ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ, ಡಿಸೆಂಬರ್ 22: ಸಚಿವ ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ್ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದರೂ ಕೂಡ ಅವರು ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಸಂಪುಟ ಸೇರಲಿರುವ ಶಾಸಕರು ಅಥವಾ ವಿಸ್ತರಣೆ ಬಗ್ಗೆ ಈವರೆಗೂ ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ ಎಲ್ಲಾ ಊಹಪೋಹಗಳಾಗಿವೆ. ನನ್ನನ್ನು ಈ ಮೊದಲು ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಅವಮಾನವಲ್ಲ, ಏನೇ ಇರಲಿ ಈಗ ರಮೇಶ್ ಜಾರಕಿಹೊಳಿಯನ್ನು ಕೈಬಿಟ್ಟರೂ ನಾವಿಬ್ಬರೂ ಕಾಂಗ್ರೆಸ್‌ಗಾಗಿಯೇ ದುಡಿಯುತ್ತೇವೆ ಎಂದರು ಪ್ರತಿಕ್ರಿಯೆ ನೀಡಿದ್ದಾರೆ.

Ramesh Jarkiholi will not quit the Congress: Satish

ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ, ನಮ್ಮಲ್ಲಿ ಒಗ್ಗಟ್ಟಿದೆ. ಯಾವ ಖಾತೆ ನೀಡುತ್ತಾರೆ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. ಯಾವುದೇ ಖಾತೆ ನೀಡಿದರು ಉತ್ತಮ ಕೆಲಸ ಮಾಡುತ್ತೇವೆ. ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಮಾಡುವ ಖಾತೆ ನೀಡಿದರೆ ಖುಷಿಯಾಗುತ್ತದೆ. ಈಗಿರುವ ಖಾಲಿ ಖಾತೆಯಲ್ಲಿ ಯಾವುದಾದರೂ ಒಂದು ಖಾತೆ ನೀಡುತ್ತಾರೆ ಎಂದು ಊಹಿಸಿದ್ದೇನೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+