ಬೆಂಗಳೂರು: ಸೆ.13 ರಂದು ಸಮೃದ್ಧ ಸಾಹಿತ್ಯದ 2 ಪುಸ್ತಕ ಲೋಕಾರ್ಪಣೆ
ಬೆಂಗಳೂರು, ಸೆಪ್ಟೆಂಬರ್ 8: ಹತ್ತು ಹಲವು ಉತ್ತಮ ಪುಸ್ತಕಗಳನ್ನು ಹೊರತಂದ ಸಮೃದ್ಧ ಸಾಹಿತ್ಯ ಸೆ.13ರಂದು ಮತ್ತೆರಡು ಪುಸ್ತಕಗಳನ್ನು ಪರಿಚಯಿಸುತ್ತಿದೆ.
ಲೇಖಕ ಬಿ.ಆರ್.ಪ್ರಸಾದ್ ಅವರ 'ಶಿಕ್ಷಕರ ಡೈರಿಯಿಂದ' ಮತ್ತು 'ಒನ್ ಇಂಡಿಯಾ ಕನ್ನಡ'ದ ಅಂಕಣಕಾರ ರಂಗಸ್ಬಾಮಿ ಮೂಕನಹಳ್ಳಿ ಅವರ 'ಹಣಕ್ಲಾಸು' ಪುಸ್ತಕಗಳು ಸೆ.13 ಬುಧವಾರದಂದು ಸಂಜೆ 6 ಕ್ಕೆ ಲೋಕಾರ್ಪಣೆಗೊಳ್ಳಲಿವೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕಗಳು ಬಿಡುಗಡೆಯಾಗಲಿದ್ದು, ಖ್ಯಾತ ಬೆಂಗಳೂರು ಇತಿಹಾಸ ತಜ್ಞ ಸುರೇಶ್ ಮೂನ ಮತ್ತು ವಿಜ್ಞಾನಿಗಳು, ಖ್ಯಾತ ಅಂಕಣಕಾರರೂ ಆದ ಸುಧೀಂದ್ರ ಹಾಲ್ದೊಡ್ಡೇರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಿಡುಗಡೆಯ ದಿನ ಪುಸ್ತಕಗಳು ರಿಯಾಯಿತಿ ದರದಲ್ಲಿ ಸಿಗಲಿವೆ ಎಂದು ಸಮೃದ್ಧ ಸಾಹಿತ್ಯದ ಹರ್ಷ ಕೆ.ಆರ್.ತಿಳಿಸಿದ್ದಾರೆ.












Click it and Unblock the Notifications