ಬೆಂಗಳೂರಿನ ಕ್ಷೌರಿಕನ ಬಳಿ ಬಹುಕೋಟಿ ಬೆಲೆಯ ಕಾರ್!

ಬೆಂಗಳೂರು, ಮಾರ್ಚ್ 3: ಬೆಂಗಳೂರಿನ ಕ್ಷೌರಿಕರೊಬ್ಬನ ಬಳಿ ಮೂರುಕೋಟಿಗೂ ಅಧಿಕ ಬೆಲೆಯ ಮರ್ಸಿಡೆಸ್ ಮೆಬ್ಯಾಕ್ ಕಾರಿದೆ ಅಂದ್ರೆ ನಂಬ್ತೀರಾ? ಅಷ್ಟೇ ಅಲ್ಲ, ಇವರ ಬಳಿ 75ಕ್ಕೂ ಹೆಚ್ಚು ದುಬಾರಿ ಕಾರುಗಳಿವೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಸಲೂನ್ ವೊಂದರಲ್ಲಿರುವ ಕ್ಷೌರಿಕ ರಮೇಶ್ ಬಾಬು ಎಂಬುವವರಿಗೆ ವಿಪರೀತ ಕಾರ್ ಕ್ರೇಜ್ . ಅದೆ‌ಷ್ಟಂದ್ರೆ ಮರ್ಸಿಡಸ್ ಬೆಂಝ್, 3 ಆಡಿ, 10 ಬಿಎಂಡಬ್ಲ್ಯು, 2 ಜಾಗ್ವರ್ ಸೇರಿದಂತೆ ಬೆಲೆಬಾಳುವ 75ರಷ್ಟು ಕಾರುಗಳು ಇವರ ದಾಸ್ತಾನಿನಲ್ಲಿವೆ.

A barber in Bengaluru bought mercedes maybach, worth 3.2crore!

ಬೆಂಗಳೂರಿನಲ್ಲಿ ವಿಜಯ ಮಲ್ಯ ಮತ್ತು ಇನ್ನೊಬ್ಬ ಬಿಲ್ಡರ್ ರನ್ನು ಬಿಟ್ಟರೆ ಸ್ವಂತ ಮೆಬ್ಯಾಕ್ ಹೊಂದಿರುವ ವ್ಯಕ್ತಿ ರಮೇಶ್ ಬಾಬು ಮಾತ್ರ! ವಿಜಯ ಮಲ್ಯ ಲಂಡನ್ನಿಗೆ ಹಾರಿದ ಮೆಬ್ಯಾಕ್ ಕಾರಿಲ್ಲದೆ ಮಂಕಾಗಿದ್ದ ಬೆಂಗಳೂರಿನ ರಸ್ತೆಗೆ ರಮೇಶ್ ಬಾಬು ಅವರ ಮೆಬ್ಯಾಕ್ ಕಳೆತಂದುಕೊಟ್ಟಿದೆ!

A barber in Bengaluru bought mercedes maybach, worth 3.2crore!

ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಮಾಲೀಕರಾದ ಇವರ ತಂದೆ ಕ್ಷೌರಿಕರಾಗಿದ್ದವರು. ಆರ್ಥಿಕ ಸಂಕಷ್ಟದಲ್ಲಿ ಬೆಳೆದು, ಕೊನೆಗೆ ದೊಡ್ಡ ಉದ್ಯಮಿಯಾದ ಮೇಲೂ ತಮ್ಮ ಕುಟುಂಬದ ವೃತ್ತಿಯನ್ನು ಬಿಡಲು ಮನಸ್ಸಿಲ್ಲದೆ ಪ್ರತಿದಿನ ಸಲೂನ್ ಗೆ ಬಂದು ಐದು ಗಂಟೆ ಕೆಲಸ ಮಾಡುವ ರಮೇಶ್ ಬಾಬು ಒಬ್ಬರ ಕ್ಷೌರ ಮಾಡುವುದಕ್ಕೆ ಪಡೆಯುವ ಹಣ ಕೇವಲ ರೂ.75!

ಹಲವು ಶ್ರೀಮಂತರ ಸಂಪರ್ಕವಿರುವುದರಿಂದ ಲಕ್ಷುರಿ ಕಾರುಗಳನ್ನು ಬಾಡಿಗೆಗೆ ನೀಡುತ್ತಾರೆ. ಕಾರಿನ ಸಂಗ್ರಹ ತನ್ನ ಪ್ಯಾಶನ್ ಎನ್ನುವ ಅವರು ಕ್ಷೌರಿಕ ವೃತ್ತಿಯನ್ನು ಮಾತ್ರ ಎಂದಿಗೂ ಬಿಡಲಾರೆ ಎನ್ನುತ್ತಾರೆ ಇವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+