Get Updates
Get notified of breaking news, exclusive insights, and must-see stories!

ಲೋಕಾಯುಕ್ತರಿಗೆ ಚೂರಿ ಇರಿತ: ಆರೋಪಿ ತೇಜ್ ರಾಜ್ ವಿರುದ್ಧ FIR

Recommended Video

      ಬೆಂಗಳೂರಿನಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚೂರಿ ಇರಿತ | Oneindia Kannada

      ಬೆಂಗಳೂರು, ಮಾರ್ಚ್ 07: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಬುಧವಾರ ಬೆಳಗ್ಗೆ ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿಯೊಬ್ಬರು ಚೂರಿಯಿಂದ ಇರಿದಿರುವ ಘಟನೆ ನಡೆದಿದೆ.

      ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ದುರ್ಘಟನೆ ನಡೆದಿದ್ದು, ಲೋಕಾಯುಕ್ತ ಕಚೇರಿಗೆ ದೂರು ನೀಡಲು ಬಂದಿದ್ದ ತೇಜಸ್ ಶರ್ಮಾ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಒಟ್ಟು ಮೂರು ಬಾರಿ ವಿಶ್ವನಾಥ್ ಶೆಟ್ಟಿ ಅವರಿಗೆ ಚುಚ್ಚಿ, ಪರಾರಿಯಾಗಲು ಯತ್ನಿಸಿದ್ದಾನೆ.

      A man stabs Justice Vishwanath Shetty Lokayukta court

      ನ್ಯಾ.ವಿಶ್ವನಾಥ್ ಶೆಟ್ಟಿ ಅವರನ್ನು ಸಮೀಪದ ಮಲ್ಯ ಆಸ್ಪತ್ರೆಗೆ ದಾಖಲಾಗಿದೆ. ಹೊಟ್ಟೆ, ಎದೆ ಭಾಗಕ್ಕೆ ತೀವ್ರ ಗಾಯವಾಗಿದೆ. ಆರಂಭದಲ್ಲಿ ವಿಶ್ವನಾಥ್ ಶೆಟ್ಟಿ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು. ನಂತರ, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸದ್ಯದ ಮಾಹಿತಿ ಸಿಕ್ಕಿದೆ.

      A man stabs Justice Vishwanath Shetty Lokayukta court

      Mar 07, 2018, 7:16 pm IST

      ಸಿದ್ದರಾಮಯ್ಯ ಅವರಿಂದ ಪ್ರತಿಕ್ರಿಯೆ:
      Mar 07, 2018, 7:14 pm IST

      ಸಂಸದ ಅನಂತ್ ಕುಮಾರ್ ಅವರಿಂದ ಪ್ರತಿಕ್ರಿಯೆ
      Mar 07, 2018, 7:03 pm IST

      ಆರೋಪಿ ತೇಜ್ ರಾಜ್ ವಿರುದ್ಧ ಐಪಿಸಿ ಸೆಕ್ಷನ್ 307, 341 ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಎಫ್ಐಆರ್ ದಾಖಲು
      Mar 07, 2018, 6:51 pm IST

      ತುಮಕೂರು ನಗರದ ಬಿ ಎಮ್ ತೋಟದಲ್ಲಿ ಬಾಡಿಗೆ ಇದ್ದ ಆರೋಪಿ ತೇಜರಾಜ. ಕಳೆದ ಎರಡು ತಿಂಗಳಿನಿಂದ ಕೃಷ್ಣಪ್ಪ ಎಂಬುವರ ಮನೆಯಲ್ಲಿ ಬಾಡಿಗೆ ಇದ್ದ ಆರೋಪಿ. ಹೊಸ ಬಡಾವಣೆ ಪೊಲೀಸರಿಂದ ತಪಾಸಣೆ‌
      Mar 07, 2018, 5:26 pm IST

      33 ವರ್ಷದ ವ್ಯಕ್ತಿ, ದೂರು ನೀಡಲು ಬಂದಿದ್ದ, ಚಾಕುವಿನಿಂದ ಇರಿದಿದ್ದಾನೆ. ನಂತರ ನ್ಯಾಯಮೂರ್ತಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಹಿಂದೆ ತೇಜ್ ರಾಜ್ ಶರ್ಮ ನಾಲ್ಕು ಬಾರಿ ಲೋಕಾಯುಕ್ತ ಕಚೇರಿಗೆ ಬಂದಿದ್ದಾನೆ. ಕಳೆದ ನವೆಂಬರ್ ನಲ್ಲಿ ಈತ ನೀಡಿದ್ದ ಕೆಲವು ಅರ್ಜಿಗಳು ಕೋರ್ಟಿನಲ್ಲಿ ತಿರಸ್ಕೃತಗೊಂಡಿದೆ. ಡಿಸಿಪಿ ಸೆಂಥಿಲ್, ಚಂದ್ರಗುಪ್ತ ಅವರ ತಂಡ ತನಿಖೆ ನಡೆಸುತ್ತಿದ್ದಾರೆ. ಐಪಿಸಿ 307 ಕೇಸ್ ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದರು.
      Mar 07, 2018, 3:52 pm IST

      ಸದಾನಂದ ಗೌಡ : ವಿಶ್ವನಾಥ್ ಶೆಟ್ಟಿ ಅವರಿಗಾಗಿ ಪ್ರಾರ್ಥಿಸೋಣ
      Mar 07, 2018, 3:45 pm IST

