ಬೆಂಗಳೂರಿಗೆ ಬರುವವರಿಗೆ 7 ದಿನದ ಕ್ವಾರಂಟೈನ್?

ಬೆಂಗಳೂರು, ಮೇ 22 : ಕೇಂದ್ರ ರೈಲ್ವೆ ಇಲಾಖೆ ಜೂನ್ 1ರಿಂದ ವಿವಿಧ ಮಾರ್ಗದಲ್ಲಿ ರೈಲು ಸಂಚಾರ ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ. ಮೇ 25ರಿಂದ ದೇಶಿಯ ವಿಮಾನ ಸೇವೆ ಆರಂಭವಾಗುತ್ತಿದೆ. ಇದರಿಂದಾಗಿ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ ಮಾಡಬೇಕಿದೆ.

Recommended Video

      ಅವನಿಗೆ ಇರೋ ಅಷ್ಟು ಬುದ್ಧಿ ನನಗಿಲ್ಲ ಎಂದ GT DeveGowda

      ಬೆಂಗಳೂರು ನಗರಕ್ಕೆ ಬೇರೆ ರಾಜ್ಯ/ದೇಶದಿಂದ ವಿಮಾನ ಅಥವ ರೈಲಿನಲ್ಲಿ ಬರುವ ಪ್ರಯಾಣಿಕರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮ ಜಾರಿಯಲ್ಲಿದೆ. ದೆಹಲಿಯಿಂದ ರೈಲಿನಲ್ಲಿ ನಗರಕ್ಕೆ ಆಗಮಿಸಿ ಕ್ವಾರಂಟೈನ್‌ಗೆ ಒಪ್ಪದ ಜನರನ್ನು ವಾಪಸ್ ಕಳಿಸಿದ ಘಟನೆಯೂ ನಡೆದಿದೆ.

      ಈಗ ಜೂನ್ 1ರಿಂದ ರೈಲು ಸಂಚಾರ ಆರಂಭವಾದರೆ ರೈಲಿನಲ್ಲಿ ಆಗಮಿಸುವ ಅಷ್ಟು ಜನರನ್ನು ಕ್ವಾರಂಟೈನ್ ಮಾಡುವುದು ಬಿಬಿಎಂಪಿಗೆ ಸವಾಲಾಗಲಿದೆ. ಆದ್ದರಿಂದ, ಕರ್ನಾಟಕ ಸರ್ಕಾರ ಕ್ವಾರಂಟೈನ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಬಿಬಿಎಂಪಿ ಹೇಳಿದೆ.

      7 Days Quarantine For People Who Come To Bengaluru

      ರೈಲು ಮತ್ತು ವಿಮಾನ ಸೇವೆ ಆರಂಭವಾದ ಬಳಿಕ 14 ದಿನದ ಸರ್ಕಾರಿ ಕ್ವಾರಂಟೈನ್ ಮಾಡುವುದು ಸಾಧ್ಯವಾಗದ ಮಾತು. ಆದ್ದರಿಂದ, ಸರ್ಕಾರ 7 ದಿನದ ಕ್ವಾರಂಟೈನ್ ಮಾಡುವುದು ತೀರ್ಮಾನ ಕೈಗೊಳ್ಳಬಹುದು ಅಥವ ಹೋಂ ಕ್ವಾರಂಟೈನ್ ನಿಯಮ ಜಾರಿಗೆ ತರಬಹುದು.

      ಒಂದು ವೇಳೆ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕನಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾದರೆ ನಿಲ್ದಾಣವನ್ನು 5 ದಿನಗಳ ಕಾಲ ಮುಚ್ಚ ಬೇಕಾಗುತ್ತದೆ. ಇಂತಹ ಅಂಶಗಳನ್ನು ಮುಂದಿಟ್ಟುಕೊಂಡು ಬಿಬಿಎಂಪಿ ಸರ್ಕಾರಕ್ಕೆ ಕ್ವಾರಂಟೈನ್ ನಿಯಮದ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಲಿದೆ.

      ಪ್ರಸ್ತುತ ದೇಶಿಯ ವಿಮಾನ ಸೇವೆ ಇಲ್ಲ. ಒಂದೇ ಭಾರತ ಮಿಷನ್ ಅಡಿ ವಿದೇಶದಿಂದ ಬರುವ ಜನರು ಅವರ ಖರ್ಚಿನಲ್ಲಿಯೇ 14 ದಿನ ಕ್ವಾರಂಟೈನ್‌ನಲ್ಲಿರಲು ಬಿಬಿಎಂಪಿ ವ್ಯವಸ್ಥೆ ಮಾಡಿದೆ.

      ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ ನಡೆಸುತ್ತಿದೆ. ರೈಲಿನಲ್ಲಿ ಬೆಂಗಳೂರು ನಗರಕ್ಕೆ ಬರುವ ಪ್ರಯಾಣಿಕರಿಗೂ 14 ದಿನದ ಕ್ವಾರಂಟೈನ್ ನಿಗದಿ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+