ಮಹಿಳಾ ಎಸ್‌ಐಗೆ ಬ್ಲ್ಯಾಕ್‌ಮೇಲ್ ಮಾಡಿ ಮಂಚಕ್ಕೆ ಕರೆದ
ಬೆಂಗಳೂರು, ಜನವರಿ 11: ಮಹಿಳಾ ಸಬ್ ಇನ್‌ಸ್ಪೆಕ್ಟರ್‌ಗೆ ಅಶ್ಲೀಲ ಚಿತ್ರ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿ ಮಂಚಕ್ಕೆ ಕರೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಭಾರತಿ(ಹೆಸರು ಬದಲಾಯಿಸಲಾಗಿದೆ) ಅವರು ನಗರದ ಠಾಣೆಯೊಂದರಲ್ಲಿ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಆಗಿ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಬ್‌ಇನ್ಸ್‌ಪೆಕ್ಟರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ, ಹಣಕ್ಕೆ ಬೇಡಿಕೆ ಹಾಗೂ ಬೆದರಿಕೆ ಹಾಕಿದ ಪ್ರಕರಣದಡಿ ಎಫ್‌ಐಆರ್ ದಾಖಲಿಸಲಾಗಿದೆ. ಆತನ ಬಂಧನಕ್ಕೂ ಶೋಧ ಕಾರ್ಯ ಆರಂಭವಾಗಿದೆ.

ರಾತ್ರಿ ಸುಮಾರು 9.45ರ ಸುಮಾರಿಗೆ ಭಾರಿ ಅವರು ಕರ್ತವ್ಯ ಮುಗಿಸಿ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಮೊಬೈಲ್‌ಗೆ ಕರೆ ಮಾಡಿದ್ದ ಆರೋಪಿ ಲಾಡ್ಜ್‌ಗೆ ಬರುತ್ತೀರಾ? ನಿಮಗೆ ಎಷ್ಟು ಹಣ ಬೇಕು ಹೇಳಿ ನಾನು ಕೊಡುತ್ತೇನೆ ಎಂದು ಹೇಳಿದ್ದಾನೆ.
ಕೂಡಲೇ ಭಾರಿ ಅವರು 'ಏಯ್ ಯಾರೋ ನೀನು, ನಾನು ಯಾರಂತ ಗೊತ್ತಾ, ನಿನಗೆ ಯಾರು ನನ್ನ ಮೊಬೈಲ್ ನಂಬರ್ ಕೊಟ್ಟಿದ್ದು?' ಎಂದು ಏರು ಸ್ವರದಲ್ಲಿ ಮಾತನಾಡಿದ್ದಾರೆ.
ಆಗ ಆರೋಪಿ ಪ್ರತಿಕ್ರಿಯೆ ನೀಡಿ ನೀನು ಎಸ್‌ಐ ಎನ್ನುವುದು ನನಗೆ ಗೊತ್ತು, ನಿಮ್ಮ ಠಾಣೆಯಲ್ಲಿ ಇರುವ ಗೃಹ ರಕ್ಷಕ ಸಿಬ್ಬಂದಿ ನಿಮ್ಮ ನಂಬರ್ ನೀಡಿದ್ದಾರೆ ಎಂದು ಹೇಳಿದ್ದಾರೆ.
ತಕ್ಷಣವೇ ಎಸ್‌ಐ ಕರೆ ಕಟ್ ಮಾಡದ್ದಾರೆ, ತಕ್ಷಣ ಮಹಿಳಾ ಗೃಹ ರಕ್ಷಕ ಸಿಬ್ಬಂದಿಯ 26 ನಗ್ನ ಫೋಟೊಗಳನ್ನು ಆತ ವಾಟ್ಸಪ್ ಮಾಡಿದ್ದಾನೆ.
ತಕ್ಷಣವೇ ಆರೋಪಿ ಭಾರತಿಗೆ ಕರೆ ಮಾಡಿ ಫೋಟೊ ನೋಡಿದ್ರಾ ಈಗಲಾದ್ರೂ ಗೊತ್ತಾಯ್ತಾ ನಾನು ಎಷ್ಟು ಬಲಿಷ್ಠ ಎಂದು ಕೆಟ್ಟದಾಗಿ ಮಾತನಾಡಿದ್ದಾನೆ.
ಈ ಎಲ್ಲಾ ವಿಷಯಗಳು ಎಲ್ಲೂ ಹೋಗಬಾರದು ಎಂದರೆ ನಾನು ಹೇಳಿದ ಸ್ಥಳಕ್ಕೆ ಒಂದು ಲಕ್ಷ ರೂ ತಂದು ಕೊಡು ಎಂದು ಹೇಳಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications