ಬೆಂಗಳೂರಲ್ಲಿ ಹಂಸಲೇಖ, ಇಳಯರಾಜ ಹಾಡುಗಳ ಸುಧೆ
ಬೆಂಗಳೂರು, ಏಪ್ರಿಲ್ 26: ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಏಪ್ರಿಲ್ 28ರಂದು ಸಂಗೀತ ದಿಗ್ಗಜರಾದ ಹಂಸಲೇಖ, ಇಳಯರಾಜ ಹಾಡುಗಳ ಸುಧೆ ಹರಿಯಲಿದೆ.
ಹಂಸಲೇಖ ಹಾಗೂ ಇಳಯರಾಜ ಅವರ ಸಂಯೋಜನೆಗಳ ಗೀತೆಗಳನ್ನು ಕನ್ನಡ ಚಿತ್ರರಂಗ ಹಾಗೂ ಸುಗಮ ಸಂಗೀತ ಕ್ಷೇತ್ರದ ಪ್ರತಿಭೆಗಳು ಹಾಡಿ, ರಂಜಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಖುದ್ದು ಹಂಸಲೇಖ ಅವರು ಉಪಸ್ಥಿತರಿರುತ್ತಾರೆ. ಆರ್ ಜೆ ಮಯೂರ ಅವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಗಾಯಕರು/ ಸಂಗೀತಗಾರ : ಅಮಿತ್ ನಾಡಿಗ್, ಚಿನ್ಮಯ್ ಅತ್ರೇಯಸ್, ವ್ಯಾಸರಾಜ್ ಸೋಸಲೆ, ಸಿದ್ದಾರ್ಥ ಬೆಳ್ಮಣ್ಣು, ಅಂಕಿತಾ ಕುಂಡು, ಸಿಂಚನಾ ದೀಕ್ಷಿತ್, ಮಂಜು ಡ್ರಿಮ್
ಸಂಜೆ : 6 ಗಂಟೆ ನಂತರ
ಸ್ಥಳ : ಚೌಡಯ್ಯ ಸ್ಮಾರಕ ಭವನ, ವಯ್ಯಾಲಿಕಾವಲ್, ಬೆಂಗಳೂರು.
ಟಿಕೆಟ್ ಗಳಿಗಾಗಿ ಟಾಕ್ ಆಫ್ ಡಿ ಟೌನ್.ಕಾಂ ವೆಬ್ ಸೈಟ್ ಸಂಪರ್ಕಿಸಬಹುದು.












Click it and Unblock the Notifications