ಅವಳು ಕಾಂಡೋಮ್ ಹಾಕಬೇಕು ಎಂದಿದ್ದಕ್ಕೆ ಕೊಲೆಯನ್ನೇ ಮಾಡಿದ..!

ಬೆಂಗಳೂರು, ಜನವರಿ 23: ಯಾವುದ್ಯಾವುದೋ ಕಾರಣಕ್ಕೆ ಕೊಲೆಗಳು ನಡೆದಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಬೆಂಗಳೂರಿನಲ್ಲಿ ವಿಲಕ್ಷಣ ಕಾರಣಕ್ಕೆ ಮಹಿಳೆಯೊಬ್ಬರ ಕೊಲೆಯೊಂದು ನಡೆದು ಹೋಗಿದೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.11 ರಂದು ಮಹಿಳೆಯೊಬ್ಬರ ಕೊಲೆಯಾಗಿತ್ತು. 45 ವರ್ಷದ ಮಹಿಳೆಯನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿದ್ದರೂ, ಕೊಲೆ ಏತಕ್ಕಾಗಿ ನಡೆದಿತ್ತು ಎಂಬುದರ ಬಗ್ಗೆ ಗೊಂದಲವುಂಟಾಗಿತ್ತು.

ಪ್ರಕರಣವನ್ನು ಭೇದಿಸಿ, ಆರೋಪಿಯನ್ನು ಬಂಧಿಸಿರುವ ಪೊಲೀಸರು, ''ಕೊಲೆಯಾದ ಮಹಿಳೆ, ಲೈಂಗಿಕ ಕ್ರಿಯೆ ನಡೆಸಲು ಕಾಂಡೋಮ್ ಹಾಕಲೇಬೇಕು ಎಂದಿದ್ದಕ್ಕೆ ಮುಕುಂದ್ ಎನ್ನುವ ವ್ಯಕ್ತಿ ಮಹಿಳೆಯನ್ನು ಕೊಲೆ ಮಾಡಿದ್ದ'' ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 11 ರಂದು ನಡೆದಿದ್ದೇನು?

ಜನವರಿ 11 ರಂದು ನಡೆದಿದ್ದೇನು?

ಜನವರಿ 11 ರಂದು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಯಿತ್ರಿ ನಗರದ ನಾಲ್ಕನೇ ಕ್ರಾಸ್‌ನ ಮನೆಯೊಂದರಲ್ಲಿ ಮಂಜುಳಾ ಎಂಬ 45 ವರ್ಷದ ಮಹಿಳೆಯನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಹಂತಕ ಪೊಲೀಸರ ದಾರಿ ತಪ್ಪಿಸಲು ಮಂಜುಳಾ ಅವರ ಮಾಂಗಲ್ಯ ಸರ ಹಾಗೂ ಚಿನ್ನಾಭರಣಗಳನ್ನು ತೆಗೆದುಕೊಂಡು ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಕೊಲೆಯಾದ ಮಂಜುಳಾ ಅವರ ಅಕ್ಕ ಸಿದ್ದಗಂಗಮ್ಮ ಪೊಲೀಸರಿಗೆ ದೂರು ನೀಡಿದ್ದರು.

ಕೊಲೆಗಾರ ಕೆ ಆರ್ ಪೇಟೆಯವ

ಕೊಲೆಗಾರ ಕೆ ಆರ್ ಪೇಟೆಯವ

ತನಿಖೆ ಆರಂಭಿಸಿದ ಸುಬ್ರಹ್ಮಣ್ಯ ನಗರ ಪೊಲೀಸರಿಗೆ ಹಂತಕನ ಸುಳಿವು ಕೆಲವೇ ದಿನಗಳಲ್ಲಿ ಲಭ್ಯವಾಗಿತ್ತು. ಆದರೆ, ಕೊಲೆ ಏತಕ್ಕಾಗಿ ನಡೆದಿದೆ ಎಂಬುದರ ಬಗ್ಗೆ ಪೊಲೀಸರಿಗೆ ದೊಡ್ಡ ತಲೆನೋವು ಶುರುವಾಗಿತ್ತು. ಹಂತಕನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಸಂತೆಬಾಚನಹಳ್ಳಿಯಿಂದ 44 ವರ್ಷದ ಮುಕುಂದ್ ಎಚ್ ಎಚ್ ಎನ್ನುವನನ್ನು ಬಂಧಿಸಿ ದಸ್ತಗಿರಿ ಮಾಡಿದ್ದಾರೆ.

