ಗೇಟ್ ತೆರೆದುಕೊಳ್ಳಲಿಲ್ಲವೆಂದು ಗುಂಡು ಹಾರಿಸಿದ ಭೂಪ
ಬೆಂಗಳೂರು, ನವೆಂಬರ್ 15 : ಇಲ್ಲೊಬ್ಬ ಆಸಾಮಿ ಕುಡಿದ ಮತ್ತಿನಲ್ಲಿ ತನ್ನ ಮನೆ ಗೇಟು ತೆರಯಲು ಗೇಟಿಗೆ ಬಂದೂಕಿನಿಂದ ಗುಂಡು ಹೊಡೆದಿದ್ದಾನೆ.
ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮುನಿಕಾಳಪ್ಪ ಎಂಬುವನು ನಿನ್ನೆ ರಾತ್ರಿ ಚೆನ್ನಾಗಿ ಕುಡಿದು ಬಂದು ಗೇಟು ತೆರೆಯಲು ಪ್ರಯತ್ನಿಸಿದ್ದಾನೆ ಆದರೆ ಗೇಟು ಸರಿಯಾಗಿ ತೆರೆದುಕೊಳ್ಳದೆ ಕೋಪ ಗೊಂಡ ಮುನಿಕಾಳಪ್ಪ ಗೇಟಿಗೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.

ಬಂದೂಕು ಗುಂಡಿನ ಶಬ್ದ ಕೇಳಿ ಹೌಹಾರಿದ ಅಕ್ಕಪಕ್ಕದ ಮನೆಯವರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಆಗಮಿಸಿದ ಪೊಲೀಸರು ಮುನಿಕಾಳಪ್ಪನನ್ನು ವಶಕ್ಕೆ ಪಡೆದು ನಂತರ ಬೇಲ್ ಮೇಲೆ ಬಿಡುಗಡೆ ಮಾಡಿ ಕಳಿಸಿದ್ದಾರೆ.
ಪರವಾನಗಿ ಇರುವ ತನ್ನ ಬಂದೂಕಿನಿಂದಲೇ ಮುನಿಕಾಳಪ್ಪ ಈ ಕೃತ್ಯ ಮಾಡಿದ್ದಾನೆ. ಮೂರು ಸುತ್ತು ಗುಂಡು ಹಾರಿಸಿರುವ ಮುನಿಕಾಳಪ್ಪ ಅವರ ಮೇಲೆ ಪ್ರಕರಣ ದಾಖಲಿಸಿ. ಖಡಕ್ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications