ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ ಬಿಬಿಎಂಪಿಯ 32 ಸದಸ್ಯರು

|
Google Oneindia Kannada News

ಬೆಂಗಳೂರು, ಮೇ 02: ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದಿದ್ದು, ಬಿಬಿಎಂಪಿಯ 32 ಕಾರ್ಪೊರೇಟರ್‌ಗಳಿಗೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ.

2016 ರಲ್ಲಿ 14 ಮಂದಿಸ ಬಿಬಿಎಂಪಿ ಸದಸ್ಯರು ಮತ್ತು 2017 ರಲ್ಲಿ 16 ಮಂದಿ ಸದಸ್ಯರು ಸಕಾಲದಲ್ಲಿ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿಲ್ಲ, ಅಲ್ಲದೆ ಆರು ಮಂದಿ ಸದಸ್ಯರು ಸುಳ್ಳು ದಾಖಲೆ ನೀಡಿದ್ದಾರೆಂದು ದೂರು ಸಹ ದಾಖಲಾಗಿದೆ. ಆದರೆ ಇವರಲ್ಲಿ ಇಬ್ಬರು ಸದಸ್ಯರು ಈಗಾಗಲೇ ಕಾಲವಾಗಿದ್ದಾರೆ, ಇನ್ನಿಬ್ಬರು ಎರಡೂ ವರ್ಷದಲ್ಲಿ ಸಕಾಲದಲ್ಲಿ ಮಾಹಿತಿ ನೀಡಿಲ್ಲ ಹಾಗಾಗಿ 32 ಮಂದಿ ಸದಸ್ಯರ ಮೇಲೆ ತೂಗುಕತ್ತಿ ತೂಗುತ್ತಿದೆ.

ಬೇಕಾಬಿಟ್ಟಿ ಫೈಬರ್ ಕೇಬಲ್ ಕಡಿತ; ಬೆಂಗಳೂರಲ್ಲಿ ಡಿಜಿಟಲ್ ಕಗ್ಗತ್ತಲು?ಬೇಕಾಬಿಟ್ಟಿ ಫೈಬರ್ ಕೇಬಲ್ ಕಡಿತ; ಬೆಂಗಳೂರಲ್ಲಿ ಡಿಜಿಟಲ್ ಕಗ್ಗತ್ತಲು?

ನವ ಭಾರತಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅನಿಲ್ ಶೆಟ್ಟಿ ಎಂಬುವರು ಮಾಹಿತಿ ಹಕ್ಕಿನ ಅಡಿ ಪಡೆದ ದಾಖಲೆಗಳಿಂದ ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸದಿರುವುದು ಪತ್ತೆ ಆಗಿದೆ. 2017 ರ ಅಕ್ಟೋಬರ್‌ನಲ್ಲಿಯೇ ಆಸ್ತಿ ವಿವರ ಸಲ್ಲಿಸಬೇಕಿತ್ತು, ಆದರೆ ಇನ್ನೂ ಹಲವರು ವಿವರ ಸಲ್ಲಿಸಿಲ್ಲ.

32 BBMP corporaters may loose their membership

ಬಿಬಿಎಂಪಿ ಬೃಹತ್ ಬಜೆಟ್‌ಗೆ ಕತ್ತರಿ ಹಾಕಿದ ಮೈತ್ರಿ ಸರ್ಕಾರ ಬಿಬಿಎಂಪಿ ಬೃಹತ್ ಬಜೆಟ್‌ಗೆ ಕತ್ತರಿ ಹಾಕಿದ ಮೈತ್ರಿ ಸರ್ಕಾರ

ನಿಯಮದ ಪ್ರಕಾರ ಸದಸ್ಯನಾಗಿ ಆಯ್ಕೆಯಾದ ವ್ಯಕ್ತಿಯು ತಿಂಗಳ ಒಳಗಾಗಿ ತನ್ನ ಹಾಗೂ ಹಿಂದೂ ಕಾಯ್ದೆಯ ಅನ್ವಯ ಕುಟುಂಬದ ಆಸ್ತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು, ಅಲ್ಲದೆ ಪ್ರತಿ ವರ್ಷವೂ ಕಡ್ಡಾಯವಾಗಿ ಆಸ್ತಿ ವಿವರವನ್ನು ಸಲ್ಲಿಸಬೇಕಾಗಿರುತ್ತದೆ, ಇದು ತಪ್ಪಿದಲ್ಲಿ ಸದಸ್ಯತ್ವ ವಜಾ ಮಾಡಬಹುದಾಗಿರುತ್ತದೆ.

English summary
A PIL filed to high court by social activist that 32 BBMP corporaters membership should be cancelled because they did not submitted their asset detail in time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X