2,000 ಮುಖಬೆಲೆ ನೋಟುಗಳ ರದ್ಧತಿ: ಪೆಟ್ರೋಲ್ ಬಂಕ್‌ಗಳಲ್ಲಿ ಹೆಚ್ಚಿದ ಜಗಳ
ಬೆಂಗಳೂರು, ಮೇ 23: ಭಾರತೀಯ ರಿಸರ್ವ್ ಬ್ಯಾಂಕ್ (RBI) 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರದಿಂದ ಪೆಟ್ರೋಲ್ ಬಂಕ್‌ಗಳ ಮಾಲೀಕರಲ್ಲಿ ಆತಂಕವನ್ನು ಉಂಟು ಮಾಡುತ್ತಿದೆ. ಅನೇಕ ಬಂಕ್‌ಗಳು ಎರಡು ಸಾವಿರ ಪಾವತಿಸುತ್ತಿರುವ ಬಗ್ಗೆ ಗ್ರಾಹಕರೊಂದಿಗೆ ಈಗ ಕಿತ್ತಾಡುತ್ತಿವೆ.
ಈ ಬಗ್ಗೆ ಕರ್ನಾಟಕದ ಪೆಟ್ರೋಲಿಯಂ ಡೀಲರ್‌ಗಳ ಒಕ್ಕೂಟವು ಆರ್‌ಬಿಐಗೆ ಪತ್ರವನ್ನು ರವಾನಿಸಿದ್ದು, ತೆರಿಗೆ ಅಧಿಕಾರಿಗಳ ಲೆನ್ಸ್‌ಗೆ ಒಳಪಡುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಬ್ಯಾಂಕ್‌ನ ಈ ದಿಢೀರ್ ಕ್ರಮದ ನಂತರ ಉದ್ಭವಿಸಿದ ಅನಿರೀಕ್ಷಿತ ಅಡ್ಡ ಪರಿಣಾಮಗಳನ್ನು ಈ ಸಮಸ್ಯೆಯು ಮುನ್ನಲೆಗೆ ತಂದಿದೆ. ಇದು ಜನರನ್ನು ಬೆಚ್ಚಿಬೀಳಿಸಿದಲ್ಲದೆ 2016 ರ ನೋಟು ಅಮಾನ್ಯೀಕರಣದ ನೆನಪುಗಳನ್ನು ಮರಳಿ ತಂದಿದೆ.

ಯಲಹಂಕ ಸಮೀಪದ ಪೆಟ್ರೋಲ್ ಬಂಕ್ ಕ್ಯಾಷಿಯರ್ ಒಬ್ಬರು ಪ್ರವೇಶದ್ವಾರದಲ್ಲಿ ನಿಂತು ಪಾವತಿ ವಿಧಾನದ ಬಗ್ಗೆ ಕೇಳಿದಾಗ ಆಶ್ಚರ್ಯವಾಯಿತು ಎಂದು ವ್ಯಕ್ತಿಯೊಬ್ಬರು ಮಾಹಿತಿ ನೀಡಿ. ಡಿಜಿಟಲ್‌ನಲ್ಲಿ ಹಣ ಪಾವತಿಸುತ್ತೇನೆ ಎಂದು ಹೇಳಿದ ಬಳಿಕ ಅವರು ನನ್ನನ್ನು ಒಳಗೆ ಬಿಟ್ಟರು. ಒಂದೇ ನಿಮಿಷದಲ್ಲಿ ಕ್ಯಾಷಿಯರ್ ಗ್ರಾಹಕರ ಜತೆ ಜಗಳವಾಡಿದ್ದು, 2000 ರೂಪಾಯಿ ನೋಟು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದನ್ನು ನಾನು ನೋಡಿದೆ ಎಂದು ಡಿಎಚ್ ವರದಿ ಮಾಡಿದೆ.
