ಬಲವೀರ ರೆಡ್ಡಿ ಅವರಿಗೆ ಸಿಎಂಆರ್ ಸೇವಾ ಪುರಸ್ಕಾರ
ಬೆಂಗಳೂರು, ನವೆಂಬರ್ 26 : ಸಿಎಂಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಿಎಂಆರ್ ಸಮೂಹದ 76 ಶಿಕ್ಷಕರಿಗೆ ಶಿಕ್ಷಕರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿಎಂಆರ್ ಸೇವಾ ಪುರಸ್ಕಾರವನ್ನು ಬಲವೀರ ರೆಡ್ಡಿ ಅವರಿಗೆ ನೀಡಲಾಯಿತು.
ಬುಧವಾರ ಸಿಎಂಆರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಸಿಎಂಆರ್ ಸೇವಾ ಪುರಸ್ಕಾರವನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಬಲವೀರ ರೆಡ್ಡಿ ಅವರಿಗೆ ಪ್ರದಾನ ಮಾಡಲಾಯಿತು. [ಕೆಎಸ್ ಒಯು ಮಾನ್ಯತೆ ನವೀಕರಣಕ್ಕೆ ಯುಜಿಸಿ ಒಪ್ಪಿಗೆ]

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಪತಿಗಳಾದ ನಂತರ ಬಲವೀರ ರೆಡ್ಡಿ ಅವರು ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ದೇಶದಲ್ಲೇ ಮೊದಲ ಇ ಕ್ಯಾಂಪಸ್ ನಿರ್ಮಾಣ, ಡಿಜಿಟಲ್ ಕ್ಲಾಸ್ ರೂಂ ಮಾಡಿರುವ ಅವರ ಸಾಧನೆಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. [ಶಿಕ್ಷಣ ಕ್ಷೇತ್ರದ ಇಬ್ಬರು ದಿಗ್ಗಜರಿಗೆ ಕೊಂಕಣಿ ಸೇವಾ ಪ್ರಶಸ್ತಿ]
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಲವೀರ ರೆಡ್ಡಿ ಅವರು, 'ಶಿಕ್ಷಕರ ಸಮ್ಮುಖದಲ್ಲಿ ಸಿಎಂಆರ್ ಸೇವಾ ಪುರಸ್ಕಾರ ಪಡೆಯಲು ಹೆಮ್ಮೆ ಎನಿಸುತ್ತಿದೆ. ಶಿಕ್ಷಕನಾಗಿ ನಾನು ಮಾಡಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ' ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ, ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ನ್ಯಾಷನಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಪಿ.ಗೋಪಾಲಕೃಷ್ಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
-
ಉಡುಪಿ ಜಿಲ್ಲೆಯ ವಂಡ್ಸೆ ಸರ್ಕಾರಿ ಶಾಲೆಗೆ ರಾಜ್ಯದ ಮೊದಲ ಎಐ ಟೀಚರ್ 'ಐರಿಸ್' ಎಂಟ್ರಿ -
CBSE 10ನೇ ತರಗತಿ ಫಲಿತಾಂಶ 2026 ಪ್ರಕಟ: ನಿಮ್ಮ ಅಂಕಗಳನ್ನು ಕ್ಷಣಾರ್ಧದಲ್ಲಿ ಇಲ್ಲಿ ಚೆಕ್ ಮಾಡಿ -
CBSE 10th Results 2026: ಹತ್ತನೇ ತರಗತಿ ನಂತರ ನಿಮ್ಮ ಆಯ್ಕೆ ಏನಾಗಿರಬೇಕು? ಮುಂದಿನ ಹಾದಿ ಹೀಗಿರಲಿ -
CBSE ಹೊಸ ನಿಯಮ: ಮುಖ್ಯ ವಿಷಯದಲ್ಲಿ ಫೇಲ್ ಆದರೂ ಪಾಸ್ ಅವಕಾಶ, CBSE ರಿಸಲ್ಟ್ ನೋಡುವುದು ಹೇಗೆ -
CBSE Results 2026: ಸಿಬಿಎಸ್ಇ 10 ಮತ್ತು 12ನೇ ತರಗತಿಯ ಉತ್ತರ ಪತ್ರಿಕೆಯ ಪ್ರತಿ ಪಡೆಯುವುದು ಹೇಗೆ? -
CBSE 10 Results 2025: ಸಿಬಿಎಸ್ಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಟಾಪರ್ಸ್ ಪಟ್ಟಿ ಇಲ್ಲಿದೆ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ದ್ವಿತೀಯ PUC ಪರೀಕ್ಷೆ-2: ನೋಂದಣಿ ಆರಂಭ, ಯಾರಿಗೆ ಶುಲ್ಕ ವಿನಾಯಿತಿ? ಇಲ್ಲಿದೆ ಮಾಹಿತಿ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ











Click it and Unblock the Notifications