ಅಯ್ಯಪ್ಪ ದೊರೆ ಹತ್ಯೆ; 9 ಕೋಟಿ ವ್ಯವಹಾರ ಕೊಲೆಯಲ್ಲಿ ಅಂತ್ಯ!

ಬೆಂಗಳೂರು, ನವೆಂಬರ್ 03 : ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಡಾ. ಅಯ್ಯಪ್ಪ ದೊರೆ ಹತ್ಯೆಗೆ 9 ಕೋಟಿ ರೂ. ವ್ಯವಹಾರವೇ ಕಾರಣ. ವಿವಿ ಹಾಲಿ ಕುಲಪತಿ ಸುಧೀರ್ ಅಂಗೂರ್ ಸೇರಿದಂತೆ 13 ಆರೋಪಿಗಳನ್ನು ಆರ್. ಟಿ. ನಗರ ಪೊಲೀಸರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.

ಅಯ್ಯಪ್ಪ ದೊರೆ ಹತ್ಯೆ ಮಾಡಬೇಕು ಎಂದು ಸುಧೀರ್ ಅಂಗೂರ್ ಹಲವು ದಿನಗಳಿಂದ ಸಂಚು ರೂಪಿಸಿದ್ದ. ಆದರೆ, 24 ಗಂಟೆಯೊಳಗೆ 4.5 ಕೋಟಿ ರೂ. ಹಣ ನೀಡಬೇಕು ಎಂಬ ಅಯ್ಯಪ್ಪ ಎಚ್ಚರಿಕೆ ತಕ್ಷಣ ಅವರನ್ನು ಹತ್ಯೆ ಮಾಡುವಂತೆ ಪ್ರೇರೆಪಣೆ ನೀಡಿತ್ತು.

ಸುಧೀರ್ ಅಂಗೂರ್ ಮತ್ತು ಮಧುಕರ್ ಅಂಗೂರ್ ನಡುವೆ ಅಲಯನ್ಸ್ ವಿಶ್ವವಿದ್ಯಾಲಯದ ಮಾಲೀಕತ್ವದ ವಿಚಾರದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಹಣವನ್ನು ನೀಡಲು ವಿಫಲವಾದರೆ ಮಧುಕರ್‌ ಅಂಗೂರ್‌ಗೆ ಬೆಂಬಲ ನೀಡುವುದಾಗಿ ಅಯ್ಯಪ್ಪ ಹೇಳಿದ್ದರು.

9 Crore Lead To Death Of Ayyappa Dore

ಡಾ. ಅಯ್ಯಪ್ಪ ದೊರೆ ಬಳಿ ಸುಧೀರ್ ಅಂಗೂರ್ 9 ಕೋಟಿ ರೂ. ಹಣ ಪಡೆದಿದ್ದ. ವಿವಿಧ ಚೆಕ್‌ಗಳ ಮೂಲಕ ಅಕ್ಟೋಬರ್ 9ರ ತನಕ ಹಣವನ್ನು ವಾಪಸ್ ಮಾಡಿದ್ದರು. 4.5 ಕೋಟಿ ಹಣ ರೂ. ನೀಡುವುದು ಬಾಕಿ ಇತ್ತು.

24 ಗಂಟೆಯಲ್ಲಿ ಉಳಿದ ಹಣವನ್ನು ವಾಪಸ್ ನೀಡಬೇಕು ಎಂದು ಅಯ್ಯಪ್ಪ ದೊರೆ ಎಚ್ಚರಿಕೆ ನೀಡಿದ್ದರು. ಹಣ ನೀಡದಿದ್ದರೆ ಮಧುಕರ್‌ ಅಂಗೂರ್‌ಗೆ ಬೆಂಬಲ ನೀಡಿ, ಅವರನ್ನು ವಿವಿ ಕುಲಪತಿಯಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.

ವಿವಿಯ ಅಧಿಕಾರ ಕೈ ತಪ್ಪುವ ಭೀತಿಯಿಂದ ಸುಧೀರ್ ಅಂಗೂರ್ ಸೂರಜ್‌ ಸಿಂಗ್‌ಗೆ 1 ಕೋಟಿ ರೂ. ಹಣ ಸುಪಾರಿ ಕೊಟ್ಟು ಡಾ. ಅಯ್ಯಪ್ಪ ದೊರೆ ಹತ್ಯೆ ಮಾಡಲು ಸೂಚಿಸಿದ್ದರು. ಅಕ್ಟೋಬರ್ 15ರಂದು ಅಯ್ಯಪ್ಪ ದೊರೆ ಹತ್ಯೆ ನಡೆದಿತ್ತು.

ಅಕ್ಟೋಬರ್ 17ರಂದು ಸುಧೀರ್ ಅಂಗೂರ್ ಮತ್ತು ಸೂರಜ್ ಸಿಂಗ್ ಹತ್ಯೆ ನಡೆದಿತ್ತು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 13 ಆರೋಪಿಗಳನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+