ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಮತ್ತೆ 5 ಸಾವಿರ ಸೋಂಕು, ತಮಿಳುನಾಡು ಹಿಂದಿಕ್ಕಿದ ಕರ್ನಾಟಕ

|
Google Oneindia Kannada News

ಬೆಂಗಳೂರು, ಜುಲೈ 25: ಕರ್ನಾಟಕದಲ್ಲಿ ಇಂದು ಸಹ 5 ಸಾವಿರ ಕೊರೊನಾ ವೈರಸ್‌ ಕೇಸ್‌ಗಳು ಪತ್ತೆಯಾಗಿದೆ. ಸತತ ಮೂರನೇ ದಿನ ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಕೊವಿಡ್ ಸೋಂಕಿತರು ವರದಿಯಾಗಿದ್ದಾರೆ.

Recommended Video

ಭಾರತದಲ್ಲಿ ಚೀನಾ ವ್ಯವಹಾರ ಇನ್ನು ಮುಂದೆ ಸುಲಭವಲ್ಲ | Oneindia Kannada

ಇಂದು 5,072 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 90942ಕ್ಕೆ ಏರಿಕೆಯಾಗಿದೆ. 2,403 ಜನರು ಇಂದು ಗುಣಮುಖರಾಗಿದ್ದು, ಈವರೆಗೂ ಒಟ್ಟು 33,750 ಜನರು ಚೇತರಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಂದು 2,036 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಚೇತರಿಕೆ ದರ ಶೇ.37.1% ರಷ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಮಾಹಿತಿ ನೀಡಿದ್ದಾರೆ. ಮುಂದೆ ಓದಿ....

ತಮಿಳುನಾಡು ಹಿಂದಿಕ್ಕಿದ ಕರ್ನಾಟಕ

ತಮಿಳುನಾಡು ಹಿಂದಿಕ್ಕಿದ ಕರ್ನಾಟಕ

ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90942ಕ್ಕೆ ಏರಿಕೆಯಾಗಿದೆ. 33,750 ಮಂದಿ ಗುಣಮುಖರಾಗಿದ್ದಾರೆ. 55388 ಜನರು ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದಿನ ವರದಿ ಬಳಿಕ ಆಕ್ಟಿವ್ ಕೇಸ್‌ಗಳ ಪಟ್ಟಿಯಲ್ಲಿ ತಮಿಳುನಾಡನ್ನು ಕರ್ನಾಟಕ ಹಿಂದಿಕ್ಕಿದೆ. ತಮಿಳುನಾಡಿನಲ್ಲಿ 52,273 ಸಕ್ರಿಯ ಕೇಸ್ ಇದೆ.

ತಮಿಳುನಾಡಿನಲ್ಲಿ ಇಂದು ಎಷ್ಟು ಕೇಸ್?

ತಮಿಳುನಾಡಿನಲ್ಲಿ ಇಂದು ಎಷ್ಟು ಕೇಸ್?

ತಮಿಳುನಾಡಿನಲ್ಲಿ ಇಂದು 6988 ಜನರಿಗೆ ಕೊರೊನಾ ವೈರಸ್ ತಗುಲಿದೆ. ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,06,737ಕ್ಕೆ ಏರಿಕೆಯಾಗಿದೆ. ಅದರಲ್ಲಿ 1,51,055 ಜನರು ಗುಣಮುಖರಾಗಿದ್ದು, 52,273 ಇನ್ನು ಆಕ್ಟಿವ್ ಆಗಿದೆ. ಇದುವರೆಗೂ ತಮಿಳುನಾಡಿನಲ್ಲಿ 3,409 ಮಂದಿ ಸಾವನ್ನಪ್ಪಿದ್ದಾರೆ.

ಎರಡನೇ ಸ್ಥಾನದಲ್ಲಿ ಕರ್ನಾಟಕ

ಎರಡನೇ ಸ್ಥಾನದಲ್ಲಿ ಕರ್ನಾಟಕ

ಇಂದಿನ ವರದಿ ಬಳಿಕ ಸಕ್ರಿಯ ಕೇಸ್‌ಗಳ ಪಟ್ಟಿಯಲ್ಲಿ ಭಾರಿ ವ್ಯತ್ಯಾಸವಾಗಿದೆ. ಆಕ್ಟಿವ್ ಕೇಸ್‌ಗಳ ಪೈಕಿ 1,43,714 ಹೆಚ್ಚು ಕೇಸ್ ಹೊಂದಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತಮಿಳುನಾಡು ಮೂರನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ 2,036 ಕೇಸ್!

ಬೆಂಗಳೂರಿನಲ್ಲಿ 2,036 ಕೇಸ್!

ಬೆಂಗಳೂರಿನಲ್ಲಿ ಇಂದು 2,036 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಈ ಪೈಕಿ 31881 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಒಂದೇ ದಿನ ಬೆಂಗಳೂರಿನಲ್ಲಿ 30 ಜನ ಮೃತೊಟ್ಟಿದ್ದು, 686 ಜನರು ಗುಣಮುಖರಾಗಿದ್ದಾರೆ.

English summary
Today's 5,072 Covid19 cases in Karnataka, it has overtaken Tamil Nadu in active cases. Karnataka now at second spot in country with most active cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X