      ಚೂರಿ ಇರಿತ ಕೇಸು: ತನಿಖೆಗೆ 3 ಸದಸ್ಯರ FSL ತಂಡ ರಚಿಸಲಾಗಿದೆ. ಲೋಕಾಯುಕ್ತ ಕಚೇರಿಗೆ ಆಗಮಿಸಿರುವ FSL ತಂಡದಿಂದ ತನಿಖೆ ಆರಂಭಗೊಂಡಿದೆ
      Mar 07, 2018, 3:36 pm IST

      ಆರೋಪಿಯ ಹೆಸರು ತೇಜಸ್ ಶರ್ಮಾ ಅಲ್ಲ, ತೇಜರಾಜ್ ಶರ್ಮಾ, ತುಮಕೂರಿನಲ್ಲಿ ಸೋಮೇಶ್ವರ ಬಡಾವಣೆಯ ನಿವಾಸಿ
      Mar 07, 2018, 3:32 pm IST

      ಒಂದಲ್ಲ, ಎರಡಲ್ಲ, ಮುರ್ನಾಲ್ಕು ಬಾರಿ ಇರಿತವಾಗಿರುವ ಮಾಹಿತಿ ಲಭ್ಯವಾಗಿದೆ. ವಿಶ್ವನಾಥ್ ಶೆಟ್ಟಿ ಅವರ ದೇಹದ ಸ್ಕ್ಯಾನಿಂಗ್ ಮುಗಿದಿದ್ದು, ಆಪರೇಷನ್ ಶುರುವಾಗಿದೆ.
      Mar 07, 2018, 3:19 pm IST

      ಕೊಲೆ ಮಾಡಲು ಯತ್ನ ಮಾಡಿರುವುದು ಕಂಡು ಬಂದಿದೆ. ಅವನನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ಮಾಡ್ತಾರೆ. ಪೊಲೀಸರಿಗೆ ತನಿಖೆ ಮಾಡುವಂತೆ ಸೂಚಿಸಿದ್ದೇನೆ. ಡಾಕ್ಟರ್ ಗಳ ಜತೆ ಮಾತನಾಡಿದೆ. ಮೇಲ್ನೋಟಕ್ಕೆ ತೊಂದರೆ ಇಲ್ಲ ಎಂದು ತಿಳಿದು ಬಂದಿದೆ. ಘಟನೆ ನಡೆದಾಗ ಗನ್ ಮ್ಯಾನ್ ಹೊರಗಡೆ ಇದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರು ಮಲ್ಯ ಆಸ್ಪತ್ರೆಯ ಬಳಿ ಪ್ರತಿಕ್ರಿಯಿಸಿದ್ದಾರೆ
      Mar 07, 2018, 3:16 pm IST

      ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಹಲ್ಲೆ ನಡೆದಿರುವುದು ದುರಾದೃಷ್ಟಕರ : ನಿವೃತ್ತ ನ್ಯಾ. ವೆಂಕಟಾಚಲ ಅವರಿಂದ ಪ್ರತಿಕ್ರಿಯೆ.
      Mar 07, 2018, 3:16 pm IST

      ಹೊಟ್ಟೆ ಭಾಗಕ್ಕೆ ಆಗಿರುವ ಗಾಯದ ಪ್ರಮಾಣ ಪರೀಕ್ಷೆಗಾಗಿ ಸಿಟಿ ಸ್ಕ್ಯಾನ್ ಚಿಕಿತ್ಸೆ
      Mar 07, 2018, 3:10 pm IST

      ಸಿಎಂ ನೇತೃತ್ವದ ಸಭೆಯಲ್ಲಿ ಸಚಿವರಾದ ಕೆ.ಜೆ ಜಾರ್ಜ್, ಎಂಬಿ ಪಾಟೀಲ್, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಉಪಸ್ಥಿತಿ
      Mar 07, 2018, 3:08 pm IST

      ಲೋಕಾಯುಕ್ತರಿಗೆ ಚೂರಿ ಇರಿತ : ಮಲ್ಯ ಆಸ್ಪತ್ರೆಯಲ್ಲಿ ಸಿಎಂ ಮೀಟಿಂಗ್
      Mar 07, 2018, 3:08 pm IST

      ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಹಾಳಾಗಿರುವುದರಿಂದ ಈತನ ಬಳಿ ಇದ್ದ ಚಾಕುವನ್ನು ಡಿಕ್ಟೇಟ್ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.
      Mar 07, 2018, 3:08 pm IST

      ಮೊದಲಿಗೆ ಕೈಗೆ ಇರಿದ ತೇಜಸ್ ನಂತರ ಹೊಟ್ಟೆ, ಎದೆಗೆ ಚುಚ್ಚಿದ್ದಾನೆ.
      Mar 07, 2018, 3:08 pm IST

      ಲೋಕಾಯುಕ್ತ ಕಚೇರಿಗೆ ಬಂದು ಸಂದರ್ಶನಕ್ಕಾಗಿ ಸಮಯ ನಿಗದಿ ಪಡಿಸಿಕೊಂಡಿದ್ದ ತೇಜಸ್ ಅವರು ಊಟದ ವೇಳೆ ಕಚೇರಿ ನುಗ್ಗಿದ ತೇಜಸ್, ಲೋಕಾಯುಕ್ತರ ಮೇಲೆ ಚಾಕುವಿನಿಂದ ಇರಿದಿದ್ದಾನೆ.
      Mar 07, 2018, 3:07 pm IST

      ತುಮಕೂರು ಮೂಲದ ತೇಜಸ್ ಶರ್ಮಾ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+