ಹೆಸ್ಕಾಂ ಜೆಇಗೆ ಲೈಂಗಿಕ ಕಿರುಕುಳ ಪ್ರಕರಣ : ಸಿಎಂ ಗರಂ
ಬೆಳಗಾವಿ, ಡಿ. 20: ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದ ಇಲ್ಲಿಯ ಹೆಸ್ಕಾಂ ಇಲಾಖೆಯ ಮಹಿಳಾ ಜೆಇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪೊಲೀಸರ ವಿರುದ್ಧ ದೂರಿದ್ದಾರೆ.
ತಮಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ದೂರು ನೀಡಿದ್ದರೂ, ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿಸಿಪಿ ಅನುಪಮ್ ಅಗರವಾಲ್ ಹಾಗೂ ಡಿವೈಎಸ್ಪಿ ಹುಲಸಗುಂದ್ ಅವರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ದೂರು ನೀಡಿರುವ ಮಹಿಳಾ ಜೆಇ ಅವರಿಂದ ಮರು ಹೇಳಿಕೆ ಪಡೆಯಬೇಕು. ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದ್ದಾರೆ.












Click it and Unblock the Notifications