ಬೆಳಗಾವಿ: ತಡವಾಗಿ ಬೆಳಕಿಗೆ ಬಂದ ಗ್ಯಾಂಗ್ ರೇಪ್: ಐವರ ಬಂಧನ

ಬೆಳಗಾವಿ, ಅಕ್ಟೋಬರ್ 03: ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ನಡೆದಿದ್ದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪೈಸಾಚಿಕ ಕೃತ್ಯ ನಡೆಸಿದ್ದ ಆರು ಮಂದಿ ಪೈಕಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೋಕಾಕ್‌ ಪಟ್ಟಣದ ಆದಿತ್ಯ ನಗರದಲ್ಲಿ ಕುಖ್ಯಾತ 'ಬೆನಚಿನಮರಡಿ ಖಿಲಾರಿ' ಮತ್ತು 'ಎಸ್‌ಪಿ ಸರ್ಕಾರ್' ಗ್ಯಾಂಗ್‌ನ ಆರು ಜನ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಅತ್ಯಾಚಾರವೆಸಗಿದ ಘಟನೆ ಸೆಪ್ಟೆಂಬರ್ 5 ರಂದು ನಡೆದಿದೆ. ಈ ಪ್ರಕರಣ ಸೆಪ್ಟೆಂಬರ್ 18 ರಂದು ಬೆಳಕಿಗೆ ಬಂದಿದೆ.

Six Gangraped in Belagavi Five Arrested, One On The Run

ಬೆಳಗಾವಿ ಜಿಲ್ಲಾ ಪೊಲೀಸರು ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಗೋಕಾಕ್ ಪಟ್ಟಣದ ನಿವಾಸಿಗಳಾದ ದುರ್ಗಪ್ಪ ಸೋಮ್ಲಿಂಗ್ ವಡ್ಡರ, ರಮೇಶ ಉದ್ದಪ್ಪ ಖಿಲಾರಿ, ಯಲ್ಲಪ್ಪ ಸಿದ್ದಪ್ಪ ಗಿಸ್ನಿಂಗವ್ವಗೋಳ, ರಾಮಸಿದ್ದ ಗುರುಸಿದ್ದಪ್ಪ ತಾಪ್ಸಿ ಮತ್ತು ಕೃಷ್ಣ ಪ್ರಕಾಶ ಪೂಜೇರಿ ಎಂದು ತಿಳಿದು ಬಂದಿದೆ.

ಪರಿಚಿತನ ಸಹಾಯದಿಂದ ಕೃತ್ಯ

ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತ ಬಸವರಾಜ್ ವಸಂತ್ ಖಿಲಾರಿ ಎನ್ನಲಾಗಿದ್ದು, ಆತನಿಗೆ ಶೋಧ ನಡೆಸಲಾಗುತ್ತಿದೆ. ಸಂತ್ರಸ್ತೆ ಸೆ. 5ರಂದು ವ್ಯಕ್ತಿಯೊಬ್ಬನೊಂದಿಗೆ ಗೋಕಾಕ್ ಪಟ್ಟಣದಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಆಕೆಗೆ ಪರಿಚಯವಿದ್ದ ಬಸವರಾಜ ಖಿಲಾರಿ ಚಹಾ ಕುಡಿಯಲು ಮನೆಗೆ ಆಹ್ವಾನಿಸಿ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗೆ ಬಂದ ಸಂತ್ರಸ್ತೆಗೆ ಕೊಠಡಿಗೆ ಕೂರಿಸಿ ಬೀಗ ಹಾಕಿ ಸ್ನೇಹಿತರನ್ನು ಕರೆಸಿದ್ದಾನೆ. ಐವರು ಆರೋಪಿಗಳು ಬಸವರಾಜ್ ಖಿಲಾರಿ ಅವರ ಮನೆಗೆ ತಲುಪಿದ ನಂತರ ಅವರು ಸಂತ್ರಸ್ತೆ ಮತ್ತು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರು. ಸಂತ್ರಸ್ತೆಯ ಫೋಟೋಗಳನ್ನು ತೆಗೆದು ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ.

Six Gangraped in Belagavi Five Arrested, One On The Run

ಹಣ, ಚಿನ್ನಭರಣ ಕಸಿದು ಕೃತ್ಯ

ಸಂತ್ರಸ್ತೆಯ ಬ್ಯಾಗ್, ಕಿವಿಯೋಲೆಗಳು ಮತ್ತು ಎಟಿಎಂ ಕಾರ್ಡ್‌ನಿಂದ 2000 ರೂ.ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಆರೋಪಿಗಳು ಸಂತ್ರಸ್ತೆಯ ಬಾಯಿಗೆ ಕಟ್ಟಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಈ ಆರೋಪಿಗಳನ್ನು ಸೆಪ್ಟೆಂಬರ್ 18 ರಂದು ಡಕಾಯಿತಿ ಪ್ರಕರಣದಲ್ಲಿ ಬಂಧಿಸಿದಾಗ ಈ ಘಟನೆ ಬೆಳಕಿಗೆ ಬಿದ್ದಿದೆ. ನಮ್ಮ ಪೊಲೀಸರು ಆರು ಮೋಟಾರ್ ಸೈಕಲ್‌ಗಳು, ಒಂಬತ್ತು ಮೊಬೈಲ್ ಫೋನ್‌ಗಳು, ಒಂದು ಸರಕು ವಾಹನ ಮತ್ತು ನಾಲ್ಕು ಕತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅಲ್ಲದೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ನಡುವೆ ಸಂತ್ರಸ್ತೆ ಸೆ.29ರಂದು ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರೆ. ನಾಲ್ವರನ್ನು ಸಾಮೂಹಿಕ ಅತ್ಯಾಚಾರದ ಮೇಲೆ ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+