Get Updates
Get notified of breaking news, exclusive insights, and must-see stories!

ನವ ಭಾರತಕ್ಕೆ ಅಗತ್ಯವಿಲ್ಲದ ಕಾರಣ ಎಲ್ಲಾ ಮದರಸಾಗಳನ್ನು ಮುಚ್ಚಬೇಕು: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಬೆಳಗಾವಿ, ಮಾರ್ಚ್ 17: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಪಡೆಯಬೇಕು ಎಂಬ ಹಂಬಲದಲ್ಲಿರುವ ಬಿಜೆಪಿ ಪದೇ ಪದೇ ರಾಷ್ಟ್ರ ಬಿಜೆಪಿ ನಾಯಕರನ್ನು ಪ್ರಚಾರಕ್ಕೆ ಕರೆಸುತ್ತಿದೆ. ಬೇರೆ ಬಿಜೆಪಿ ಆಡಳಿತದ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಸಿ ಇಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದೆ. ಬಿಜೆಪಿ ನಾಯಕರು ಒಟ್ಟಾಗಿ ಕರ್ನಾಟಕದಲ್ಲಿ ಅಧಿಕಾರ ಪಡೆಯಲು ಸಜ್ಜಾಗಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಚುನಾವಣಾ ಕಣದಲ್ಲಿರುವ ರಾಜ್ಯಕ್ಕೆ ಮಾರ್ಚ್ 16, ಗುರುವಾರ ಭೇಟಿ ನೀಡಿದ್ದು ಬೆಳಗಾವಿಯ ಶಿವಾಜಿ ಮಹಾರಾಜ್ ಗಾರ್ಡನ್‌ನಲ್ಲಿ 'ಶಿವ ಚರಿತೆ'ಗಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಈ ವೇಳೆ ಬಾಂಗ್ಲಾದೇಶದ ಜನರು ಈಶಾನ್ಯ ರಾಜ್ಯಕ್ಕೆ ಬಂದು ಅದರ ನಾಗರಿಕತೆ ಮತ್ತು ಸಂಸ್ಕೃತಿಗೆ ಧಕ್ಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

New India Doesnt Need Madrassas: Assam CM In Karnataka

ಈ ಕಾರಣಕ್ಕೆ ತಮ್ಮ ರಾಜ್ಯದಲ್ಲಿ 600 ಮದರಸಾಗಳನ್ನು ಮುಚ್ಚಿದ್ದು, ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಕಟ್ಟಬೇಕಿರುವ ಕಾರಣ ಎಲ್ಲಾ ಮದರಸಾಗಳನ್ನು ಮುಚ್ಚಲು ಉದ್ದೇಶಿಸಿರುವುದಾಗಿ ಮಾಹಿತಿ ನೀಡಿದ್ದಾರೆ. "ನವ ಭಾರತದಲ್ಲಿ" ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳ ಅಗತ್ಯವಿದ್ದು, ಎಲ್ಲಾ ಮದರಸಾಗಳನ್ನು ಮುಚ್ಚಲು ಬಯಸಿರುವುದಾಗಿ ಘೋಷಿಸಿದ್ದಾರೆ.

"ಬಾಂಗ್ಲಾದೇಶದ ಜನರು ಅಸ್ಸಾಂಗೆ ಬರುತ್ತಾರೆ. ಇಲ್ಲಿ ಬಂದು ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಗೆ ಧಕ್ಕೆ ಸೃಷ್ಟಿಸುತ್ತಾರೆ. ನಾನು ಈಗಾಗಲೇ 600 ಮದರಸಾಗಳನ್ನು ಮುಚ್ಚಿದ್ದೇನೆ. ಎಲ್ಲಾ ಮದರಸಾಗಳನ್ನು ಮುಚ್ಚಲು ಉದ್ದೇಶಿಸಿದ್ದೇನೆ. ಏಕೆಂದರೆ ನಮಗೆ ಮದರಸಾಗಳು ಬೇಡ. ನಮಗೆ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಬೇಕು" ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಜಾತ್ಯತೀತ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸಲು, ಅಸ್ಸಾಂ ಸರ್ಕಾರವು 2020 ರಲ್ಲಿ ಎಲ್ಲಾ ಸರ್ಕಾರಿ ಮದರಸಾಗಳನ್ನು ಮುಚ್ಚಲು ಮತ್ತು ಅವುಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸಲು ನಿರ್ಧರಿಸಿತು. ನಂತರ ರಾಜ್ಯ ವಿಧಾನಸಭಾ ಅಸ್ಸಾಂ ರದ್ದತಿ ಕಾಯಿದೆ, 2020 ಅನ್ನು ಅಂಗೀಕರಿಸಿತು. ರಾಜ್ಯಪಾಲರು ಜನವರಿ 27, 2021 ರಂದು ಈ ಕಾನೂನಿಗೆ ಸಹಿ ಹಾಕಿದರು.

