ಪುಟ್ಟಣ್ಣ ಚಿತ್ರಮಂದಿರ ಟೆಂಡರ್ ಬಿಡಿಎ ಅಕ್ರಮ
ಬೆಂಗಳೂರು, ಮಾ.6: ಬಿ ಡಿ ಎ ಮತ್ತು ಬಿ ಬಿ ಎಂ ಪಿ ಜಂಟಿ ಸಹಯೋಗದೊಂದಿಗೆ (Joint Venture)ಬೆಂಗಳೂರು ನಗರದಲ್ಲಿರುವಮಲ್ಲೇಶ್ವರಂ ಮಾರುಕಟ್ಟೆ(ಸಂಪಿಗೆ ರಸ್ತೆ) ಮತ್ತು "ಪುಟ್ಟಣ್ಣ ಕಣಗಾಲ್" ಚಿತ್ರಮಂದಿರ ಹಾಗೂ ಜಯನಗರ ಮಾರುಕಟ್ಟೆ(ಜಯನಗರ್ 4ನೇ ಬ್ಲಾಕ್)ಗಳನ್ನು ಕೆಡವಿ ಹೊಸ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲು 'ಈ-ಪ್ರೊಕ್ಯೂರ್ಮೆಂಟ್'(E-Procurement) ಮೂಲಕ ಕೆಟಿಪಿಪಿ (KTPP)ಕಾಯ್ದೆಯ ಅನ್ವಯ ಟೆಂಡರ್ ಕರೆದು ಗುತ್ತಿಗೆ ನೀಡಿದ್ದಾರೆ.
ಆದರೆ, ಗುತ್ತಿಗೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಿಯಮಬಾಹಿರ ಹಾಗೂ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದೆ ಎಂದು ಜನ ಸಾಮಾನ್ಯರ ಪಕ್ಷದ ವಕ್ತಾರ ರವಿಕೃಷ್ಣಾರೆಡ್ಡಿ ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಥಿ ನಡೆಸಿ ಆರೋಪಿಸಿದ್ದಾರೆ.
ಮಲ್ಲೇಶ್ವರಂ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಇತ್ತ ಮೊತ್ತ ಸುಮಾರು 64 ಕೋಟಿಗಳು ಹಾಗೂ ಜಯನಗರ ಮಾರುಕಟ್ಟೆಗೆ ನಿರ್ಮಾಣದ ಕಾಮಗಾರಿಗೆ ಇತ್ತ ಮೊತ್ತ ಸುಮಾರು 115 ಕೋಟಿಗಳು ಆದರೆ ಟೆಂಡರ್ ದಾರರಿಗೆ ಬಿ ಡಿ ಎ (BDA) ಪ್ರಾಧಿಕಾರದ ಸಭೆಯಲ್ಲಿ ಅನುಮೋದಿಸಿ ಅಂತಿಮವಾಗಿ ಗುತ್ತಿಗೆ ನೀಡಿರುವ ಮೊತ್ತಗಳು ಮಲ್ಲೇಶ್ವರಂ ಮಾರುಕಟ್ಟೆಗೆ 132 ಕೋಟಿಗಳು ಮತ್ತು ಜಯನಗರ ಮಾರುಕಟ್ಟೆಗೆ 252 ಕೋಟಿಗಳು.
ಕೆ ಟಿ ಪಿ ಪಿ(KTPP) ಕಾಯಿದೆಯ ಅನ್ವಯ ಯಾವುದೇ ಗುತ್ತಿಗೆ ಕರಾರು ನೀಡುವಾಗ ಟೆಂಡರ್ ದಾರ ಟೆಂಡರ್ ಮೊತ್ತಕ್ಕಿಂತ ಶೇಕಡಾ ಹತ್ತಕ್ಕಿಂತ10% ಹೆಚ್ಚು ದರ ನಮೂದಿಸಿದ್ದರೆ ಆ ಟೆಂಡರ್ ತಿರಸ್ಕರಿಸಿ ಮರು ಟೆಂಡರ್ ಕರೆಯಬೇಕು. ಇದು ಟೆಂಡರ್ ಒಪ್ಪುವ ಪ್ರಾಧಿಕಾರದ ಜವಾಬ್ದಾರಿಯಾಗುತ್ತದೆ.

