ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 2.8 ಕೋಟಿ ಹಳೆ ನೋಟು ಸಾಗಿಸುತ್ತಿದ್ದ 6 ಜನರ ಬಂಧನ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 10: ಅಪನಗದೀಕರಣ ನಡೆದು 7 ತಿಂಗಳ ನಂತರವೂ ಹಳೆ ನೋಟುಗಳು ಮತ್ತೆ ಮತ್ತೆ ಪತ್ತೆಯಾಗುತ್ತಿವೆ. ಗುರುವಾರ ಬೆಂಗಳೂರಿನಲ್ಲಿ ಆರು ಜನರನ್ನು ಇದೇ ಕಾರಣಕ್ಕೆ ಬಂಧಿಸಲಾಗದ್ದು 2.8 ಕೋಟಿ ಮೊತ್ತದ ಅಮಾನ್ಯಗೊಂಡ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ನೋಟುಗಳು 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳಾಗಿವೆ.

ಬಂಧಿತರಲ್ಲಿ ಒಬ್ಬರು ನಗರದ ಸಿಟಿ ಸಿವಿಲ್ ನ್ಯಾಯಾಲದಲ್ಲಿ ಅಭ್ಯಾಸ ಮಾಡುವ ವಕೀಲರಾಗಿದ್ದಾರೆ. ಇನ್ನೊಬ್ಬರು ಆಂಧ್ರ ಪ್ರದೇಶದವರಾಗಿದ್ದಾರೆ.

ಬೆಂಗಳೂರು: ಕಪ್ಪು-ಬಿಳಿ ದಂಧೆ, ಐವರ ಬಂಧನ, 2.5 ಕೋಟಿ ಹಳೆ ನೋಟು ವಶ ಬೆಂಗಳೂರು: ಕಪ್ಪು-ಬಿಳಿ ದಂಧೆ, ಐವರ ಬಂಧನ, 2.5 ಕೋಟಿ ಹಳೆ ನೋಟು ವಶ

 6 held with banned notes worth Rs 2.8 crore in Bengaluru

ಬಂಧಿತರೆಲ್ಲರೂ 50 ವರ್ಷ ಮೇಲಿನವರಾಗಿದ್ದು ಇಬ್ಬರು ಮಾತ್ರ ಯುವಕರಾಗಿದ್ದಾರೆ. ಬಂಧಿತರು ವಿಜಯಾ ಬ್ಯಾಂಕ್ ಲೇಔಟ್ ನಲ್ಲಿ ರಿಕ್ಷಾ ಒಂದರಲ್ಲಿ ತೆಂಗಿನ ಚಿಪ್ಪುಗಳನ್ನು ಅಡಿಯಲ್ಲಿ ಹಣವನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು. ಈ ಸಂದರ್ಭ ಖಚಿತ ಮಾಹಿತಿಯ ಮೇರೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರನನ್ನು ದೊಮ್ಮಲೂರು ಮೂಲದ ವಕೀಲ ಮರಿ ರೆಡ್ಡಿ,ಆಂಧ್ರ ಪ್ರದೇಶದ ಎಂಜಿನಿಯರ್ ಭಾನೋಜಿ, ದಿನೇಶ್, ಹರೀಶ್, ಚಂದ್ರಶೇಖರ್, ದಿನೇಶ್ ಎಂದು ಗುರುತಿಸಲಾಗಿದೆ.

ಇದೇ ವೇಳೆ ಮೈಕೋ ಲೇಔಟ್ ಪೊಲೀಸರು 2,000 ರೂಪಾಯಿ ಮುಖಬೆಲೆಯ 2 ಲಕ್ಷದ 2,000 ಸಾವಿರ ರೂಪಾಯಿ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಜೂನ್ 5ರಂದು ಇದೇ ರೀತಿ 2.75 ಕೋಟಿ ಮೊತ್ತದ ಅಮಾನ್ಯಕರಣಗೊಂಡ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Six men carrying demonetised notes worth Rupees 2.8 crore were arrested on Thursday in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X