ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಏರ್ ಪೋರ್ಟ್ ನಿಂದ ಸ್ವದೇಶಕ್ಕೆ 6 ಮಂದಿ ಜಪಾನ್ ಪ್ರಜೆಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್.14: ಕೊರೊನಾ ವೈರಸ್ ನಿಯಂತ್ರಿಸಲು ಭಾರತ ಲಾಕ್ ಡೌನ್ ಘೋಷಣೆ ನಡುವೆ ಜಪಾನ್ ಮೂಲದ ಆರು ಮಂದಿ ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲದ ಜಪಾನ್ ಪ್ರಜೆಗಳು ತೆರಳಲು ಅನುಮತಿ ನೀಡಲಾಗಿದೆ.

ವಿಶಾಖಪಟ್ಟಣಂನಲ್ಲಿದ್ದ ಜಪಾನ್ ಮೂಲದ ಆರು ಪ್ರಜೆಗಳು ತಮ್ಮ ದೇಶಕ್ಕೆ ತೆರಳಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು ಅದಕ್ಕಾಗಿ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದೆ ಎಂದು ವಿಶಾಖಪಟ್ಟಣಂ ವಿಮಾನ ನಿಲ್ದಾಣದ ನಿರ್ದೇಶಕ ರಾಜ್ ಕಿಶೋರ್ ಮಾಹಿತಿ ನೀಡಿದರು.

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಮುಸ್ಲಿಂ ಬಾಂಧವರು ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಮುಸ್ಲಿಂ ಬಾಂಧವರು

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಕಳುಹಿಸಲಾಯಿತು. ನಂತರ ಬೆಂಗಳೂರಿನಲ್ಲಿ ಜಪಾನ್ ಏರ್ ಲೈನ್ಸ್ ವಿಶೇಷ ವಿಮಾನದ ಮೂಲಕ ಆರು ಜನರನ್ನು ತಮ್ಮ ದೇಶಗಳಿಗೆ ತೆರಳಲು ಅವಕಾಶ ನೀಡಲಾಗಿದೆ.

6 Japanese Returned To Home From Bangalore International Airport

ಭಾರತ ಲಾಕ್ ಡೌನ್ ನಿಂದ ಸಿಲುಕಿದ್ದ ಆರು ಜನ:

ಕಳೆದ ಮಾರ್ಚ್.24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಲಾಕ್ ಡೌನ್ ಘೋಷಿಸಿದರು. ಅಲ್ಲಿಂದ 21 ದಿನಗಳ ಕಾಲ ದೇಶದಲ್ಲಿ ರಸ್ತೆ ಸಾರಿ, ರೈಲು ಸಂಚಾರ ಹಾಗೂ ವಿಮಾನ ಹಾರಾಟಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ಜಪಾನ್ ಮೂಲದ ಆರು ಮಂದಿ ಭಾರತದಲ್ಲಿಯೇ ಸಿಲುಕಿಕೊಂಡಿದ್ದರು. ಆದರೆ ಮನವಿ ಮೇರೆಗೆ ಮಂಗಳವಾರ ಆರು ಜಪಾನ್ ಪ್ರಜೆಗಳನ್ನು ಅವರ ದೇಶಗಳಿಗೆ ವಾಪಸ್ ತೆರಳಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ ಎಂದು ವಿಶಾಖಪಟ್ಟಣಂ ವಿಮಾನ ನಿಲ್ದಾಣದ ನಿರ್ದೇಶಕ ರಾಜ್ ಕಿಶೋರ್ ತಿಳಿಸಿದ್ದಾರೆ.

English summary
6 Japanese Returned To Hometown From Bangalore International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X