ಮಲ್ಲೇಶ್ವರಂ ಮಾರುಕಟ್ಟೆ ಟೆಂಡರ್ ನಲ್ಲಿ ಒಬ್ಬನೇ ಟೆಂಡರ್ ದಾರ ಇದ್ದಾಗ್ಯೂ ಮರು ಟೆಂಡರ್ ಕರೆಯದೆ ಆ ಟೆಂಡರ್ ದಾರನ ಬಳಿಯೇ ಹೊಂದಾಣಿಕೆ ಮಾಡಿ ಟೆಂಡರ್ ಮೊತ್ತಕ್ಕಿಂತ ಮೀರಿ ಶೇಕಡಾ 106% ಅಂದರೆ 132 ಕೋಟಿ ರೂಪಾಯಿಗಳಿಗೆ ಟೆಂಡರ್ ಅನುಮೋದಿಸಿರುವುದು ಕೆ ಟಿ ಪಿ ಪಿ ಕಾನೂನಿನನ್ವಯ ತಪ್ಪು ಮತ್ತು ಇಂತಹ ನಿರ್ಣಯಕ್ಕೆ ಬಿ ಡಿ ಎ ಅಧಿಕಾರಿ ವರ್ಗದ ಬೇಜಾವ್ದಾರಿತನ ಹಾಗೂ ನಿರ್ಲಕ್ಷವೆ ಕಾರಣ ಮತ್ತು ಕಾಣದ ಕೈಗಳ ಪ್ರಭಾವ ನೆಡೆದಿರುವುದು ನಿಸ್ಸಂದೇಹ.
ಜಯನಗರದ ಮಾರುಕಟ್ಟೆ ನಿರ್ಮಾಣದ ಗುತ್ತಿಗೆಯನ್ನು ಎರಡನೇ ಬಾರಿ ಕರೆದಾಗ(2ನೇ call) ಒಬ್ಬನೇ ಗುತ್ತಿಗೆದಾರ ತಾಂತ್ರಿಕ ಬಿಡ್ ನಲ್ಲಿ ಯಶಸ್ವಿಯಾದ ತರುವಾಯ ಅದನ್ನು ಕಾನೂನ ರೀತಿಯಿಂದ ಮಾರುಕರೆಯಲು ನಿರ್ಧರಿಸಿದ ಬಿ ಡಿ ಎ ಬೋರ್ಡ್ ಇದಕ್ಕೆ ತದ್ವಿರುದ್ದದ ನಿರ್ಧಾರವನ್ನು ಮಲ್ಲೇಶ್ವರಂ ಮಾರುಕಟ್ಟೆ ಗುತ್ತಿಗೆಯಲ್ಲಿ ತೆಗೆದುಕೊಂಡಿರುವುದು ಬಲವಾದ ಸಂಶಯಕ್ಕೆ ದಾರಿಮಾಡಿ ಕೊಡುತ್ತದೆ.
ಮೂರನೇ ಬಾರಿ(3rd call) ಕರೆದ ಜಯನಗರ ಮಾರುಕಟ್ಟೆ ಟೆಂಡರ್‌ನಲ್ಲಿ ಟೆಂಡರ್ ದಾರ ಟೆಂಡರ್ ಮೊತ್ತ(115 ಕೋಟಿ)ಗಿಂತ ಬಹಳ ಹೆಚ್ಚು ಅಂದರೆ ರೂ.254 ಕೋಟಿ ನಮೂದಿಸಿದರು ಆ ಟೆಂಡರ್ ತಿರಸ್ಕರಿಸದೆ ಅದೇ ಟೆಂಡರ್ ದಾರನ ಬಳಿ ಹೊಂದಾಣಿಕೆ ಮಾಡಿ ಟೆಂಡರ್ ನ್ನು 252 ಕೋಟಿಗೆ ಅಂತಿಮಗೊಳಿಸಿರುವುದು ಆಶ್ಚರ್ಯ ಉಂಟುಮಾಡುತ್ತದೆ.
