ಗೋವಾದಿಂದ ಬೆಂಗಳೂರಿಗೆ ಬರುವಾಗ ಲಾರಿಗೆ ಕಾರು ಡಿಕ್ಕಿ: ಮೂವರ ಸಾವು
ಬೆಳಗಾವಿ, ಮಾರ್ಚ್ 29: ಗೋವಾದಿಂದ ಟ್ರಿಪ್ ಮುಗಿಸಿ ಜಾಲಿಯಾಗಿ ಬೆಂಗಳೂರಿಗೆ ಹಿಂದಿರುಗುತ್ತಿದ್ದವರನ್ನು ಕರೆದೊಯ್ಯಲು ಜವರಾಯ ಕಾದುಕುಳಿತಿದ್ದ.
ಕಾರು ಟಿಪ್ಪರ್ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ.
ಹೆಬ್ಬಾಳ ಗ್ರಾಮದ ಬೆಳಗಾವಿ - ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಬೆಂಗಳೂರಿನ ನಾಗೇನಹಳ್ಳಿ ನಿವಾಸಿ ಬಿ.ಎಸ್ ಬಾಬಯ್ಯ (66), ಅವರ ಸೊಸೆ ಅಜೀರಾಬಿ (33) ಮತ್ತು ಮೊಮ್ಮಗ ಜಯಾದ ಅಬ್ಬಾಸ್ (4) ಮೃತರು.

ಬಿ.ಎಸ್.ಬಾಬಯ್ಯ ಅವರ ಪುತ್ರ ಜಹೀರ್ ಅಬ್ಬಾಸ್, ಬಾಬಯ್ಯ ಅವರ ಪತ್ನಿ ಚಾಂದಬೀಬಿ ಮತ್ತು ಮೊಮ್ಮಗ ಜುನೇದ ಅಹ್ಮದ್ ಗಾಯಗೊಂಡಿದ್ದು, ಅವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಹೀರ್ ಅಬ್ಬಾಸ್ ಕುಟುಂಬದವರೆ ಜೊತೆಗೆ ತಮ್ಮ ಕಾರಿನಲ್ಲಿ ಗೋವಾ ಪ್ರವಾಸಕ್ಕೆ ಹೋಗಿದ್ದರು. ಪ್ರವಾಸ ಮುಗಿಸಿ ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದರು. ಆಗ ಹೆಬ್ಬಾಳ ಬಳಿ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಬಯ್ಯ, ಅಜೀರಾಬಿ ಮತ್ತು ಜಯಾದ ಅಬ್ಬಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.












Click it and Unblock the Notifications