ಸವದಿ ಕುರಿತು 'ವಿಷ ನೀಡಿದರೂ ಅಮೃತವಾಗಲಿ' ಎಂದಿದ್ಯಾಕೆ ಕುಮಟಳ್ಳಿ?

Recommended Video

      ಮಹೇಶ್ ಕುಮಟಳ್ಳಿ ಬಗ್ಗೆ ಸವದಿ ಕಿಡಿನುಡಿ

      ಬೆಳಗಾವಿ, ಸೆಪ್ಟೆಂಬರ್ 27: ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಅಥಣಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಲಕ್ಷ್ಮಣ ಸವದಿ ಅವಾಚ್ಯ ಶಬ್ದಗಳನ್ನು ಬಳಸಿದ್ದ ವಿಡಿಯೋ ವೈರಲ್ ಆಗಿದ್ದು, ಅದಕ್ಕೆ ಮಹೇಶ್ ಕುಮಟಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.

      ಇಂದು ಬೆಳಿಗ್ಗೆ ಸಂತ್ರಸ್ತರ ಅಳಲು ಕೇಳಲೆಂದು ಪ್ರವಾಹ ಪೀಡಿತ ಗ್ರಾಮಗಳಿಗೆ ತಮ್ಮ ಬೆಂಬಲಿಗರ ಜೊತೆ ಹೊರಟಿದ್ದ ಲಕ್ಷ್ಮಣ ಸವದಿ, ಮೊಬೈಲ್ ನಲ್ಲಿ ಮಾತನಾಡುತ್ತಾ "ಕುಮಟಳ್ಳಿಯಂಥ ದರಿದ್ರ ಮಕ್ಕಳ ಹೆಸರು ನೆನಪಿಸಬೇಡಿ, ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ" ಎಂದು ಮಾತಾಡಿದ್ದರು.

      Mahesh Kumtalli Reacts To The Statement Of Lakshmana Savadi

      ಸವದಿ ಮಾತಾಡಿದ್ದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮಹೇಶ್ ಕುಮಟಳ್ಳಿ, "ಅವರು ಆ ರೀತಿ ಮಾತಾಡಬಾರದಾಗಿತ್ತು. ನನಗೆ ಯಾರೇ ವಿಷ ನೀಡಿದರೂ ಅದು ಅಮೃತವಾಗಲಿ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ನನಗೆ ಅರ್ಥವಾಗಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+