ಬೆಳಗಾವಿ: ಜೈಲಿನ ಗೋಡೆ ಕೊರೆದು ಮೂವರು ಆರೋಪಿಗಳು ಪರಾರಿ
ಬೆಳಗಾವಿ, ಆಗಸ್ಟ್ 26 : ಜಿಲ್ಲೆಯ ಚಿಕ್ಕೋಡಿ ಉಪ ಕಾರಾಗೃಹದಿಂದ ಶುಕ್ರವಾರ ಮೂವರು ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ.
ಶೌಚಾಲಯದ ಗೋಡೆ ಕೊರೆದು ವಿವಿಧ ಪ್ರಕರಣದಲ್ಲಿ ಜೈಲು ಸೇರಿದ್ದ ಅಶೋಕ ಬೋಸಲೆ, ಶತರ ಪವಾರ, ನಿತಿನ್ ಜಾದವ್ ಮೂವರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವೀಂದ್ರ ಗಡಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಹಿಂದೆಯೂ ಇದೇ ರೀತಿಯಲ್ಲಿ ಇಬ್ಬರು ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications