ಬೆಂಗಳೂರಿನ 243 ರೂಫ್ ಟಾಪ್ ಕೆಫೆಗಳಲ್ಲಿ ನಿಯಮ ಉಲ್ಲಂಘನೆ
ಬೆಂಗಳೂರಿನ ಎಸ್‌ಜಿ ಪಾಳ್ಯದ ಕೆಫೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಬಳಿಕ ಅಗ್ನಿಶಾಮಕ ದಳವು ನಗರದ ವಿವಿಧ ರೂಫ್ ಟಾಪ್ ಕೆಫೆಗಳು ಮತ್ತು ಬಾರ್‌ಗಳ ಮೇಲೆ ಕ್ರಮ ಕೈಗೊಳ್ಳುತ್ತಿದೆ. ನಗರದಲ್ಲಿ ಒಟ್ಟು 243 ರೂಫ್ ಟಾಪ್ ಸಂಸ್ಥೆಗಳು ನಿಯಮ ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
ಅಗ್ನಿಶಾಮಕ ಇಲಾಖೆಯು ಕಳೆದ ವಾರದಲ್ಲಿ ಎಲ್ಲಾ ರೂಫ್ ಟಾಪ್ ಕೆಫೆಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿದೆಯೇ ಎಂದು ಪರಿಶೀಲಿಸಿದೆ ಎಂದು ವರದಿಯಾಗಿದೆ. ಅಧಿಕಾರಿಗಳು ಸಂಸ್ಥೆಗಳಲ್ಲಿ ಪ್ರಮುಖ ಸುರಕ್ಷತಾ ಲೋಪಗಳನ್ನು ಗಮನಿಸಿದ್ದಾರೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ವಿವರವಾದ ವರದಿಯನ್ನು ಸಲ್ಲಿಸಿದರು. ಈ ಸ್ಥಳಗಳ ವಿರುದ್ಧ ನಾಗರಿಕ ಸಂಸ್ಥೆಯು ನೋಟಿಸ್‌ಗಳನ್ನು ನೀಡಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಕೋರಮಂಗಲದಲ್ಲಿ ಸಂಭವಿಸಿದ ಪ್ರಮುಖ ಬೆಂಕಿ ದುರಂತದ ನಂತರ, ಅಂತಹ ಮೇಲ್ಛಾವಣಿ ಕೆಫೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದೇವೆ ಮತ್ತು ಅಕ್ಟೋಬರ್ 26 ರವರೆಗೆ ಅಗ್ನಿಶಾಮಕ ಇಲಾಖೆಯು ಅಗ್ನಿಶಾಮಕ ಸುರಕ್ಷತಾ ನಿಯಮಗಳು ಮತ್ತು ಪರವಾನಗಿ ನಿಯಮಗಳನ್ನು ಉಲ್ಲಂಘಿಸಿರುವ 243 ಕಟ್ಟಡಗಳನ್ನು ಗುರುತಿಸಿದೆ ಎಂದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ದುರಂತದ ಬಳಿಕ ಎಚ್ಚೆತ್ತ ಇಲಾಖೆ
ಅಕ್ಟೋಬರ್ 18 ರಂದು ಬೆಂಗಳೂರಿನ ಎಸ್ ಜಿ ಪಾಳ್ಯ ಪ್ರದೇಶದ ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಕೆಫೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಕೆಳಗೆ ನಿಲ್ಲಿಸಿದ್ದ ಎರಡು ಬೈಕ್‌ಗಳು ಹಾಗೂ ಕಟ್ಟಡದ ಸಮೀಪ ಶೋರೂಂ ಒಳಗಿದ್ದ ಕಾರಿಗೆ ಹಾನಿಯಾಗಿದ್ದು, ಬೆಂಕಿ ನಂದಿಸಲಾಗಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ಕೆಫೆಯನ್ನು ತೆರವು ಮಾಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಂಕಿಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿಯುತ್ತಿರುವ ದೃಶ್ಯ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿತ್ತು. ನಂತರ ಪ್ರತ್ಯಕ್ಷದರ್ಶಿಗಳ ಪ್ರಕಾರ ಪಕ್ಕದಲ್ಲಿದ್ದವರು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.












Click it and Unblock the Notifications