ಡಿ.19ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟ

ಬೆಳಗಾವಿ, ಡಿಸೆಂಬರ್ 12: ರಾಜ್ಯ ಸರ್ಕಾರ ಡಿಸೆಂಬರ್ 19ರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಡಿ. 22ರಂದು ಬೆಳಗಾವಿಯಲ್ಲಿ ವಿರಾಟ ಪಂಚಶಕ್ತಿ ಸಮಾವೇಶ ನಡೆಸಲಿದ್ದೇವೆ. ಜೊತೆಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಬೆಳಗಾವಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳು ಡಿಸೆಂಬರ್ 19ರವರೆಗೆ ಗಡುವು ಪಡೆದಿದ್ದಾರೆ. ಅಷ್ಟರೊಳಗೆ ಬಹುಬೇಡಿಕೆಯ 2ಎ ಮೀಸಲಾತಿ ನೀಡಬೇಕು. ನೀಡಿದರೆ ಮುಖ್ಯಮಂತ್ರಿಗಳಿಗೆ ಸನ್ಮಾನ ಇಲ್ಲವಾದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದರು.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಳಿ ಅಧಿವೇಶ ಆರಂಭವಾಗುವುದರೊಳಗೆ (ಡಿ.19ರೊಳಗೆ) ಪಂಚಾಮಸಾಲಿ ಸಮಾಜದ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್ 24ರಂದು ಮಾತು ಕೊಟ್ಟಿದ್ದರು. ಆ ಬಗ್ಗೆ ಸರ್ಕಾರಕ್ಕೆ ನೆನಪಿಸಲು ರಾಜ್ಯ ಕಾರ್ಯಕಾರಿಣಿ ಸಭೆ ಮಾಡುತ್ತಿದ್ದೇವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಸಭೆ ಆಗಿದೆ. ನಿಗದಿ ಸಮಯದೊಳಗೆ ಬೇಡಿಕೆ ಈಡೇರದಿದ್ದರೆ 'ಮಾಡು ಇಲ್ಲವೇ

Massive protest if 2A reservation is not given to Panchamasali Community by Dec. 19

ನಾಡಿನ ದೊಡ್ಡ ಸಮುದಾಯದಲ್ಲಿ ಒಂದಾಗಿರುವ ಪಂಚಮಸಾಲಿ ಸಮುದಾಯದವರ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಪಾದಯಾತ್ರೆ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಬೆಳಗಾವಿಯಿಂದಲೇ 10 ಲಕ್ಷ ಜನ ಬರಲು ಸೂಚಿಸಿದ್ದೇವೆ ಎಂದು ಸ್ವಾಮೀಜಿ ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ?

ವರ್ಷಗಳಿಂದಲೂ ಪಂಚಮಸಾಲಿ ಸಮುದಾಯದ ಮುಖಂಡರು ತಮ್ಮ ಸಮಾಜವನ್ನು 2ಎಗೆ ಸೇರಿಸುವಂತೆ ಆಗ್ರಹಿಸಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅನೇಕ ಮನವಿ ಸಲ್ಲಿಸಿದರೂ ಪ್ರಯೋಜನವಾಗಿದ್ದಾಗ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಿಂದ ಬೆಂಗಳೂರಿಗೆ ಪಾದಯಾತ್ರೆ ಸಹ ನಡೆಸಿದ್ದರು. ಇಷ್ಟಾದರೂ ಸರ್ಕಾರ ಭರವಸೆ ನೀಡಿದ್ದರು ಸಮುದಾಯ ಮುಖಂಡರು ಸ್ವಾಮೀಜಿಗಳು ಸುಮ್ಮನಾಗಿದ್ದರು. ಇದೀಗ ಕೊನೆಯ ಗಡುವು ನೀಡಲಾಗಿದ್ದು, ಎಸ್‌ಸಿ, ಎಸ್‌ಟಿ ಯವರಿಗೆ ಬೇಡಿಕೆಯಂತೆ ಮೀಸಲಾತಿ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಚಳಿಗಾಲ ಅಧಿವೇಶನ ವೇಳೆ ಇಕ್ಕಟ್ಟಿಗೆ ಸಿಲುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+