ಎರಡು ದಿನದ ಶಿಶು ಕದ್ದು 80 ಸಾವಿರಕ್ಕೆ ಮಾರಾಟ
ಬೆಂಗಳೂರು, ನವೆಂಬರ್ 20: ವಾಣಿ ವಿಲಾಸ ಆಸ್ಪತ್ರೆಯಲ್ಲಿ ಎರಡು ದಿನದ ಕೂಸನ್ನು ಕದ್ದು ಮಾರಾಟ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿವಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕಳುವು ಆಗಿದ್ದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 9 ರಂದು ಅಬ್ದುಲ್ ರಶೀದ್, ಆರ್ಶೀಯಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿನ ಶ್ವಾಶಕೋಶದಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಎಳೆ ಕಂದಮ್ಮನನ್ನು ಐಸಿಯುನಲ್ಲಿ ಇರಿಸಲಾಗಿತ್ತು. ನವೆಂಬರ್ 11 ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣಿತ್ತು. ಇದೇ ಸಮಯಕ್ಕೆ ಮಹಿಳೆಯೊಬ್ಬಳು ವಾಣಿ ವಿಲಾಸ ಮಕ್ಕಳ ಆಸ್ಪತ್ರೆಗೆ ಬಂಧಿದ್ದಾಳೆ. ಮಗುವನ್ನು ತನ್ನದೇ ಎಂಬಂತೆ ಬಿಂಬಿಸಿಕೊಂಡು ಕದ್ದು ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಗುವಿನ ಅಜ್ಜಿ ಎಂದು ಹೇಳಿಕೊಂಡು ಸೆಕ್ಯುರಿಟಿ ಹಾದಿ ತಪ್ಪಿಸಿರುವ ಮಹಿಳೆ, ಮಗುವನ್ನು ಕದ್ದು ಪರಾರಿಯಾಗಿದ್ದಾಳೆ. ಕದ್ದ ಮಗುವನ್ನು ಕುಮಾರಸ್ವಾಮಿ ಲೇಔಟ್ ನಲ್ಲಿ 80 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಈ ಕುರಿತು ತನಿಖೆ ನಡೆಸಿರುವ ವಿವಿಪುರಂ ಠಾಣೆ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಕದ್ದು ಹೋಗುತ್ತಿರುವ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.
ವಾಣಿ ವಿಲಾಸ ಆಸ್ಪತ್ರೆಯಲ್ಲಿ ಎರಡು ದಿನದ ಕೂಸನ್ನು ಕದ್ದು ಮಾರಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿವಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕಳುವು ಆಗಿದ್ದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ#Bengaluru #Vanivilashospital #Infant pic.twitter.com/d1GVuBjzcm
— oneindiakannada (@OneindiaKannada) November 20, 2020












Click it and Unblock the Notifications