9999- ನಂ.1 ಫ್ಯಾನ್ಸಿ ನಂಬರ್ ಆಗಿ ಘೋಷಣೆ

ಬೆಂಗಳೂರು, ಮೇ.28: ವಾಹನಗಳಿಗೆ ಫ್ಯಾನ್ಸಿ ನಂಬರ್ ಪಡೆದುಕೊಳ್ಳುವ ಹುಚ್ಚು ಹಲವು ವಾಹನ ಮಾಲೀಕರಿಗಿರುತ್ತದೆ. ಅದರೆ, ಫ್ಯಾನ್ಸಿ ನಂಬರ್ ಬೇಕೆಂದರೆ ಬಿಡ್ಡಿಂಗ್ ನಲ್ಲಿ ಪಾಲ್ಗೊಳ್ಳಬೇಕು. ಈ ರೀತಿ ಬಿಡ್ಡಿಂಗ್ ನಡೆದು '9999' ಸಂಖ್ಯೆಗೆ ಅತಿ ಹೆಚ್ಚಿನ ಬಿಡ್ಡಿಂಗ್, ಬೇಡಿಕೆ ಬಂದಿದೆ ಎಂದು ಆರ್ ಟಿಒ ಪ್ರಕಟಿಸಿದೆ.

ಸುಮಾರು 22 ಜನ ಬಿಡ್ಡರ್ ಗಳು ಸುಮಾರು 50ಕ್ಕೂ ಅಧಿಕ ಫ್ಯಾನ್ಸಿ ನಂಬರ್ ಗಳ ಮೇಲೆ ಬಿಡ್ ಮಾಡಿದ್ದರು. ಡಲ್ ಹೊಡೆಯುತ್ತಿದ್ದ ಬಿಡ್ ಪ್ರಕ್ರಿಯೆಗೆ ಸಕತ್ ಕಿಕ್ ಸಿಕ್ಕಿದ್ದು ಮಾತ್ರ 9999 ಎಂಬ ಸಂಖ್ಯೆ ಬಿಡ್ಡಿಂಗ್ ಗೆ ಬಂದಾಗ ಮಾತ್ರ. [ರಿಚ್ಮಂಡ್ ರಸ್ತೆ ಆರ್ ಟಿಒ ಜತೆ 'ರಿಚ್' ಯುವತಿ ರಚ್ಚೆ]

9999 most popular vehicle registration number

ಬಿಡ್ಡಿಂಗ್ ಕೊನೆಗೆ 1.30 ಲಕ್ಷರು ಪ್ಲಸ್ 75,000 ರು (ಕನಿಷ್ಠ ಬಿಡ್ ಮೊತ್ತ) ನೀಡಿ ತಮ್ಮ ವಾಹನಕ್ಕೆ ನೋಂದಣಿ ಸಂಖ್ಯೆ ( '9999' ಸಂಖ್ಯೆ ಪಡೆದುಕೊಂಡಿದ್ದಾರೆ. ಐಷಾರಾಮಿ ಎಸ್ ಯುವಿ ವಾಹನಕ್ಕೆ ಈ ಸಂಖ್ಯೆಯನ್ನು ಇಡುವುದಾಗಿ ಸಂಖ್ಯೆ ಗೆದ್ದ ನಟರಾಜ್ ನಗರಹಳ್ಳಿ ಹೇಳಿದ್ದಾರೆ.

ಇಂದಿರಾನಗರ ಪ್ರಾದೇಶಿಕ ವಾಹನ ನೋಂದಣಿ ಕಚೇರಿಯಲ್ಲಿ ಅತಿ ಹೆಚ್ಚು ಬೆಲೆ ಮಾರಾಟವಾದ ಸಂಖ್ಯೆ (KA 03 9999)

9999 most popular vehicle registration number

ಒಟ್ಟಾರೆ 11 ಫ್ಯಾನ್ಸಿ ಸಂಖ್ಯೆಗಳು 1.80 ಲಕ್ಷ ರು ಮೌಲ್ಯಕ್ಕೆ ಮಾರಾಟವಾಗಿದೆ. ಕನಿಷ್ಠ ಬಿಡ್ಡಿಂಗ್ ಬೆಲೆ 75,000 ರು ಪಾವತಿಸಿ ಬಿಡ್ಡಿಂಗ್ ಕೂಗುವ ಅವಕಾಶ ನೀಡಲಾಗಿತ್ತು. ಹರಾಜಿನ ನಂತರ ಸರ್ಕಾರಕ್ಕೆ ಸುಮಾರು 10.05 ಲಕ್ಷ ರು ಆದಾಯ ಬಂದಿದೆ.

ಇದಲ್ಲದೆ, '0999', '0045', '0099', '0007', '5555, '0666' ಮುಂತಾದ ಸಂಖ್ಯೆಗಳು 1,000 ರು ಪ್ಲಸ್ ಬಿಡ್ಡಿಂಗ್ ಕನಿಷ್ಠ ಮೊತ್ತ 75,000 ರು ಮೊತ್ತಕ್ಕೆ ಹರಾಜಾಗಿದೆ. 0001 ಸಂಖ್ಯೆ 41,000+ 75,000 ರು ಗೆ ಹೋಗಿದೆ. ಮುಂದಿನ ಹರಾಜು ನಡೆಸಲು ಇನ್ನೂ ಆರು ತಿಂಗಳು ಕಾಯಬೇಕು. 0001 ರಿಂದ 9999 ತನಕದ ಸಂಖ್ಯೆಗಳು ಲಭ್ಯವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+