ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?
ಬೆಂಗಳೂರು, ಮಾರ್ಚ್ 4: ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಮೂರು ಪ್ಯಾಕೇಜ್‌ಗಳನ್ನು ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದೆ. ಕಾರಿಡಾರ್ ಆರು ಪಥಗಳನ್ನು ಹೊಂದಿರಲಿದೆ.
ಪ್ರತಿ ಪ್ಯಾಕೇಜ್ ಪೂರೈಸಲು ಮೂರು ವರ್ಷಗಳು ತಗುಲುತ್ತವೆ. ಕಾಮಗಾರಿ ಕೈಗೆತ್ತಿಕೊಳ್ಳುವ ಕಂಪನಿ 10 ವರ್ಷಗಳ ಕಾಲ ಎಲಿವೇಟೆಡ್ ಕಾರಿಡಾರ್‌ನ ನಿರ್ವಹಣಾ ಕಾಮಗಾರಿ ಜವಾಬ್ದಾರಿ ಹೊರಬೇಕಾಗುತ್ತದೆ.
ನಾರ್ಥ್-ಸೌತ್ ಕಾರಿಡಾರ್ ನಿರ್ಮಾಣಕ್ಕೆ ಮೇ ತಿಂಗಳಲ್ಲಿ ಬಿಡ್ ಕರೆಯಲಾಗಿತ್ತು. ಇದೀಗ ಈಸ್ಟ್-ವೆಸ್ಟ್ ಕಾರಿಡಾರ್ ನಿರ್ಮಾಣಕ್ಕೆ ಶೀಘ್ರದಲ್ಲೇ ಬಿಡ್ ಕರೆಯಲಾಗುತ್ತದೆ. ಈ ಯೋಜನೆ ನಿರ್ಮಾಣ ಮಾಡಲು ಸರ್ಕಾರ ಮೊದಲ ಹಂತದಲ್ಲಿ 1 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

ಹಾಗೆಯೇ ನಾರ್ಥ್-ಸೌತ್ ಕಾರಿಡಾರ್ ನಿರ್ಮಾಣಕ್ಕೆ 5060 ಕೋಟಿ ರೂ ಬೇಕು ಎಂದು ಅಂದಾಜಿಸಲಾಗಿದೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಬೇಕಿದ್ದರೆ 3700 ಮರಗಳನ್ನು ಕಡಿಯುವುದು ಅಥವಾ ಸ್ಥಳಾಂತರಿಸುವುದು ಅನಿವಾರ್ಯವಾಗಿದೆ.












Click it and Unblock the Notifications