• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10ಲಕ್ಷ ಮಕ್ಕಳು ಭಿಕ್ಷಾಟನೆಯಲ್ಲಿ ಭಾಗಿ: ಬಿ.ಸಿ. ನಾಗೇಶ್‌ ರಾಜೀನಾಮೆ ಆಗ್ರಹ

|
Google Oneindia Kannada News

ಬೆಂಗಳೂರು ಜು.8: ಸರ್ಕಾರಿ ಶಾಲೆಗಳ ಕುರಿತು ಅತೀವ ನಿರ್ಲಕ್ಷ್ಯ ವಹಿಸಿದ ಪರಿಣಾಮ ರಾಜ್ಯದಲ್ಲಿ 10 ಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅಷ್ಟು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳಲು ಕಾರಣರಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಆಗ್ರಹಿಸಿದರು.

ಶುಕ್ರವಾರ ಬೆಂಗಳೂರಿನನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ 14 ವರ್ಷದೊಳಗಿನ 10.12 ಲಕ್ಷ ಮಕ್ಕಳು ಶಾಲೆ ಮತ್ತು ಅಂಗನವಾಡಿಯಿಂದ ಹೊರಗುಳಿದಿದ್ದಾರೆ ಎಂಬ ಆತಂಕಕಾರಿ ವರದಿಯನ್ನು ವಿವಿಧ ಇಲಾಖೆಗಳು ಹೈಕೋರ್ಟ್‌ಗೆ ಸಲ್ಲಿಸಿವೆ.

ಪರಿಷ್ಕೃತ ಪಠ್ಯ ಪುಸ್ತಕದಲ್ಲಿನ ತಿದ್ದುಪಡಿ; ಸಿದ್ದರಾಮಯ್ಯ ಗರಂಪರಿಷ್ಕೃತ ಪಠ್ಯ ಪುಸ್ತಕದಲ್ಲಿನ ತಿದ್ದುಪಡಿ; ಸಿದ್ದರಾಮಯ್ಯ ಗರಂ

ರಾಜಧಾನಿ ಬೆಂಗಳೂರಿನಲ್ಲಿ ಭಿಕ್ಷಾಟನೆ ಮಾಡುತ್ತಿರುವ 534 ಮಕ್ಕಳು ಹಾಗೂ ವ್ಯಾಪಾರದಲ್ಲಿ ತೊಂಡಗಿಕೊಂಡಿರುವ 186 ಮಕ್ಕಳು ಸೇರಿದಂತೆ ಒಟ್ಟು 720 ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನು ಬಿಬಿಎಂಪಿ ಗುರುತಿಸಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಕಡೆಗಣಿಸುತ್ತಿದೆ. ಮಕ್ಕಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರು ಈ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಬಿ.ಸಿ. ನಾಗೇಶ್‌ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಮನವಿ ಮಾಡಲಿದ್ದೇವೆ ಎಂದು ಅವರು ವಿವರಿಸಿದರು.

ಸೈಕಲ್, ಶೂ, ಸಾಕ್ಸ ನೀಡದಿರುವುದು ಖಂಡನೀಯ

ಸೈಕಲ್, ಶೂ, ಸಾಕ್ಸ ನೀಡದಿರುವುದು ಖಂಡನೀಯ

ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ, ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಂತಾದವುಗಳಲ್ಲೇ ಶಿಕ್ಷಣ ಸಚಿವರು ಕಾಲಹರಣ ಮಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡಲಾಗುತ್ತಿದ್ದ ಸೈಕಲ್‌, ಶೂ, ಸಾಕ್ಸ್‌ ಮುಂತಾದವುಗಳನ್ನು ಈ ಬಾರಿ ನೀಡದಿರಲು ಬಿಜೆಪಿ ಸರ್ಕಾರದ ನಿರ್ಧರಿಸಿರುವುದನ್ನು ಅವರು ಇದೇ ವೇಳೆ ಖಂಡಿಸಿದರು.

ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ

ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ

ರಾಜ್ಯದಲ್ಲಿನ ಬಹುತೇಕ ಸರ್ಕಾರಿ ಶಾಲೆಗಳ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳು ಆತಂಕದಿಂದ ತರಗತಿಗಳಲ್ಲಿ ಕೂರಬೇಕಾಗಿದೆ. ಶಾಲೆಗಳಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ ಮುಂತಾದ ಮೂಲ ಸೌಕರ್ಯಗಳು ಸಮರ್ಪಕವಾಗಿ ಒದಗಿಸಲಾಗಿಲ್ಲ. ಇನ್ನು ಮುಖ್ಯವಾಗಿ ವಿದ್ಯಾಸಿರಿ, ಕ್ಷೀರಭಾಗ್ಯ, ಬಿಸಿಯೂಟ ಮುಂತಾದ ಯೋಜನೆಗಳನ್ನೂ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಭಾಸ್ಕರ್‌ ರಾವ್‌ ದೂರಿದರು.

ಪಠ್ಯ ನೀಡಿದೇ ಈ ಬಾರಿಯೂ ಅವ್ಯವಸ್ಥೆ

ಪಠ್ಯ ನೀಡಿದೇ ಈ ಬಾರಿಯೂ ಅವ್ಯವಸ್ಥೆ

ಈ ಸಂರ್ಭದಲ್ಲಿ ಆಮ್‌ ಆದ್ಮಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಕುಶಾಲಸ್ವಾಮಿ ಮಾತನಾಡಿ, "ಬೆಂಗಳೂರು ವಿಶ್ವವಿದ್ಯಾಲಯದ ತರಗತಿಗಳು ಆರಂಭವಾಗಿ ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಇನ್ನೂ ಸಿಕ್ಕಿಲ್ಲ. ಕಳೆದ ಸೆಮಿಸ್ಟರ್ ನಲ್ಲಿ ಪರೀಕ್ಷೆಗೆ ಕೇವಲ ಎರಡು ವಾರಗಳು ಇರುವಾಗ ಪುಸ್ತಕ ನೀಡಲಾಗಿತ್ತು. ಈ ಬಾರಿಯೂ ಅದೇ ರೀತಿಯ ಅವ್ಯವಸ್ಥೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ," ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯ ಪಿಡಿಎಫ್ ಸಹ ಆಗಿಲ್ಲ

ಪಠ್ಯ ಪಿಡಿಎಫ್ ಸಹ ಆಗಿಲ್ಲ

ಪ್ರಸ್ತುತ ಶೈಕ್ಷಣಿಕ ವರ್ಷ ಆರಂಭವಾದರೂ ಇನ್ನು ಪಠ್ಯಕ್ರಮವನ್ನು ಪಿಡಿಎಫ್ ಮಾಡ ಸಹ ನೀಡದೇ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಗೊಂದಲದಲ್ಲಿ ಸಿಲುಕಿಸಲಾಗಿದೆ. ಅಂಗನವಾಡಿ, ಶಾಲೆ, ಕಾಲೇಜು ಎಂಬ ಭೇದವಿಲ್ಲದೇ ಇಡೀ ಶೈಕ್ಷಣಿಕ ವಲಯವೇ ಬಿಜೆಪಿ ಸರ್ಕಾರದಿಂದ ಶೋಚನೀಯ ಸ್ಥಿತಿಗೆ ತಲುಪಿದೆ ಎಂದು ಆಕ್ರೋಶ ಹೊರಹಾಕಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಬೆಂಗಳೂರು ಮಹಿಳಾ ಘಟಕದ ಉಷಾ ಮೋಹನ್, ಮರಿಯಾ, ಸುಹಾಸಿನಿ, ಫಣಿರಾಜ್ , ಸುಮನ್ ಪ್ರಶಾಂತ ಮತ್ತಿತರರು ಉಪಸ್ಥಿತರಿದ್ದರು.

Recommended Video

   Japan ನ Shinzo Abe ಭಾಷಣದ ವೇಳೆ ಗುಂಡು ಹಾರಿಸಿದ ದುಷ್ಕರ್ಮಿ | OneIndia Kannada
   English summary
   Karnataka Government neglected to government schools, than 10 lakh children dropped school and education, now children are begging, Aam Aadmi Party urge resignation of Primary & Secondary Education minister BC Nagesh,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X