Get Updates
Get notified of breaking news, exclusive insights, and must-see stories!

ಉದ್ದೇಶಿತ ಲಿಂಕ್ ರಸ್ತೆಯಿಂದ 140 ಮರ, ಶಾಲೆ, ಕೆರೆ, ಅನಾಥಾಲಯ ನಿರ್ನಾಮ?

ಬೆಂಗಳೂರು, ಜುಲೈ 29: ವೈಟ್ ಫೀಲ್ಡ್ ನಲ್ಲಿ ಹೊಸತಾಗಿ ಲಿಂಕ್ ರಸ್ತೆಯೊಂದನ್ನು ನಿರ್ಮಿಸಲು ಹೊರಟಿರುವ ಬಿಬಿಎಂಪಿ ಯೋಜನೆಯಿಂದಾಗಿ, ಒಂದು ಶಾಲೆ, ಒಂದು ಅನಾಥಾಲಯ, ಒಂದು ಗುಪ್ತ ಕೆರೆ ಸೇರಿದಂತೆ 140 ಮರಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಹೇಳಲಾಗಿದೆ.

ವರ್ತೂರು ಮುಖ್ಯ ರಸ್ತೆಯಿಂದ ಐಟಿಪಿಎಲ್ ನ 80 ಅಡಿ ರಸ್ತೆಗೆ ಲಿಂಕ್ ಕೊಡುವ ರಸ್ತೆ ನಿರ್ಮಾಣ ಯೋಜನೆ ಇದಾಗಿದೆ. ತನ್ನ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಬಿಬಿಎಂಪಿ, ವೈಟ್ ಫೀಲ್ಡ್ ಪ್ರಾಂತ್ಯದಲ್ಲಿನ ಸಂಚಾರ ದಟ್ಟಣೆ ನಿವಾರಿಸಲು ಈ ರಸ್ತೆ ನಿರ್ಮಾಣ ಅವಶ್ಯಕತೆಯಿದೆ ಎಂದು ಹೇಳಿದೆ.

ಆದರೆ, ಬಿಬಿಎಂಪಿ ವಾದವನ್ನು ಒಪ್ಪದ ಈ ಪ್ರಾಂತ್ಯದ ನಾಗರಿಕರು, ಈ ಯೋಜನೆ ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ ಅನುಕೂಲ ಕಲ್ಪಿಸಲೆಂದೇ ತಯಾರು ಮಾಡಲಾಗಿದೆ. ಹಲವಾರು ಮರಗಳು, ಶಾಲೆ, ಅನಾಥಾಲಯಗಳು ಇದಕ್ಕೆ ಬಲಿಯಾಗುವುದರಿಂದ ಈ ಯೋಜನೆಗೆ ನಮ್ಮ ವಿರೋಧವಿದೆ ಎಂದಿದ್ದಾರೆ.

ಯೋಜನೆಯ ಮೊದಲ ಹಂತದಲ್ಲಿ ವೈಟ್ ಫೀಲ್ಡ್ ಮುಖ್ಯರಸ್ತೆಯಿಂದ ಶುರುವಾಗಿ, ಇಸಿಸಿ ರಸ್ತೆಗೆ ಸೇರಿಕೊಳ್ಳುವ ಲಿಂಕ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಆದರೆ, ಈ ಯೋಜನೆಯಲ್ಲಿಯೇ ಒಂದು ಶಾಲೆ, ಅನಾಥಾಲಯವು ಯೋಜನೆಯಿಂದ ಜಾಗ ಕಳೆದುಕೊಳ್ಳುತ್ತವೆ. ಆದರೆ, ವೈಟ್ ಫೀಲ್ಡ್ ಮುಖ್ಯ ರಸ್ತೆಯಿಂದ ಇಸಿಸಿ ರಸ್ತೆಯನ್ನು ಸಂಪರ್ಕಿಸಲು ಅನೇಕ ಅಡ್ಡ ರಸ್ತೆಗಳಿರುವಾಗ ಈ ಹೊಸ ಯೋಜನೆಯ ಅಗತ್ಯವಿತ್ತೇ ಎಂಬುದು ಜನರ ಪ್ರಶ್ನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+