ಸಂಡೇ ಲಾಕ್ ಡೌನ್: ಕುಂದಾನಗರಿ ಸಂಪೂರ್ಣ ಸ್ತಬ್ಧ
ಬೆಳಗಾವಿ, ಮೇ 24: ರಾಜ್ಯಾದ್ಯಂತ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯು ಸಂಪೂರ್ಣ ಸ್ತಬ್ಧವಾಗಿದೆ.
ಬೆಳಗಾವಿಯಲ್ಲಿ ಸಂಡೇ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಇಂದು ಬೆಳ್ಳಂಬೆಳಿಗ್ಗೆ ಪೊಲೀಸರು ರಸ್ತೆಗಿಳಿದಿದ್ದು, ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ.
ಅನಗತ್ಯವಾಗಿ ರಸ್ತೆಗೆ ಬರುತ್ತಿರುವ ಕಾರು ಮತ್ತು ಬೈಕ್ ಸವಾರರನ್ನು ಪೊಲೀಸರು ವಾಪಾಸ್ ಕಳುಹಿಸುತ್ತಿದ್ದಾರೆ. ನಗರದಲ್ಲಿ ಆಟೋ ಮತ್ತು ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಅಗತ್ಯ ಸಾಮಾಗ್ರಿಗಳಾದ ಹಾಲು ಮತ್ತು ತುರ್ತು ಸೇವೆ ಮಾತ್ರ ಇಂದು ಲಭ್ಯ ಇದೆ. ಈ ಹಿಂದೆ ಮೊದಲೇ ನಿಗದಿಯಾದ ವಿವಾಹಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಆದರೆ ವಿವಾಹದಲ್ಲಿ 25 ಜನ ಮಾತ್ರ ಭಾಗವಹಿಸಲು ಅವಕಾಶ ನೀಡಿದೆ. ಬೆಳಗಾವಿ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜನೆಗೊಂಡಿದೆ.












Click it and Unblock the Notifications