ರಮೇಶ ಜಾರಕಿಹೊಳಿ ಯಾವುದೇ ಬೇಡಿಕೆ ಇಟ್ಟಿಲ್ಲ: ಸತೀಶ ಜಾರಕಿಹೊಳಿ

Recommended Video

      ಸಹೋದರನ ಫೋನ್‍ಗೂ ಸಿಗದ ರಮೇಶ್ ಜಾರಕಿಹೊಳಿ | Oneindia Kannada

      ಬೆಳಗಾವಿ, ಡಿಸೆಂಬರ್ 26: ಭಿನ್ನಮತ ಶಮನಕ್ಕೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದು, ಶಾಸಕ ರಮೇಶ ಜಾರಕಿಹೊಳಿ ಅವರನ್ನು ಹುಡುಕಿ ಭೇಟಿ ಆಗಬೇಕಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

      ಸುದ್ದಿಗಾರರೊಂದಿಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು ಖಾತೆ ನಿಗದಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದರು.

      ಮೊದಲಿನಿಂದ ರಮೇಶ ಜಾರಕಿಹೊಳಿ ಹಾಗೇ ಇದ್ದಾರೆ. ರಾಜಕೀಯವಾಗಿ ಅವರಿಗೆ ಏನು ಹೇಳಬೇಕು ಎಂದು ಪ್ರಯತ್ನಿಸುತ್ತೇನೆ. ರಮೇಶ ಜಾರಕಿಹೊಳಿಗೆ ಇನ್ನೂ ಫೋನ್ ಮಾಡಿಲ್ಲ, ಸಂಪರ್ಕಿಸಿಲ್ಲ. ಸಂಜೆ ಅವರ ಜತೆ ಮಾತನಾಡುತ್ತೇನೆ. ಸರಿಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದರು.

      Satish jarkiholi spokes with journalists about Ramesh Jarakiholi

      ಆರು ತಿಂಗಳಿಂದ ಬಿಜೆಪಿ ಅವರು ಆಪರೇಷನ್ ಬಗ್ಗೆ ಹೇಳುತ್ತಲೇ ಇದ್ದಾರೆ. ಆದರೆ ನಾವು ಅಸಮಾಧಾನ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇವೆ. ಯಾರೂ ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಶಾಸಕ ರಮೇಶ ಜಾರಕಿಹೊಳಿಗೆ ಯಾವುದೇ ಬೇಡಿಕೆ ಇಲ್ಲ. ನನ್ನ ಮೇಲೆ ಯಾವುದೇ ಮುನಿಸಿಲ್ಲ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+