Bengaluru: ನಗರದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಸಂಖ್ಯೆ 30 ಲಕ್ಷಕ್ಕೆ ಏರಿಕೆ
ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 2024ರ ಏಪ್ರಿಲ್ ವರೆಗೆ 30,61,524 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ದ್ವಿಚಕ್ರ ವಾಹನಗಳ ನಿಯಮ ಉಲ್ಲಂಘನೆ ಸಂಖ್ಯೆಯೇ ಶೇಕಡಾ 86.89 ರಷ್ಟಾಗಿದೆ.
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನಗಳ ಸಂಖ್ಯೆಯಲ್ಲಿ ಆಟೋ ಸಂಖ್ಯೆ 5971 ಆಗಿದ್ದು, ಕಾರುಗಳ ನಿಯಮ ಉಲ್ಲಂಘನೆ ಮಾಡಿದ ಸಂಖ್ಯೆ 3,67,006 ಆಗಿದೆ. 4405 ಗೂಡ್ಸ್ ಗಾಡಿಗಳ ಮೇಲೆ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದ್ದು, 14,319 ಬಸ್‌ಗಳು, 9,584 ಟೆಂಪೋಗಳು ನಿಯಮ ಉಲ್ಲಂಘನೆ ಮಾಡಿವೆ.

ಇನ್ನು ಒಟ್ಟಾರೆ ನಿಯಮ ಉಲ್ಲಂಘನೆಯಲ್ಲಿ ಬಸ್ ಶೇಕಡಾವಾರು ಸಂಖ್ಯೆ 0.47 ಆಗಿದೆ. ಒಟ್ಟಾರೆ ದಾಖಲಾದ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಅಟೋ 0.20, ಗೂಡ್ಸ್ ಗಾಡಿ 0.14, ಕಾರ್ 11.99, ಟೆಂಪೋಗಳ ಮೇಲೆ 0.31 ಕೇಸ್ ದಾಖಲಾಗಿವೆ.
ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ಹೆಚ್ಚು
ದಾಖಲಾದಾ 30 ಲಕ್ಷ ನಿಯಮ ಉಲ್ಲಂಘನೆ ಪ್ರಕರಣಗಳು ಬೆಂಗಳೂರು ನಗರದ ವ್ಯಾಪ್ತಿಯಲ್ಲೇ ದಾಖಲಾಗಿವೆ. ಇನ್ನು ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ ದ್ವಿಚಕ್ರ ವಾಹನ ಸವಾರರ ಸಂಖ್ಯೆ ನಿವ್ವಳವಾಗಿ ಏರಿಕೆ ಆಗಿದೆ. ಹೆಲ್ಮೆಟ್ ಧರಿಸದೆ ವಾಹನ ಸವಾರಿ ಮಾಡಿದ ವಾಹನ ಸವಾರರ ಸಂಖ್ಯೆ 12,10,550 ಆಗಿದೆ.
ಸರಿಯಾದ ನಂಬರ್ ಪ್ಲೇಟ್ ಬಳಸದ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ. ನಗರದಾದ್ಯಂತ ತಪ್ಪಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳ ಸಂಖ್ಯೆ 3,53,075 ಏರಿದೆ. ಅಜಾಗರೂಕತೆಯಿಂದ ವಾಹನ ಚಾಲನೆ, ಟ್ರಾಫಿಕ್ ಸಿಗ್ನಲ್ ಜಂಪಿಂಗ್ ಪ್ರಕರಣಗಳೂ ಹೆಚ್ಚಾಗಿದೆ.

ಟ್ರಾಫಿಕ್ಸ್ ಸಿಗ್ನಲ್ ಬ್ರೇಕ್ ಮಾಡಿದ ಸಂಖ್ಯೆ ಏರಿಕೆ
ನಗರದಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಸಂಖ್ಯೆ 76,838 ಏರಿಕೆ ಆಗಿದೆ. ಟ್ರಾಫಿಕ್ ಸಿಗ್ನಲ್‌ಗಳನ್ನು ಬ್ರೇಕ್ ಮಾಡಿದ ಸಂಖ್ಯೆ 1,55,264 ಆಗಿದ್ದು, ಅಜಾಗರೂಕತೆಯಿಂದ ವಾಹನ ಚಲಾಯಿಸಿದ ವಾಹನ ಸವಾರರ ಸಂಖ್ಯೆ 1,263 ಏರಿದೆ. ಅತಿ ವೇಗವಾಗಿ ನಗರದಲ್ಲಿ ವಾಹನ ಸವಾರಿ ಮಾಡಿದ ಸವಾರರ ಸಂಖ್ಯೆ 1,787 ಏರಿದೆ.
ಡ್ರಿಂಕ್ಸ್ ಆಂಡ್ ಡ್ರೈವ್ ಪ್ರಕರಣ ಏರಿಕೆ
ಬೆಂಗಳೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡಿರುವ ವಾಹನ ಸವಾರರ ಸಂಖ್ಯೆ 4,275 ಆಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳ ಅತಿರೇಕದ ಬಳಕೆ, 44,352 ಉಲ್ಲಂಘನೆಗಳು ದಾಖಲಾಗಿವೆ. ಫುಟ್‌ಪಾತ್‌ಗಳಲ್ಲಿ ಸವಾರಿ ಮಾಡುವುದು, ಟ್ರಿಪಲ್ ರೈಡಿಂಗ್ ಮತ್ತು ನಿಷೇಧಿತ ಪ್ರದೇಶಗಳಲ್ಲಿ ಪಾರ್ಕಿಂಗ್‌ನಂತಹ ಉಲ್ಲಂಘನೆಗಳು ಸಹ ಏರಿಕೆ ಆಗಿದೆ. ಈ ಪ್ರಕರಗಳ ಸಂಖ್ಯೆ 62,688 ಆಗಿದೆ.
ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದ ಪ್ರಕರಣಗಳು ಒಟ್ಟು 2,193 ಪ್ರಕರಣಗಳು ದಾಖಲಾಗುವೆ. ಸಮವಸ್ತ್ರವಿಲ್ಲದೆ ವಾಹನ ಸವಾರಿ ಮಾಡಿದ ಸಂಖ್ಯೆಯಲ್ಲೂಏರಿಕೆ ಕಂಡಿದೆ. ಚಾಲಕರು ಸುರಕ್ಷತಾ ಬೆಲ್ಟ್ ನಿಯಮಗಳನ್ನು ಧರಿಸದಿದ್ದಕ್ಕಾಗಿ 1,05,155 ಪ್ರಕರಣಗಳು ದಾಖಲಾಗಿವೆ.












Click it and Unblock the Notifications