ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹಕ್ಕೆ ಬನ್ನಿ, ಬನ್ನಿ!

Posted By:
Subscribe to Oneindia Kannada

ಬಳ್ಳಾರಿ, ಅಕ್ಟೋಬರ್ 19: ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಲುಕಿ ತವರೂರಿಗೂ ಹೋಗಲು ಹೆಣಗಾಡುತ್ತಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆಯಲ್ಲಿ ಈಗ ಮದುವೆ ಸಂಭ್ರಮ. ಪುತ್ರಿ ಬ್ರಹ್ಮಣಿ ಮದುವೆಗೆ ವಿಶೇಷವಾದ ವಿಡಿಯೋ ಆಹ್ವಾನ ಪತ್ರಿಕೆಯನ್ನು ಜನತೆಯ ಮುಂದಿಟ್ಟಿದ್ದಾರೆ.

ಮಗಳ ಮದುವೆಗಾಗಿ ಬಳ್ಳಾರಿಗೆ ಹೋಗಲು ಗಾಲಿ ಜನಾರ್ಧನ ರೆಡ್ಡಿಗೆ ಸುಪ್ರೀಂಕೋರ್ಟ್ ಅಕ್ಟೋಬರ್ ಮೊದಲ ವಾರವಷ್ಟೇ ಅನುಮತಿ ನೀಡಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೈದರಾಬಾದ್‌ ಮೂಲದ ಉದ್ಯಮಿಯ ಪುತ್ರ ರಾಜೀವ್‌ ರೆಡ್ಡಿ ಅವರೊಂದಿಗೆ ನವೆಂಬರ್‌ 16ರಂದು ವಿವಾಹ ಮಹೋತ್ಸವ ನಡೆಯಲಿದೆ.[ಗಾಲಿ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಅನುಮತಿ!]

Watch : Gali Janardhan Reddy daughter Brahmani's wedding invitation

ಹೇಗಿದೆ ಆಹ್ವಾನ: ಬನ್ನಿ ಬನ್ನಿ ಎಂದು ಹಾಡುತ್ತಾ ಹೊಸ ಗೆಟ್ ಅಪ್ ನಲ್ಲಿ ಗಾಲಿ ರೆಡ್ಡಿ ಹಾಗೂ ಅವರ ಪತ್ನಿ, ಪುತ್ರ ನಿಮ್ಮ ಮುಂದೆ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ. ರೆಡ್ಡಿ ಕುಟುಂಬ ವಿಶಿಷ್ಟ ಆಹ್ವಾನ ಪತ್ರಿಕೆ ಕಮ್ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಆಹ್ವಾನ ಪತ್ರಿಕೆ ಅಥವಾ ಬಾಕ್ಸ್ ಪಡೆದವರಿಗೆ ಎಚ್ ಡಿ ಎಲ್‌ ಸಿಡಿ ಪರದೆ ಕಾಣಿಸುತ್ತದೆ. ಅದರಲ್ಲಿ ರೆಡ್ಡಿ ದಂಪತಿ ಹಾಡಿನ ಮೂಲಕ ಆಹ್ವಾನ ನೀಡುತ್ತಾರೆ. [ಜನಾರ್ದನ ರೆಡ್ಡಿಗೆ 2 BHK ಮನೆ]


ಈ ಆಮಂತ್ರಣ ಪತ್ರಿಕೆಯನ್ನು ನಟ, ನಿರ್ದೇಶಕ ಸಾಯಿ ಕುಮಾರ್‌ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆಯಂತೆ. ತೆಲುಗು ಚಿತ್ರರಂಗದ ತಂತ್ರಜ್ಞರು ರೂಪಿಸಿದ್ದಾರೆ. ಫಲ ತಾಂಬೂಲ, ಹಣ್ಣು ಹಂಪಲುಗಳ ಜತೆ ಈ ಆಹ್ವಾನ ಪತ್ರಿಕೆ ಪಡೆದವರು ಎರೆಡೆರೆಡು ಬಾರಿ ಕಣ್ ಮಿಟುಕಿಸದೆ ನೋಡಿದ್ದಾರೆ.

ಮದುವೆ ಆರತಕ್ಷತೆಗೆ ನಟ ಶಾರುಖ್ ಖಾನ್, ಪ್ರಭುದೇವ, ನಟಿ ತಮನ್ನಾ ಹಾಗೂ ಕತ್ರೀನಾ ಕೈಫ್ ಅವರು ಬಂದು ಹಾಡಿ ಕುಣಿದು ಹೋಗುತ್ತಾರೆ ಎಂಬ ಸುದ್ದಿಯಿದೆ.

ಮಗಳ ಮದುವೆ ಸಂಭ್ರಮದಲ್ಲಿರುವ ಗಾಲಿ ರೆಡ್ಡಿ ಅವರು ನವೆಂಬರ್ 22ರ ತನಕ ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೆಲೆಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mining baron and former Karnataka minister G Janardhana Reddy has invited one and all for his daughter Bahmini's marriage with Rajeev Reddy. The wedding invite includes a box containing HD LCD screen playing video
Please Wait while comments are loading...