ಅಯ್ಯೋ ಪರಮಾತ್ಮ ಅಂದ್ರು ಮೇಷ್ಟ್ರು ದತ್ತಾ!

ಬೆಳಗಾವಿ, ನ.27 : ನಾವು ಯಾರಾದ್ರೂ ಸತ್ರೆ ಅವ್ರ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಮೌನ ಆಚರಿಸ್ತೀವಿ. ದೇವರಲ್ಲಿ ಪ್ರಾರ್ಥನೆ ಮಾಡ್ತೀವಿ. ಆದ್ರೆ ಸತ್ತವರ ಆತ್ಮಕ್ಕೆ ನಮ್ಮ ಸಂತಾಪ ಸೂಚನೆ ತಲುಪುತ್ತಾ ಅಂತಾ ನಿಮ್ಗೆ ಏನಾದ್ರೂ ಅನ್ನಿಸಿದ್ರೆ ಈ ಕಡೆ ಸ್ವಲ್ಪ ಗಮನ ಕೊಡಿ. ಆತ್ಮಕ್ಕೆ ಶಾಂತಿ ಸಿಗೋದಕ್ಕೆ ಏನು ಮಾಡ್ಬೇಕು? ಅನ್ನೋದಕ್ಕೆ 80 ವರ್ಷ ದಾಟಿದ್ರು ತರುಣನ ಉತ್ಸಾಹ ಇರೋ ನಮ್ ಸ್ಪೀಕರ್ ಕಾಗೋಡು ತಿಮ್ಮಪ್ಪ ಒಳ್ಳೇ ಐಡಿಯಾ ಕೊಟ್ಟಿದ್ದಾರೆ.

ಯೆಸ್, ಕುಂದಾನಗರಿಯ ಚಳಿಗಾಲದ ಅಧಿವೇಶನದ 2ನೇ ದಿನ ಇಂತಹ ಆತ್ಮಕ್ಕೆ ಶಾಂತಿ ಸಿಗುವ ಬಗ್ಗೆ ಹಾಸ್ಯ ಮಿಶ್ರಿತ ಚರ್ಚೆ ಆಯ್ತು. ಸದನ ಆರಂಭವಾದಾಗ ನಿಧನರಾದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ ನಿರ್ಣಯ ಕೈಗೊಳ್ಳಲಾಯ್ತು.

assembly session

ಆಗ ತಕ್ಷಣ ಮೇಲೆದ್ದ ಮೇಸ್ಟ್ರು ಎಂದೇ ಕರೆಸಿಕೊಳ್ಳುವ ಜೆಡಿಎಸ್ ಉಪನಾಯಕ ವೈ.ಎಸ್‌.ವಿ.ದತ್ತ ನಮ್ಮ ಸಂತಾಪ ನಿರ್ಣಯ ನಿಧನರಾದವರ ಆತ್ಮಕ್ಕೆ ತಲುಪುತ್ತಾ? ಅದನ್ನ ಹೇಗೆ ಕಳುಹಿಸಿಕೊಡ್ತೀರೀ? ಇದು ಅವ್ರಿಗೆ ತಲುಪಿದೆ ಅಂತಾ ನಮ್ಗೆ ಹೇಗೆ ಗೊತ್ತಾಗುತ್ತೆ? ಅಂತಾ ಕಾಮಿಡಿ ಮಾಡಿದ್ರು.

ಆಗ 80 ವರ್ಷದಿಂದ ಎಲ್ಲಾ ಕೆರೆಗಳ ನೀರು ಕುಡಿದಿರೋ ನಮ್ ಸ್ಪೀಕರ್ ಕಾಗೋಡು ತಿಮ್ಮಪ್ಪ ಬಿಡ್ತಾರಾ? ತಕ್ಷಣ ರಿಯಾಕ್ಟ್ ಮಾಡಿದ ಅವ್ರು ರೀ... ದತ್ತಾ ನಮ್ ಸಂತಾಪ ನಿರ್ಣಯ ನಿಧನರಾದವರ ಆತ್ಮಕ್ಕೆ ತಲುಪಿದಿಯೋ ಇಲ್ವಾ ಅನ್ನೋದನ್ನ ತಿಳಿಯೋದಕ್ಕೆ ನಿಮ್ಮನ್ನೇ ಮೇಲೆ ಕಳುಹಿಸಿದ್ರೆ ಆಯ್ತು ಅಂತಾ ಕಾಮಿಡಿ ಮಾಡಿದ್ದೇ.. ಆಯ್ಯೋ ಬೇಡಪ್ಪಾ ಅಂತಾ ಸುಮ್ನೇ ಕುತ್ಕೋಬಿಟ್ರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು. ನಿಮ್ಮ ಸಂತಾಪ ಆತ್ಮಗಳಿಗೆ ತಲುಪಿರೋದನ್ನ ನೋಡಬೇಕಾ..!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+