ಇದೇ ಮಾದರಿ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಮಾತನಾಡುತ್ತಾ, ಅನೇಕ ಪೆಟ್ರೋಲ್ ಔಟ್‌ಲೆಟ್‌ಗಳಲ್ಲಿನ ಸಿಬ್ಬಂದಿಗಳು ಗ್ರಾಹಕರನ್ನು ದೊಡ್ಡ ನೋಟಿನೊಂದಿಗೆ (2,000 ರೂ) ಪಾವತಿಸಲು ಉದ್ದೇಶಿಸಿದ್ದೀರಾ ಎಂದು ಮೊದಲೇ ಕೇಳಲು ಪ್ರಾರಂಭಿಸಿದ್ದಾರೆ ಎಂದು ಹೇಳಿದರು. ಸರತಿ ಸಾಲುಗಳು ಸಾಮಾನ್ಯವಾಗಿ ಕಡಿಮೆಯಾಗಿರುವುದರಿಂದ ಮತ್ತು ವಹಿವಾಟುಗಳು ತ್ವರಿತವಾಗಿರುವುದರಿಂದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಪೆಟ್ರೋಲ್ ಬಂಕ್‌ಗಳನ್ನೇ ಅತ್ಯುತ್ತಮ ಸ್ಥಳವೆಂದು ಜನರು ಪರಿಗಣಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾಲ್ಕೈದು ತಿಂಗಳಿಗೊಮ್ಮೆ 2000 ರೂ. ನೋಟು ಹರಿವು ಹೆಚ್ಚಾಗಿರುವುದನ್ನು ನೋಡಿದ್ದೇವೆ. ಹೆಚ್ಚಿನವರು 200 ರೂ.ಗೆ ಇಂಧನ ಖರೀದಿಸುತ್ತಾರೆ. ಇಬ್ಬರು ನಮಗೆ 2000 ರೂ. ನೋಟು ಕೊಟ್ಟರೆ ಕ್ಯಾಶ್ ಕೌಂಟರ್‌ನಲ್ಲಿ ಎಲ್ಲಾ ಚಿಲ್ಲರೆ ಮುಗಿದು ಹೋಗುತ್ತದೆ. ಚಿಲ್ಲರೆ ನಿರಾಕರಿಸಿದರೆ ಇದು ಜಗಳಕ್ಕೆ ಕಾರಣವಾಗುತ್ತದೆ ಎಂದು ರಾಜಾನುಕುಂಟೆಯಲ್ಲಿ ಪೆಟ್ರೋಲ್ ಬಂಕ್‌ನ ಮಾಲೀಕರೊಬ್ಬರು ಹೇಳಿದರು.

ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಶನ್ ಸೋಮವಾರ ಆರ್‌ಬಿಐ ಗವರ್ನರ್‌ಗೆ ಪತ್ರ ಬರೆದಿದ್ದು, ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ನಡೆದಂತಹ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷ ಕೆ.ಎಂ.ಬಸವೇಗೌಡ ಮಾತನಾಡಿ, ಇಂತಹ ಅಮಾನ್ಯಗೊಂಡ ನೋಟುಗಳ ವಹಿವಾಟಿಗೆ ಜೇನುನೊಣಗಳಂತೆ ಮುಗಿಬಿದ್ದ ಸಾರ್ವಜನಿಕರಿಂದ ಪೆಟ್ರೋಲ್ ವಿತರಕರು ಪರದಾಡುವಂತಾಗಿದೆ. ಅಂತಿಮವಾಗಿ ನಾವು ಸಾಮಾನ್ಯಕ್ಕಿಂತ ಹೆಚ್ಚಿನ 2,000 ನೋಟುಗಳನ್ನು ರವಾನೆ ಮಾಡಿದ್ದಕ್ಕಾಗಿ ತೆರಿಗೆ ಅಧಿಕಾರಿಗಳಿಂದ ನೋಟಿಸ್‌ಗಳನ್ನು ಸ್ವೀಕರಿಸಿದ್ದೇವೆ. ಪ್ರಸ್ತುತ ಸನ್ನಿವೇಶವು ಕಡಿಮೆಯಾಗಿಲ್ಲ ಎಂದರು.
ದೊಡ್ಡ ನೋಟು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಿವೆ. ಪರಿಣಾಮವಾಗಿ, ಅನೇಕರು ಅದನ್ನು ಸಾಧ್ಯವಾದಷ್ಟು ವೇಗವಾಗಿ 2,000 ರೂಪಾಯಿ ನೋಟುಗಳ ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಸಂಘದ ಅಧ್ಯಕ್ಷ ಮಾತನಾಡಿ, ಗ್ರಾಹಕರೊಂದಿಗೆ ಜಗಳವಾಡಿ ಬೇಸತ್ತಿದ್ದೇವೆ. ಬಂಕ್‌ಗಳಲ್ಲಿ ಸಿಬ್ಬಂದಿ ಹಣ ನಿರಾಕರಿಸುವುದು ಹಾಗೂ ತೆರಿಗೆ ನೋಟಿಸ್‌ನಿಂದ ನಾವು ಆತಂಕಗೊಂಡಿದ್ದೇವೆ. ಆದರೆ ಇದು ಕಾನೂನುಬದ್ಧವಾಗಿರುವವರೆಗೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಬೆಂಗಳೂರಿನ ಬಹುತೇಕ ರೀಟೇಲ್ ಸ್ಟೇಷನ್‌ಗಳು ಪ್ರತಿದಿನ ಸರಾಸರಿ 8 ರಿಂದ 10 ಲಕ್ಷ ರೂಪಾಯಿ ವಹಿವಾಟು ನಡೆಸುತ್ತವೆ. ಸುಮಾರು 60% ಪಾವತಿಗಳನ್ನು ಕಾರ್ಡ್‌ಗಳು ಅಥವಾ UPI ಮೂಲಕ ಮಾಡಲಾಗುತ್ತದೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications