ಬೆಂಗಳೂರು ಮಳೆ : ವಿಜಯನಗರದಲ್ಲಿ ಕಾಂಪೌಂಡ್ ಕುಸಿತ, ಕಾರುಗಳು ಜಖಂ
ಬೆಂಗಳೂರು, ಸೆಪ್ಟೆಂಬರ್ 27 : ಉದ್ಯಾನ ನಗರಿ ಬೆಂಗಳೂರಿನಲ್ಲಿ ತಡರಾತ್ರಿಯಿಂದ ಸುರಿಯುತ್ತಿರುವ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ವಿಜಯನಗರದಲ್ಲಿ ಹಾಸ್ಟೆಲ್ ಗೋಡೆ ಕುಸಿದು ಬಿದ್ದು, 6 ಕಾರು, 2 ಆಟೋಗಳು ಜಖಂಗೊಂಡಿವೆ.

ವಿಜಯನಗರದ ಮಾರುತಿ ಬಡಾವಣೆಯ ಸಿಪಿಡ್ಲ್ಯೂಡಿ ಹೋಟೆಲ್ ಮ್ಯಾಜೇಜ್ ಮೆಂಟ್ ವಿದ್ಯಾರ್ಥಿಗಳಿದ್ದ ಹಾಸ್ಟೆಲ್ ಗೋಡೆ ರಾತ್ರಿ ಕುಸಿದು ಬಿದ್ದಿದೆ. ಸುಮಾರು 12 ಗಂಟೆ ವೇಳೆಗೆ ಗೋಡೆ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.

ಆದರೆ, 6 ಕಾರು, 2 ಆಟೋ, 1 ಸ್ಕೂಟರ್ ಕಾಂಪೌಂಡ್ ಕಟ್ಟಡದ ಅವಶೇಷಗಳಡಿ ಸಿಲುಕಿ ಜಖಂಗೊಂಡಿವೆ. ಪೊಲೀಸ್, ಅಗ್ನಿಶಾಮಕ, ಬೆಸ್ಕಾಂ, ಬಿಬಿಎಂಪಿ ನೌಕರರು ಸತತವಾಗಿ ಕಾರ್ಯಚರಣೆ ನಡೆಸಿ, ಅವಶೇಷಗಳನ್ನು ತೆರವುಗೊಳಿಸಿದ್ದಾರೆ.
ಬುಧವಾರ ಬೆಳಗ್ಗೆ ಬಿಎಂಪಿ ಮೇಯರ್ ಜಿ.ಪದ್ಮಾವತಿ ಮತ್ತು ವಿಜಯನಗರ ಶಾಸಕ, ವಸತಿ ಸಚಿವ ಎಂ.ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಹಲವು ಪ್ರದೇಶಗಳಲ್ಲಿ ತಡರಾತ್ರಿ ಮತ್ತು ಇಂದು ಬೆಳಗ್ಗೆ ಉತ್ತಮ ಮಳೆಯಾಗಿದ್ದು, ಮಳೆ ಹಲವು ಅನಾಹುತಗಳನ್ನು ಮಾಡಿದೆ.












Click it and Unblock the Notifications