ಮಹದಾಯಿ ವಿಚಾರ ಶೀಘ್ರ ಇತ್ಯರ್ಥಗೊಳ್ಳಬೇಕು: ಗೋವಾ ಸಂಸದ

ಬೆಳಗಾವಿ, ಜನವರಿ 01: ಗೋವಾದ ಸಂಸದರೊಬ್ಬರು ಮಹದಾಯಿ ವಿಚಾರವಾಗಿ ಸಕಾರಾತ್ಮಕವಾಗಿ ಮಾತನಾಡಿದ್ದು, ಮಹದಾಯಿ ವಿಚಾರವಾಗಿ ನಕಾರಾತ್ಮಕ ಅಂಶಗಳನ್ನೇ ಗೋವಾ ಜನಪ್ರತಿನಿಧಿಗಳಿಂದ ಕೇಳಿದ್ದ ಕನ್ನಡಿಗರಿಗೆ ಇವರ ಮಾತು ಆಶಾಭಾವ ಮೂಡಿಸಿದೆ.

ಉತ್ತರ ಗೋವಾ ಸಂಸದ, ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರು ಮಹದಾಯಿ ಕುಡಿಯುವ ನೀರಿನ ವಿವಾದ ಆದಷ್ಟು ಬೇಗ ಬಗೆಹರಿಯಬೇಕು ಎಂದು ಆಶಿಸಿದ್ದಾರೆ. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು ಗೋವಾ-ಕರ್ನಾಟಕ ನೆರೆ-ಹೊರೆ ರಾಜ್ಯಗಳು ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳಬೇಕು ಎಂದಿದ್ದಾರೆ.

Mahadayi issue should be solved quickly :Shripad Naik

ಚರ್ಚೆಯ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಬಗ್ಗೆ ಉತ್ಸುಕತೆ ಇರುವ ಹಾಗೆ ಮಾತನಾಡಿದ ಅವರು 'ಮಹದಾಯಿ ವಿವಾದ ಇಷ್ಟೊಂದು ಮುಂದೆ ಹೋಗಬಾರದಿತ್ತು. ನಮಗೆ ಎದುರಾಗುವ ಸಂಕಷ್ಟಗಳನ್ನು ಒಟ್ಟಾಗಿ ಬಗೆ ಹರಿಸಿಕೊಳ್ಳಬೇಕು. ಮಹದಾಯಿ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಬೇಕು' ಎಂದಿದ್ದಾರೆ.

ನ್ಯಾಯಾಧೀಕರಣದ ಒಳೆಗೆ ಅಥವಾ ಹೊರಗೆ ವಿವಾದ ಇತ್ಯರ್ಥವಾಗಬೇಕು. ಕುಡಿಯುವ ನೀರಿನ ವಿಚಾರ ಮಾನವೀಯತೆ ಆಧಾರದ ಮೇಲೆ ಬಗೆಹರಿಯಬೇಕು ಎಂದು ಕೇಂದ್ರ ಸಚಿವ ಶ್ರೀಪಾದ ನಾಯಕ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+