ರಾಜ್ಯದಲ್ಲಿ ಶ್ರೀರಾಮ ಸೇನೆ ನಿಷೇಧಕ್ಕೆ ಚಿಂತನೆ
ಬೆಳಗಾವಿ, ಸೆ. 12 : ವಿವಾದಿತ ಶ್ರೀರಾಮ ಸೇನೆಯನ್ನು ಕರ್ನಾಟಕದಲ್ಲಿ ನಿಷೇಧಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆ ಸಂಘಟನೆಗೆ ಗೋವಾದಲ್ಲಿ ಈಗಾಗಲೇ ನಿಷೇಧ ಹೇರಲಾಗಿದೆ. ಶಾಂತಿ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲೂ ಇಂಥ ಚಿಂತನೆ ಮಾಡಬೇಕಾದ್ದು ಅನಿವಾರ್ಯ ಎಂದು ಹೇಳಿದರು.

ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಲಾಗುತ್ತದೆ ಎಂಬ ವದಂತಿಗಳಿಗೆ ಅರ್ಥವಿಲ್ಲ. ಎಂದಿಗೂ ಬೆಂಗಳೂರೇ ಎಂದಿಗೂ ರಾಜಧಾನಿಯಾಗಿರುತ್ತದೆ. ರಾಜ್ಯದ ಎಲ್ಲ ನಗರಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಚಿಕ್ಕೋಡಿಗೆ ಬೆಳವಣಿಗೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.(ಪ್ರೇಮಿಗಳಿಗೆ ಮತ್ತೆ ಮುತಾಲಿಕ್ ಭಯ)
ಬೆಳಗಾವಿಗೆ ನೂತನ ಪೊಲೀಸ್ ಕಮೀಷನರ್
ಬೆಳಗಾವಿಗೆ ನೂತನ ಪೊಲೀಸ್ ಕಮೀಷನರ್ ನೇಮಕವಾಗಿದೆ. ಪ್ರಥಮಮ ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗಾವಿ ನಾಗರಿಕರ ಅನೇಕ ದಿನಗಳ ಕನಸು ಈಗ ನನಸಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇದೊಂದು ಮಹತ್ತರ ಮೈಲಿಗಲ್ಲು ಎಂದು ಹೇಳಲಾಗಿದೆ.
Belgaum has its own Police Commissionerate & Bhaskar Rao is the First Police Commissioner of Belgaum.@OneindiaKannada pic.twitter.com/4UXpwaI88T
— All About Belgaum (@allaboutbelgaum) September 12, 2014 











Click it and Unblock the Notifications