ಬೆಂಗಳೂರಿನಲ್ಲಿಂದು 1172 ಕೊರೊನಾ ಕೇಸ್, ರಾಜ್ಯದಲ್ಲಿ 21 ಸಾವಿರ ಸೋಂಕು

ಬೆಂಗಳೂರು, ಜುಲೈ 4: ಕರ್ನಾಟಕದಲ್ಲಿ ಇಂದು 1839 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 21 ಸಾವಿರ ಗಡಿ ದಾಟಿದೆ.

Recommended Video

      ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ | Oneindia Kannada

      ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಕೇಸ್‌ಗಳ ಸಂಖ್ಯೆ 21549ಕ್ಕೆ ಏರಿದೆ. ಅದರಲ್ಲಿ 11966 ಕೇಸ್‌ಗಳು ಸಕ್ರಿಯವಾಗಿದ್ದು, 9244 ಜನರು ಗುಣಮುಖರಾಗಿದ್ದಾರೆ. ಈವರೆಗೂ 335 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

      ಬೆಂಗಳೂರಿನಲ್ಲಿ ಇಂದು ಕೊರೊನಾ ಸ್ಫೋಟವಾಗಿದೆ. ಒಂದೇ ದಿನ ಸಿಲಿಕಾನ್ ಸಿಟಿಯಲ್ಲಿ 1172 ಜನರಿಗೆ ಮಹಾಮಾರಿ ವಕ್ಕರಿಸಿದೆ. ಅಲ್ಲಿಗೆ ಬೆಂಗಳೂರಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 8345ಕ್ಕೆ ಜಿಗಿದಿದೆ.

      ಇನ್ನುಳಿದಂತೆ ದಕ್ಷಿಣ ಕನ್ನಡದಲ್ಲಿ ಇಂದು 75 ಜನರಿಗೆ ಕೊರೊನಾ ತಗುಲಿದೆ. ಬಳ್ಳಾರಿಯಲ್ಲಿ 73 ಮಂದಿಗೆ, ಬೀದರ್‌ನಲ್ಲಿ 51 ಜನರಿಗೆ, ಧಾರವಾಡದಲ್ಲಿ 45 ಮಂದಿಗೆ, ರಾಯಚೂರಿನಲ್ಲಿ 45 ಜನರಿಗೆ ಸೋಂಕು ದೃಢಪಟ್ಟಿದೆ.

      1839-new-coronavirus-case-reported-in-karnataka-on-july-4th

      ಮೈಸೂರಿನಲ್ಲಿ 38 ಕೇಸ್, ಕಲಬುರಗಿ ಹಾಗೂ ವಿಜಯಪುರದಲ್ಲಿ ತಲಾ 37 ಪ್ರಕರಣ, ಮಂಡ್ಯ ಮತ್ತು ಉತ್ತರ ಕನ್ನಡದಲ್ಲಿ ತಲಾ 35 ಕೇಸ್, ಶಿವಮೊಗ್ಗದಲ್ಲಿ 31 ಕೇಸ್, ಹಾವೇರಿಯಲ್ಲಿ 28 ಸೋಂಕು, ಬೆಳಗಾವಿಯಲ್ಲಿ 27 ಕೇಸ್, ಹಾಸನದಲ್ಲಿ 25 ಪ್ರಕರಣ, ಉಡುಪಿಯಲ್ಲಿ 18 ಕೇಸ್ ಪತ್ತೆಯಾಗಿದೆ.

      ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ತಲಾ 12 ಕೇಸ್ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರದಲ್ಲಿ ತಲಾ 11 ಪ್ರಕರಣ, ದಾವಣಗೆರೆಯಲ್ಲಿ 7 ಕೇಸ್, ಚಾಮರಾಜನಗರದಲ್ಲಿ 5 ಕೇಸ್, ಗದಗದಲ್ಲಿ 4 ಕೇಸ್ ಪತ್ತೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+