ಸಚಿವ ಎಂ.ಬಿ.ಪಾಟೀಲ್ ಪ್ರತಿಕೃತಿಗೆ ಚಪ್ಪಲಿ ಹಾರ
ನವೆಂಬರ್ 11, ಚಿಕ್ಕೋಡಿ : ಪ್ರತ್ಯೇಕ ಧರ್ಮ ಬೇಡಿಕೆ ಇರಿಸಿಕೊಂಡು ಮಾಡಿದ್ದ ಬೃಹತ್ ಲಿಂಗಾಯತರ ಸಮಾವೇಶದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರು ಬಿಜೆಪಿ ಲೋಕಸಭಾ ಸದಸ್ಯ ಪ್ರಭಾಕರ್ ಕೋರೆ ಅವರ ವಿರುದ್ಧ ಲಘುವಾದ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಚಿಕ್ಕೋಡಿಯಲ್ಲಿ ಎಂ.ಬಿ.ಪಾಟೀಲ್ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಯಿತು.
ಚಿಕ್ಕೋಡಿಯ ಪರಟಿ ಲಿಂಗೇಶ್ವರ ಸ್ವಾಮಿ ದೇವಾಲಯದಿಂದ ಪ್ರಾರಂಭಗೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಘೊಷಣೆಗಳನ್ನು ಕೂಗಿದರು ಹಾಗೂ ಚಪ್ಪಲಿ ಹಾರ ಹಾಕಿದ್ದ ಎಂ.ಬಿ.ಪಾಟೀಲ್ ಅವರ ಪ್ರತಿಕೃತಿಯನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಿದರು.

ಪ್ರತಿಭಟನೆಯಲ್ಲಿ ನಿಡಸೋಸಿ ಮಠದ ಪಂಚಮ ಲಿಂಗೇಶ್ವರ ಸ್ವಾಮೀಜಿ ಹಾಗೂ ಇನ್ನು ವಿವಿಧ ಮಠದ ಸ್ವಾಮಿಗಳು ಪಾಲ್ಗೊಂಡಿದ್ದರು. ಜೊತೆಗೆ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ದುರ್ಯೋದನ ಐಹೊಳೆ, ರಾಜು ಕಾಗೆ, ಪಿ.ರಾಜೀವ್ ಭಾಗವಹಿಸಿದ್ದರು.
ಅಂತಿಮವಾಗಿ ಸಚಿವ ಎಂ.ಬಿ.ಪಾಟೀಲ್ ಅವರ ಪ್ರತಿಕೃತಿಯನ್ನು ಧಹಿಸಲಾಯಿತು.












Click it and Unblock the Notifications