ಬೆಳಗಾವಿಯಲ್ಲಿ ಕಟ್ಟಿಸಿರುವ ಸುವರ್ಣಸೌಧಕ್ಕೆ ತಗಲಿರುವ ವೆಚ್ಚ ಪ್ರತಿ ಚದರ ಅಡಿಗೆ ರೂ 2500 ಮಾತ್ರ ಆದರೆ ಜಯನಗರ ಮಾರುಕಟ್ಟೆ ಗುತ್ತಿಗೆ ನೀಡಿರುವ ಬೆಳೆಯ ಪ್ರಕಾರ ಪ್ರತಿ ಚದರ ಅಡಿಗೆ ರೂ 5500 ಆಗುತ್ತದೆ ಬಿ ಡಿ ಎ ಈ ನಿರ್ಧಾರವನ್ನು ಸಮರ್ಥಿಸುವುದು ಅಸಾಧ್ಯವೇ ಸರಿ.
ಇಷ್ಟೆಲ್ಲಾ ದುಬಾರಿ ಗುತ್ತಿಗೆ ನೀಡಿದ ನಂತರವೂ ಮಲ್ಲೇಶ್ವರಂ ಮಾರುಕಟ್ಟೆ ಸಾಧಿಸಿರುವ ಪ್ರಗತಿ ಎರೆಡು ವರ್ಷದ ನಂತರ(ಇಡೀ ಕಾಮಗಾರಿಗೆ ನೀಡಿದ ಅವಧಿ ಮುಗಿದಿದೆ) ಕೇವಲ ಶೇಕಡಾ 4 ರಿಂದ 5 ಮತ್ತು ಜಯನಗರ ಮಾರುಕಟ್ಟೆ ಸಾಧಿಸಿರುವ ಪ್ರಗತಿ ಕೇವಲ ಶೇಕಡ 7 ರಿಂದ 8 (ಕಾಮಗಾರಿಗೆ ನೀಡಿರುವ ಅವಧಿ ಜೂನ್ 2014 ಗೆ ಮುಗಿದಿದೆ) ಒಂದಕ್ಕಿಂತ ಎರಡರಷ್ಟು ದುಬಾರಿ ಗುತ್ತಿಗೆ ನೀಡಿ ಸಾರ್ವಜನಿಕರ ಹಣ ಪೋಲು ಮಾಡಲಾಗಿದೆ.
ಆಮ್ ಆದ್ಮಿ ಪಕ್ಷ ಕರ್ನಾಟಕ ಈ ಬಿ ಡಿ ಎ (BDA) ಮತ್ತು ಸರಕಾರದ ನಿರ್ಧಾರಗಳನ್ನು ಖಂಡಿಸುತ್ತಾ, ಕೆ ಟಿ ಪಿ ಪಿ (KTPP) ಅನ್ವಯ ಕಾನೂನು ಪರಿಪಾಲಿಸದೇ ಸಾರ್ವಜನಿಕರ ಹಣ ಪೋಲು ಮಾಡಿರುವ ಅಧಿಕಾರಿವರ್ಗದ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ
ಇಂತಹ ಸಾರ್ವಜನಿಕ ವಿರೋಧಿ ಕೆಲಸಕ್ಕೆ ಅಂದಿನ ಬಿ ಜೆ ಪಿ ಸರಕಾರ ಜವಾಬ್ದಾರಿ ಹೊರಳೆ ಬೇಕು, ಎರಡೂ ಗುತ್ತಿಗೆ ರದ್ದು ಮಾಡಿ ಬಿ ಡಿ ಎ ಗೆ ಆಗುವ ನಷ್ಟ ಕಡಿಮೆ ಮಾಡಲು ಹೊಸ ಸಮರ್ಥ ಯೋಜನೆ ರೂಪಿಸಿ ವರ್ತಕರ ಸ್ಥಳಾಂತರ ಮತ್ತು ಪುನರ್ವಸತಿ ಜೊತೆ ಹೊಸ ಟೆಂಡರ್ ಕರೆಯ ಬೇಕೆಂದು ಈಗಿನ ಸರಕಾರವನ್ನು ಆಗ್ರಹಿಸುತ್ತೇವೆ.












Click it and Unblock the Notifications