New India Doesnt Need Madrassas: Assam CM In Karnataka

ಮುಂದುವರಿದು ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, "ಭಾರತಕ್ಕೆ ಇಂದು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವ್ಯಕ್ತಿಯ ಅಗತ್ಯವಿದೆ. ನಮ್ಮ ದೇಶದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಎಂದು ಹೆಮ್ಮೆಯಿಂದ ಹೇಳುವ ಅನೇಕ ಜನರಿದ್ದಾರೆ. ಅದರಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವ್ಯಕ್ತಿ ನಮಗೆ ಬೇಕಾಗಿದೆ. ಭಾರತಕ್ಕೆ ಇಂದು ಅಂತಹ ವ್ಯಕ್ತಿ ಬೇಕು" ಎಂದು ತಿಳಿಸಿದ್ದಾರೆ.

ಕಳೆದ ವರ್ಷ, ಬಾಂಗ್ಲಾದೇಶದಲ್ಲಿ ಅಲ್ ಖೈದಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಐದು ಜಿಹಾದಿ ಗುಂಪುಗಳನ್ನು ಭೇದಿಸಲಾಗಿದೆ. ಅಸ್ಸಾಂ "ಜಿಹಾದಿ ಚಟುವಟಿಕೆಗಳ" ಕೇಂದ್ರವಾಗಿದೆ. ಗುಪ್ತಚರ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದ ಕನಿಷ್ಠ ಆರು ಎಬಿಟಿ ಸದಸ್ಯರು 2016 ಮತ್ತು 2017 ರ ನಡುವೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ಬಳಿಕ ಭಯೋತ್ಪಾದನಾ ಘಟಕಗಳು ಮತ್ತು ಸ್ಲೀಪರ್ ಸೆಲ್‌ಗಳನ್ನು ಸ್ಥಾಪಿಸಲು ಸ್ಥಳೀಯ ಯುವಕರಿಗೆ "ಜಿಹಾದಿ" ಸಿದ್ಧಾಂತದ ಬಗ್ಗೆ ಕಲಿಸುತ್ತಾರೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.

ಬಳಿಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಾರತದ ಇತಿಹಾಸವು ಮೊಘಲ್ ಚಕ್ರವರ್ತಿಗಳಿಗೆ ಸಂಬಂಧಿಸಿದೆ ಎಂದು ಕಾಂಗ್ರೆಸ್ ಪಕ್ಷವು ತೋರಿಸಿದೆ. ಆ ಪಕ್ಷ ಇಂದು ಹೊಸ ಮೊಘಲರನ್ನು ಪ್ರತಿನಿಧಿಸುತ್ತದೆ. ಒಂದು ಕಾಲದಲ್ಲಿ ದೆಹಲಿಯ ದೊರೆ ದೇವಸ್ಥಾನಗಳನ್ನು ಕೆಡವುವ ಬಗ್ಗೆ ಮಾತನಾಡುತ್ತಿದ್ದರು ಆದರೆ ಇಂದು ಪ್ರಧಾನಿ ಮೋದಿಯವರ ಆಡಳಿತದಲ್ಲಿ ನಾನು ದೇವಾಲಯಗಳನ್ನು ಕಟ್ಟುವ ಬಗ್ಗೆ ಮಾತನಾಡುತ್ತಿದ್ದೇನೆ. ಇದು ನವ ಭಾರತ, ಈ ನವ ಭಾರತವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಭಾರತದ ಇತಿಹಾಸದಲ್ಲಿ ಮೊಘಲರನ್ನು ಎತ್ತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ಅಸ್ಸಾಂ ಮುಖ್ಯಮಂತ್ರಿ, ಭಾರತೀಯ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆಯೂ ಇದೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಭಾರತದ ಇತಿಹಾಸವನ್ನು ಬಾಬರ್, ಔರಂಗಜೇಬ್ ಮತ್ತು ಶಾಜಹಾನ್ ಬಗ್ಗೆ ತೋರಿಸಿದ್ದಾರೆ. ಭಾರತದ ಇತಿಹಾಸವು ಅವರ ಬಗ್ಗೆ ಇರುವುದಲ್ಲ. ಅದು ಛತ್ರಪತಿ ಶಿವಾಜಿ ಮಹಾರಾಜ್, ಗುರು ಗೋವಿಂದ ಸಿಂಗ್ ಅವರ ಬಗ್ಗೆ ಎಂದು ನಾನು ಹೇಳುತ್ತೇನೆ. ಔರಂಗಜೇಬ್ ಆಳ್ವಿಕೆಯಲ್ಲಿ, ವಿವಿಧ ಜನರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ" ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+