜಕೀಯದಲ್ಲಿ ಎಎಪಿ ಇರುವುದನ್ನು ನೋಡಿ ಭಯ ಪಟ್ಟಿವೆ. ಅವರ ಶತಮಾನಗಳ ಲೂಟಿ ರಾಜಕೀಯ ಅಂತ್ಯಗೊಳ್ಳುತ್ತದೆ ಎಂಬ ದಿಗಿಲು ಅವರಲ್ಲಿದೆ ಎಂದರು.
ಎಎಪಿ ಪಕ್ಷದ ಅಭ್ಯರ್ಥಿಗಳನ್ನು ತಡೆಯಲು ಅವರು ನಾನಾ ಆಮಿಷಗಳನ್ನು ಒಡ್ಡುತ್ತಿದ್ದಾರೆ, ಬಗ್ಗದಿದ್ದಲ್ಲಿ ಹಣಬಲ ಮತ್ತು ತೋಳ್ಬಲದಿಂದ ನಮ್ಮನ್ನು ಭಯಪಡಿಸುತ್ತಿದ್ದಾರೆ. ಅವರ ಪ್ರಚಾರ ವೈಖರಿಯಲ್ಲಿ ಅಥವಾ ಅವರು ಮಾಡಿರುವ ಕೆಲಸದಲ್ಲಿ ಅವರಿಗೆ ನಂಬಿಕೆಯೇ ಇಲ್ಲದಿರುವುದರಿಂದ ನಮ್ಮ ಅಭ್ಯರ್ಥಿಗಳನ್ನು ಸುಮ್ಮನಾಗಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications