ಲಿಂಗಾಯತ ಧರ್ಮಕ್ಕೆ ಬೆಳಗಾವಿ ಸಮಾವೇಶದಲ್ಲಿ ನಿರ್ಣಯ ಅಂಗೀಕಾರ
ಬೆಳಗಾವಿ, ಆಗಸ್ಟ್ 22 : ಲಿಂಗಾಯತ ಧರ್ಮಕ್ಕಾಗಿ ಇಂದು (ಮಂಗಳವಾರ) ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಪ್ರತೇಕ ಧರ್ಮದ ಮುಂದಿನ ಹೋರಾಟದ ರೂಪುರೇಷ ಕುರಿತು ಚರ್ಚೆ ನಡೆಸಲಾಯಿತು.
ಇಲ್ಲಿನ ಲಿಂಗರಾಜ ಕಾಲೇಜು ಮೈದಾನದಲ್ಲಿ ಗದಗದ ಶ್ರೀ ತೊಂಟದಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸಮಾವೇಶದಲ್ಲಿ, ಲಿಂಗಾಯತ, ವೀರಶೈವ ಒಂದೇ ಅಲ್ಲ. ಲಿಂಗಾಯತಕ್ಕೆ ಪ್ರತೇಕ ಧರ್ಮ ಮಾನ್ಯತೆ ನೀಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸಮಾವೇಶದಲ್ಲಿ ಆಗ್ರಹಿಸಲಾಯಿತು.

ಲಿಂಗಾಯತ ಧರ್ಮಕ್ಕೆ ಬೆಳಗಾವಿ ಸಮಾವೇಶದಲ್ಲಿ ನಿರ್ಣಯ ಅಂಗೀಕಾರವನ್ನು ಜೆಡಿಎಸ್ ಹಿರಿಯ ಮುಖಂಡ ಹಾಗೂ ವಿಧನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಂಡಿಸಿದರು.
In Pics : ಪ್ರತೇಕ ಧರ್ಮಕ್ಕಾಗಿ ಬೆಳಗಾವಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ
ಸಮಾವೇಶದಲ್ಲಿ ಲಿಂಗಾಯಿತ ಮಠಗಳ ಸ್ವಾಮೀಜಿಗಳು, ಜೆಡಿಎಸ್ ಹಾಗೂ ಕಾಂಗ್ರೆಸ್ ನ ಶಾಸಕರು, ನಾಯಕರು ಭಾಗವಹಿಸಿದ್ದರು. ವಿಶೇಷವೆನೆಂದರೆ ಬಿಜೆಪಿಯ ನಾಯಕರು ಈ ಸಮಾವೇಶದಿಂದ ದೂರ ಉಳಿದಿದ್ದರು.












Click it and Unblock the Notifications