ಬೆಳಗಾವಿ: ಇದ್ದಾಗ ಜಗಳವಾಡಿ, ಸತ್ತು ಒಂದಾದ ದಂಪತಿ

ಬೆಳಗಾವಿ, ಜನವರಿ 20: ಸಂಸಾರದಲ್ಲಿನ ಸಣ್ಣ ಮನಸ್ಥಾಪಕ್ಕೆ ನೊಂದು ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಅಂಜಲಿ ರಾಥೋಡ್ (21), ರವಿ ರಾಥೋಡ್ (25) ನೇಣಿಗೆ ಶರಣಾಗಿರುವ ದಂಪತಿ. ಇಬ್ಬರೂ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಯಲಗೂಡ ತಾಂಡಾದವರು, ಬದುಕು ಅರಸಿ ಬೆಳಗಾವಿಗೆ ಬಂದಿದ್ದರು, ಇಬ್ಬರೂ ಗೋಡಂಬಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಮದುವೆಯಾಗಿ ವರ್ಷ ಸಹ ತುಂಬಿರಲಿಲ್ಲ.

ಮೊನ್ನೆ ಗಂಡ-ಹೆಂಡತಿ ಮಧ್ಯೆ ಸಣ್ಣ ಜಗಳವಾಗಿತ್ತು, ಇದರಿಂದ ಮನನೊಂದ ಹೆಂಡತಿ ಅಂಜಲಿ ಪತಿ ಹೊರಗೆ ಹೋಗಿದ್ದಾರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು, ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ತರಲಾಗಿದೆ. ಮಡದಿ ಅಂಜಲಿಯ ಮರಣೋತ್ತರ ಪರೀಕ್ಷೆ ನಡೆಯುವ ಮುಂಚೆಯೇ ರವಿ ಕೂಡ ಅಲತಗಾ ಗ್ರಾಮದ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Newly married couple commit suicide in Belagavi

ಬದುಕಿದ್ದ ಜಗಳವಾಡಿಕೊಂಡಿದ್ದ ದಂಪತಿ ಸತ್ತ ನಂತರ ಆಸ್ಪತ್ರೆಯ ಶವಾಗಾರದಲ್ಲಿ ಪಕ್ಕ-ಪಕ್ಕದಲ್ಲೇ ಮಲಗಿದ್ದರೆಂಬುದು ವಿಪರ್ಯಾಸ. ಘಟನಾ ಸ್ಥಳಕ್ಕೆ ಕಾಕತಿ ಸಿಪಿಐ ರಮೇಶ ಗೋಕಾಕ್ ಭೇಟಿ ಪರಿಶೀಲಿಸಿದ್ದು. , ಘಟನೆ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಣ್ಣನನ್ನೇ ಕೊಂದ ತಮ್ಮ
ಅಣ್ಣ ಬೈದಿದಕ್ಕೆ ಕೋಪಗೊಂಡು ತಮ್ಮ ಆತನ ಜೀವವನ್ನೇ ತೆಗೆದಿರುವ ಘಟನೆ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಡೆದಿದೆ.

ಲೋಕೇಶ್ ಸಾಣಿಕೊಪ್ಪ (21) ತನ್ನ ತಮ್ಮ ಸಂತೋಷ್‌ನನ್ನು ಸಣ್ಣ ವಿಚಾರಕ್ಕೆ ಬೈದಿದ್ದಾನೆ ಇಷ್ಟಕ್ಕೆ ಕೋಪಗೊಂಡ ಸಂತೋಷ್ ಕರಾ ಕುಟ್ಟುವ ಕಲ್ಲಿನಿಂದ ಲೋಕೇಶ್‌ನ ತಲೆಗೆ ಹೊಡೆದು ಕೊಂದಿದ್ದಾನೆ.

Newly married couple commit suicide in Belagavi

ರಾತ್ರಿ ಅಣ್ಣ-ತಮ್ಮಂದಿರಿಬ್ಬರೂ ಟಿವಿ ನೋಡುತ್ತಾ ಕೂತಿದ್ದಾಗ ಲೋಕೇಶ್ ಟಿವಿ ಚಾನೆಲ್ ಬದಲಾಯಿಸುವಂತೆ ತಮ್ಮ ಸಂತೋಷ್‌ಗೆ ಹೇಳಿದ್ದಾನೆ, ಆತ ಆಗುವುದಿಲ್ಲವೆಂದಾಗ, ಕೆಲಸ ಮಾಡದೇ ಅಮ್ಮನ ದುಡ್ಡಲ್ಲಿ ತಿಂದುಕೊಂಡು ತಿರುಗುತ್ತೀಯಾ ಎಂದು ಲೋಕೇಶ್ ಮೂದಲಿಸಿದ್ದಾನೆ ಇಷ್ಟಕ್ಕೆ ಕೋಪಗೊಂಡ ಸಂತೋಷ್ ಅಣ್ಣನ ಜೀವ ತೆಗೆದಿದ್ದಾನೆ.

ಸಂತೋಷ್‌ನನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+