Belagavi To Sabarimala Train : ಬೆಳಗಾವಿ-ಶಬರಿಮಲೆ ವಿಶೇಷ ರೈಲು, ವೇಳಾಪಟ್ಟಿ

ಬೆಳಗಾವಿ, ನವೆಂಬರ್ 13; ನೈಋತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆಯಂತೆ ಬೆಳಗಾವಿಯಿಂದ ಶಬರಿಮಲೆಗೆ ವಿಶೇಷ ರೈಲು ಓಡಿಸುತ್ತಿದೆ. ಇದರಿಂದಾಗಿ ಶಬರಿಮಲೆ ದೇವಾಲಯಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗಲಿದೆ.

ರೈಲು ನಂಬರ್ 07357/ 07358 ಬೆಳಗಾವಿ-ಕೊಲ್ಲಂ ಜಂಕ್ಷನ್-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ.

ಬೆಳಗಾವಿಯಿಂದ ನವೆಂಬರ್ 20ರಂದು ರೈಲು ಹೊರಡಲಿದೆ. ಕೊಲ್ಲಂ ಜಂಕ್ಷನ್‌ನಿಂದ ನವೆಂಬರ್ 21ರಂದು ಹೊರಡಲಿದೆ. ಈ ರೈಲು ಒಂದು ಟ್ರಿಪ್ ಮಾತ್ರ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

SWR To Run Special Train Between Belagavi To Sabrimala

ರೈಲು ನಂಬರ್ 07357 ಬೆಳಗಾವಿಯಿಂದ ನವೆಂಬರ್‌ 20ರ ಭಾನುವಾರ 11.10ಕ್ಕೆ ಹೊರಡಲಿದೆ. ಕೊಲ್ಲಂ ಜಂಕ್ಷನ್‌ ಅನ್ನು ಸೋಮವಾರ ಮಧ್ಯಾಹ್ನ 3.15ಕ್ಕೆ ತಲುಪಲಿದೆ.

ವಾಪಸ್ ಬರುವ ಮಾರ್ಗದಲ್ಲಿ ರೈಲು ನಂಬರ್ 07358 ಕೊಲ್ಲಂ ಜಂಕ್ಷನ್‌ನಿಂದ ಸೋಮವಾರ 5.10ಕ್ಕೆ ಹೊರಡಲಿದೆ. ಬೆಳಗಾವಿಗೆ ಮಂಗಳವಾರ 11 ಗಂಟೆಗೆ ಆಗಮಿಸಲಿದೆ.

ಈ ವಿಶೇಷ ರೈಲಿನಲ್ಲಿ 8 3 ಟೈರ್‌ ಎಸಿ ಕೋಚ್, 9 3 ಟೈರ್ ಸ್ಲೀಪರ್‌, 1 ಎಸಿ 2 ಟೈರ್ ಮತ್ತು ಲಗೇಜ್ ಮತ್ತು ಜನರೇಟರ್ ಕಾರ್ ಹೊಂದಿದೆ.

ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ನೈಋತ್ಯ ರೈಲ್ವೆ ಹಲವಾರು ಜಿಲ್ಲೆಗಳಿಂದ ರೈಲು ಓಡಿಸುತ್ತಿದೆ. ರೈಲು ಸಂಖ್ಯೆ 07385/ 07386 ವಿಜಯಪುರ -ಕೊಟ್ಟಾಯಂ-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಕೊಲ್ಲಂ ಜಂಕ್ಷನ್ ತನಕ ವಿಸ್ತರಣೆ ಮಾಡಲಾಗಿದೆ.

ಹುಬ್ಬಳ್ಳಿ, ಧಾರವಾಡ ಮತ್ತು ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆಗೆ ತೆರಳಲು ಅನುಕೂಲವಾಗುವಂತೆ ನವೆಂಬರ್ 12ರಿಂದ ರೈಲು ಸೇವೆ ಆರಂಭಿಸಲಾಗಿದೆ. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+