ಪತ್ರಕರ್ತ ಡಾ. ವೀರೇಶ್ ಹಿರೇಮಠ ಅಪಘಾತದಲ್ಲಿ ದುರ್ಮರಣ
ಬೆಳಗಾವಿ, ಜನವರಿ 14: ಹಿರಿಯ ಪತ್ರಕರ್ತ ಡಾ. ವೀರೇಶ ಹಿರೇಮಠ ಅವರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಸಂಸಾರ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದ ವೀರೇಶ್ ಅವರು, ಬಾಗಲಕೋಟೆಗೆ ಹಿಂತಿರುಗುವಾಗ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಮೃತರು ಪತ್ನಿ ಗೌರಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.
ವೀರೇಶ್ ಅವರಿದ್ದ ಕಾರು, ಖಾನಪುರ ತಾಲೂಕಿನ ನಂದಗಡ ಬಳಿ ಭಾನುವಾರ ಮುಂಜಾನೆ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ವೀರೇಶ್ ಅವರು ಮೃತಪಟ್ಟಿದ್ದಾರೆ.


ಬಾಗಲಕೋಟೆ ಬಿವಿವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿ ಡಾ ವಿರೇಶ ಹಿರೇಮಠ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಎಂ.ಎ(ಎಂಸಿ ಜೆ), ಪಿಜಿ ಡಿಪ್ಲೋಮಾ, ಪಿಎಚ್ ಡಿ ಪದವಿ ಪಡೆದಿದ್ದ ವೀರೇಶ್ ಅವರು ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿದ್ದರು.












Click it and Unblock the Notifications