ಹನಿಟ್ರ್ಯಾಪ್‌ಗೆ ಒಳಗಾದ 60 ವರ್ಷದ ವ್ಯಕ್ತಿ- ಇಬ್ಬರು ಮಹಿಳೆಯರಿಂದ ಬರೋಬ್ಬರಿ ₹82 ಲಕ್ಷ ಸುಲಿಗೆ; ಪಿನ್‌-ಟು-ಪಿನ್‌ ಡಿಟೇಲ್ಸ್‌

ಬೆಂಗಳೂರು, ಆಗಸ್ಟ್‌ 15: ಹಿರಿಯ ನಾಗರಿಕರೊಬ್ಬರ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತರು ಈಗಾಗಲೇ ಈ ಮಹಿಳೆಯರಿಗೆ 82 ಲಕ್ಷ ರೂ.ಗಳನ್ನು ನೀಡಿದ್ದಾರೆ. ಆರೋಪಿಗಳು ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಾಗ ಹಿರಿಯ ನಾಗರಿಕ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಮಹಿಳೆಯರನ್ನು 40 ವರ್ಷದ ಅಣ್ಣಮ್ಮ ಮತ್ತು ಸ್ನೇಹಾ ಎಂದು ಗುರುತಿಸಲಾಗಿದೆ. ನಿವೃತ್ತ ಸರ್ಕಾರಿ ನೌಕರ ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ಈ ಪ್ರಕರಣದಲ್ಲಿ ಅಣ್ಣಮ್ಮ ಆರೋಪಿ ನಂಬರ್ ಒನ್‌ ಆಗಿದ್ದಾಳೆ. ಸ್ನೇಹಿತರೊಬ್ಬರ ಮೂಲಕ ಅಣ್ಣಮ್ಮನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಸ್ನೇಹಾ ಆರೋಪಿ ನಂಬರ್‌ ಟು ಆಗಿದ್ದಾಳೆ.

honey-trapped-extorted-of-rs-82-lakh

ಈ ಪ್ರಕರಣದ ಕುರಿತು ಪೊಲೀಸರಿಗೆ ಹೇಳಿಕೆ ನೀಡಿರುವ ಹಿರಿಯ ನಾಗರಿಕ, 'ಅಣ್ಣಮ್ಮನಿಗೆ ಹಣದ ತೊಂದರೆ ಇದ್ದು, ಆಕೆಗೆ ಸಹಾಯ ಮಾಡುವಂತೆ ನನ್ನ ಸ್ನೇಹಿತರೊಬ್ಬರು ಹೇಳಿದರು. ನಾನು ಅಣ್ಣಮ್ಮಳನ್ನು ಮೊದಲ ಬಾರಿಗೆ ಭೇಟಿಯಾದಾಗ, ತನ್ನ ಕಷ್ಟಗಳನ್ನು ಹೇಳಿಕೊಂಡಳು. ತನ್ನ ಮಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ ಎಂಬುದಾಗಿ ನೋವು ತೋಡಿಕೊಂಡಳು. ಆಗ ನನ್ನ ಬಳಿ 5,000 ರೂಪಾಯಿಗಳನ್ನು ಪಡೆದುಕೊಂಡಳು. ನಾನು ಹಣ ನೀಡಿದೆ. ಆ ನಂತರವೂ ಪದೇಪದೇ ಕರೆ ಮಾಡಿ ನನಗೆ ಹಣದ ಬೇಡಿಕೆ ಇಟ್ಟಿದ್ದಾಳೆ' ಎಂದು ತಿಳಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಆರೋಪಿಯು ನನ್ನನ್ನು ಎಲೆಕ್ಟ್ರಾನಿಕ್ ಸಿಟಿಯ ಓಯೋ ಹೋಟೆಲ್‌ಗೆ ಕರೆದೊಯ್ದಳು. ಆ ಬಳಿಕ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದಳು ಎಂದು ಸಂತ್ರಸ್ತ ಹೇಳಿಕೊಂಡಿದ್ದಾರೆ.

ಆರೋಪಿ ಅಣ್ಣಮ್ಮ ಆಕೆಯ ಸ್ನೇಹಿತೆ ಸ್ನೇಹಾ ಎಂಬಾಕೆಯನ್ನು ಪರಿಚಯಿಸಿ ಮಾಡಿಕೊಟ್ಟಳು. ಆಕೆಯು ಹಲವಾರು ಸಮಸ್ಯೆಗಳನ್ನು ಹೇಳಿಕೊಂಡು ಹಣಕ್ಕೆ ಬೇಡಿಕೆಯಿಡಲು ಪ್ರಾರಂಭಿಸಿದಳು ಎಂದು ನಿವೃತ್ತ ನೌಕರ ಹೇಳಿಕೆ ದಾಖಲಿಸಿದ್ದಾರೆ.

honey-trapped-extorted-of-rs-82-lakh

ಈ ವರ್ಷ ಜೂನ್‌ನಲ್ಲಿ ಅಣ್ಣಮ್ಮನಿಂದ ಸ್ನೇಹಾ ಸಂತ್ರಸ್ತರ ಖಾಸಗಿ ಚಿತ್ರಗಳನ್ನು ಪಡೆದುಕೊಂಡಿದ್ದಾಳೆ. ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕ ತೊಡಗಿದಳು. ಆಗ ತೊಂದರೆ ಪ್ರಾರಂಭವಾಯಿತು ಎಂದು ಹಿರಿಯ ನಾಗರಿಕ ಹೇಳಿದ್ದಾರೆ.

ಅವಮಾನದ ಭಯದಿಂದ ಸಂತ್ರಸ್ತರು 82 ಲಕ್ಷ ರೂ.ಗಳನ್ನು ಆರೋಪಿಗಳ ಎರಡು ವಿಭಿನ್ನ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಇದನ್ನು ಯಾರಿಗೂ ಬಹಿರಂಗಪಡಿಸದಂತೆ ಹಿರಿಯ ನಾಗರಿಕನಿಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ.

ತಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿಸುವುದಾಗಿಯೂ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಹಿರಿಯ ನಾಗರಿಕ ಹೇಳಿಕೆ ದಾಖಲಿಸಿದ್ದಾರೆ.

ಆರೋಪಿಗಳು 42 ಲಕ್ಷ ರೂ.ಗೆ ಮತ್ತೆ ಬೇಡಿಕೆಯಿಟ್ಟರು. ನನ್ನ ಖಾಸಗಿ ಫೋಟೊಗಳನ್ನು ಕುಟುಂಬ ಸದಸ್ಯರಿಗೆ ಕಳಿಹಿಸುವುದಾಗಿ ಬೆದರಿಕೆ ಹಾಕಿದರು. ಆ ನಂತರ ನಾನು ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದೆ ಎಂದು ಹಿರಿಯ ನಾಗರಿಕರು ಹೇಳಿಕೊಂಡಿದ್ದಾರೆ.

ಎಫ್‌ಐಆರ್ ಆಧಾರದ ಮೇಲೆ ಇಬ್ಬರು ಮಹಿಳೆಯರ ಮೇಲೆ ಬಂಧಿಸಲಾಗಿದೆ. ಇದೀಗ ವಿಚಾರಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+