ಕಾಮುಕ ಸೆಕ್ಯೂರಿಟಿ ಗಾರ್ಡ್‌

ಕಾಮುಕ ಸೆಕ್ಯೂರಿಟಿ ಗಾರ್ಡ್‌

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಿ4 ಎಂಬ ಸೆಕ್ಯೂರಿಟಿ ಗಾರ್ಡ್ ಸರ್ವಿಸ್ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮುಕುಂದ ಹಾಗೂ ಕೊಲೆಯಾದ ಗಾಯಿತ್ರಿ ನಗರದ ಮಂಜುಳಾ ನಡುವೆ ಅಕ್ರಮ ಸಂಬಂಧವಿತ್ತು. ಮುಕುಂದ ಪ್ರತಿ ವಾರ ತನ್ನ ಊರಿಗೆ ಹೋಗುತ್ತಿದ್ದ. ಹೋಗುವಾಗ ಮಂಜುಳಾ ಮನೆಗೆ ಹೋಗಿ ಬರುತ್ತಿದ್ದ.

ಕಾಂಡೋಮ್ ಇಲ್ಲದಿದ್ದರೇ ಬೇಡ

ಕಾಂಡೋಮ್ ಇಲ್ಲದಿದ್ದರೇ ಬೇಡ

ಮುಕುಂದ್ ಜನವರಿ 11 ರಂದು ಮಧ್ಯಾಹ್ನ 1 ಗಂಟೆಯಿಂದ 3.45 ರ ಸುಮಾರಿನಲ್ಲಿ ಮಂಜುಳಾ ಮನೆಗೆ ಹೋಗಿದ್ದಾನೆ. ಈ ವೇಳೆ ಮಂಜುಳಾ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಮಂಜುಳಾ ಕಾಂಡೋಮ್ ಬಳಿಸುವಂತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಇಬ್ಬರಿಗೂ ಜಗಳ ನಡೆದಿದ್ದು, ಮುಕುಂದ ಕೋಪಗೊಂಡು ಹರಿತವಾದ ಆಯುಧದಿಂದ ಮಂಜುಳಾರನ್ನು ಕೊಲೆ ಮಾಡಿದ್ದಾನೆ.

ಡಿಸಿಪಿ ಶಶಿಕುಮಾರ್ ಪ್ರಶಂಸೆ

ಡಿಸಿಪಿ ಶಶಿಕುಮಾರ್ ಪ್ರಶಂಸೆ

ಕೊಲೆ ಮಾಡಿ, ಕೆಲಸಕ್ಕೆ ಹೋಗದೆ, ತನ್ನ ಸ್ವಂತ ಊರಲ್ಲಿ ತಲೆ ಮರೆಸಿಕೊಂಡಿದ್ದ ಮುಕುಂದ್‌ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇವಲ ಕಾಂಡೋಮ್ ಬೇಡ ಅಂದಿದ್ದಕ್ಕೆ ಮಹಿಳೆಯನ್ನು ಕೊಲೆ ಮಾಡಿ, ಈಗ ಕಂಬಿ ಎಣಿಸುತ್ತಿದ್ದಾನೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪೊಲೀಸರನ್ನು ಉತ್ತರ ವಲಯ ಡಿಸಿಪಿ ಎನ್ ಶಶಿಕುಮಾರ್ ಅವರು ಪ್ರಶಂಸಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+