ಐಎಂಎ ಸಮೂಹದ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED

ಐಎಂಎ ಸಮೂಹದ 'ಪೊಂಜಿ' ಯೋಜನೆಯ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆ ಭಾಗವಾಗಿ ಜಾರಿ ನಿರ್ದೇಶನಾಲಯವು (ಇಡಿ) ಶುಕ್ರವಾರ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡಿದೆ. ಐಎಂಎ ಸಮೂಹದಿಂದ ಸಾವಿರಾರು ಹೂಡಿಕೆದಾರರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪ ಇದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಬೆಂಗಳೂರಿನಲ್ಲಿರುವ ವಲಯ ಕಚೇರಿಯಲ್ಲಿ ಕೇಂದ್ರಿಯ ಸಂಸ್ಥೆ ಹೇಳಿದೆ. ‌197 ಕೋಟಿ ಮೌಲ್ಯದ ಸ್ಥಿರಾಸ್ಥಿ ಹಾಗೂ 12 ಕೋಟಿ ರುಪಾಯಿ ಬ್ಯಾಂಕ್ ಠೇವಣಿಯನ್ನು ಜಪ್ತಿ ಮಾಡಿಕೊಳ್ಳಲು ಆದೇಶ ನೀಡಲಾಗಿದೆ. ಒಟ್ಟು ಜಪ್ತಿಯ ಮೊತ್ತ 209 ಕೋಟಿ ರುಪಾಯಿ ಎನ್ನಲಾಗಿದೆ.

ಐಎಂಎ ಸಮೂಹದ ಕಂಪೆನಿಗಳು ಹಾಗೂ ನಾಪತ್ತೆಯಾಗಿರುವ ಕಂಪೆನಿಯ ಪ್ರವರ್ತಕ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಮನ್ಸೂರ್ ಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಕ್ರಿಮಿನಲ್ ಮೊಕದ್ದಮೆಯನ್ನು ಈಚೆಗೆ ದಾಖಲಿಸಲಾಗಿದೆ. ನಲವತ್ತು ಸಾವಿರಕ್ಕೂ ಅಧಿಕ ಹೂಡಿಕೆದಾರರ ಹಣದ ಜತೆ ಆತ ನಾಪತ್ತೆ ಆಗಿದ್ದಾನೆ.

209 crore worth of IMA group asset attached by Enforcement Directorate

ಜಾರಿ ನಿರ್ದೇಶನಾಲಯದ ಹೇಳಿಕೆ ಪ್ರಕಾರ: ಆರೋಪಿ ಕಂಪೆನಿಗಳು ಮತ್ತು ಅದರ ನಿರ್ದೇಶಕರು ಜನ ಸಾಮಾನ್ಯರಿಗೆ ಪೊಂಜಿ ಯೋಜನೆ ಮೂಲಕ ವಂಚನೆ ಮಡಿ, ಅದರಿಂದ ಬಂದ ಹಣವನ್ನು ಸ್ಥಿರ ಹಾಗೂ ಚರಾಸ್ಥಿ ಖರೀದಿಗೆ ಬಳಕೆ ಮಾಡಿದ್ದಾರೆ. ಹೂಡಿಕೆದಾರರಿಗೆ ಅಸಲಿನ ಮೇಲೆ ಎರಡೂವರೆಯಿಂದ ಮೂರು ಪರ್ಸೆಂಟ್ ಲಾಭ ನೀಡುವುದಾಗಿ ನಂಬಿಸಿ, ಖಾನ್ ಮೋಸ ಮಾಡಿದ್ದಾನೆ. ಮೋಸ ಹೋದವರ ಪೈಕಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ.

ಇನ್ನು ಕರ್ನಾಟಕ ಸರಕಾರದಿಂದ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚನೆ ಮಾಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+