ಬೆಳಗಾವಿಯಲ್ಲಿ 40 ಸೇನಾ ಹುದ್ದೆಗೆ ಸೇರಿದ್ದು ಲಕ್ಷಾಂತರ ಆಕಾಂಕ್ಷಿಗಳು

ಬೆಳಗಾವಿ, ಅಕ್ಟೋಬರ್ 31: ಬೆಳಗಾವಿಯಲ್ಲಿ ನಡೆದ ಭಾರತೀಯ ಸೇನಾ rallyಯಲ್ಲಿ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಭಾಗವಹಿಸಿದ್ದರು. ಇದ್ದ 40 ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಸೇರಿದ್ದರು.

ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟರಿ ರೆಜಿಮೆಂಟಲ್ ಸೆಂಟರ್ ನಲ್ಲಿ ಇಂದು ಸೇನಾ ಭರ್ತಿ rally ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಸೇನೆಯಿಂದ ಒಟ್ಟು 40 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಇದ್ದ 40 ಹುದ್ದೆಗಳಿಗೆ ಲಕ್ಷಾಂತರ ಅರ್ಜಿಗಳು ಬಂದಿದ್ದವು. ಹೀಗೆ ಅರ್ಜಿ ಹಾಕಿದ ಲಕ್ಷಾಂತರ ಯುವಕರು ಬೆಳಗಾವಿಗೆ ಬಂದು ಪರದಾಡಿದ ಪ್ರಸಂಗವೂ ನಡೆಯಿತು.

ದೇಶದ 12 ರಾಜ್ಯಗಳಿಂದ ಬೆಳಗಾವಿಗೆ ಆಗಮಿಸಿದ್ದ ಸೇನಾ ಅಭ್ಯರ್ಥಿಗಳು rallyಗೆ ಒಂದು ದಿನ ಮುಂಚೆ ಇಡೀ ರಾತ್ರಿ ಫುಟ್ ಪಾತ್ ಮೇಲೆ ಕಳೆದರು. ಬೆಳಗಾವಿಯ ಕ್ಯಾಂಪ್ ಪ್ರದೇಶದ ಫುಟ್ ಪಾತ್ ಮೇಲೆ ಚಳಿ ಗಾಳಿಯೆನ್ನದೇ ರಾತ್ರಿ ಕಳೆದ ಲಕ್ಷಾಂತರ ಅಭ್ಯರ್ಥಿಗಳು ಕನಿಷ್ಠ ಸೌಲಭ್ಯವಿಲ್ಲದೆ ಪರದಾಡುವಂತಾಯಿತು.

Millions Of Candidates Participated In Indian Army Rally In Belagavi

ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಸೇನಾ ಸಿಬ್ಬಂದಿ ಮತ್ತು ಬೆಳಗಾವಿ ಪೊಲೀಸರು ಹರಸಾಹಸ ಪಡಬೇಕಾಯಿತು. ನೇಮಕಾತಿ ‌ಪ್ರಕ್ರಿಯೆ ವೇಳೆ ನೂಕು ನುಗ್ಗಲು ನಡೆದಿದ್ದರಿಂದ ಪೊಲೀಸರು ಲಾಠಿಯಾಡಿಸಿದ ಪ್ರಸಂಗವೂ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+